ಮೋದಿ ತೀರಿಕೊಂಡ್ರೆ ಯಾರೂ ಪಿಎಂ ಆಗೋದೇ ಇಲ್ವಾ? – ನಾಲಿಗೆ ಹರಿಬಿಟ್ಟ `ಕೈ’ ಶಾಸಕ ರಾಜು ಕಾಗೆ!

Public TV
1 Min Read

– ಇಲ್ಲಿ ಕಾಂಗ್ರೆಸ್‌ ಬೇಕು, ಕೇಂದ್ರದಲ್ಲಿ ಮೋದಿನೇ ಬೇಕು ಅಂತಾರೆ ಎಂದ ಶಾಸಕ

ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ (PM Modi) ತೀರಿಕೊಂಡರೆ ದೇಶದಲ್ಲಿ ಮುಂದೆ ಯಾರೂ ಪ್ರಧಾನಿ ಆಗೋದೇ ಇಲ್ವಾ ಎಂದು ಹೇಳುವ ಮೂಲಕ ಕಾಂಗ್ರೆಸ್ ಹಿರಿಯ ಶಾಸಕ ರಾಜು ಕಾಗೆ (Raju Kage) ನಾಲಿಗೆ ಹರಿಬಿಟ್ಟಿದ್ದಾರೆ.

ಬೆಳಗಾವಿಯ (Belagavi) ಕಾಗವಾಡ ತಾಲೂಕಿನ ಮಮದಾಪೂರ ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರ (Election Campaign) ಸಭೆಯನ್ನುದ್ದೇಶಿಸಿ ಮಾತನಾಡುವ ವೇಳೆ ಮೋದಿ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ. ಮೋದಿ ತೀರಿಕೊಂಡರೆ ಈ ದೇಶದಲ್ಲಿ ಮುಂದೆ ಪ್ರಧಾನಿ ಆಗೋದೇ ಇಲ್ಲವಾ? ಮೊದಿ ತೀರಿಕೊಂಡರೆ 140 ಕೊಟಿ ಜನಸಂಖ್ಯೆಯಲ್ಲಿ ಪ್ರಧಾನಿ ಅಭ್ಯರ್ಥಿಯೇ ಇಲ್ವಾ? ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಫ್ರೀ ಫ್ರೀ ಫ್ರೀ; ಟಿಡಿಪಿ ಗೆದ್ದರೇ ಫ್ರೀ ಸೈಟ್‌, ಮಹಿಳೆಯರಿಗೆ ಫ್ರೀ ಬಸ್‌, 3 ಎಲ್‌ಪಿಜಿ ಸಿಲಿಂಡರ್‌ ಫ್ರೀ – NDA ಗ್ಯಾರಂಟಿ

ಈಗಿನ ಯುವಕರು ಮೋದಿ ಮೋದಿ ಅನ್ನುತ್ತಾರೆ, ಮೋದಿನ ತೆಗೆದುಕೊಂಡು ನೆಕ್ಕುತ್ತೀರಾ? ರಾಜ್ಯದಲ್ಲಿ ಮತದಾರುರು ಕಾಂಗ್ರೆಸ್ ಸರ್ಕಾರ ಬೇಕು ಅಂತಾರೆ, ಆದ್ರೆ ಕೇಂದ್ರದಲ್ಲಿ ಮೋದಿನೇ ಬರಬೇಕು ಅಂತಾರೆ. ಮೋದಿ ಇಲ್ಲಿ ಬಂದು ನೋಡುತ್ತಾರಾ? ಇಲ್ಲಿ ಏನಾದರೂ ಸಮಸ್ಯೆ ಆದರೆ ಮೋದಿ ಬರುವುದಿಲ್ಲ. ಇಲ್ಲಿ ನಾವೇ ನಿಮ್ಮ ಸಮಸ್ಯೆ ಆಲಿಸಬೇಕು. ನರೇಂದ್ರ ಮೋದಿ ಅವರು 3,000 ಕೋಟಿ ವಿಮಾನದಲ್ಲಿ ಓಡಾಡ್ತಾರೆ, 4 ಲಕ್ಷ ರೂಪಾಯಿ ಸೂಟ್ ಹಾಕಿಕೊಳ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದೇ ವೇಳೆ ನಾನೂ ವಿದ್ಯಾವಂತ ಇದ್ದೀನಿ, ನನಗೂ ಬುದ್ಧಿ ಇದೆ, ನಾನೇನು ಕುರಿ ಅಲ್ಲ. ನಾನು ಸಹ ಈ ದೇಶವನ್ನ ಸಮರ್ಥವಾಗಿ ಮುನ್ನಡೆಸುತ್ತೇನೆ ಎನ್ನುವ ಆತ್ಮವಿಶ್ವಾಸ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ತಾನು ಪ್ರೀತಿಸುತ್ತಿದ್ದ ಯುವತಿಗೆ ಮೆಸೇಜ್ ಮಾಡಿದ್ದಕ್ಕೆ ಸ್ನೇಹಿತನ ಮೇಲೆ ಮಾರಣಾಂತಿಕ ಹಲ್ಲೆ!

Share This Article