ಬಾಗಲಕೋಟೆ: ಮುಂದಿನ ಸಿಎಂ ಸತೀಶಣ್ಣನೇ (Satish Jarkiholi) ಆಗ್ಲಿ ಎಂದು ಬಿಜೆಪಿ (BJP) ಮಾಜಿ ಸಚಿವ ರಾಜು ಗೌಡ (Raju Gowda) ಸಚಿವ ಸತೀಶ್ ಜಾರಕಿಹೊಳಿ ಪರ ಬ್ಯಾಟ್ ಬೀಸಿದ್ದಾರೆ.
ಮುಧೋಳ ನಗರದಲ್ಲಿ ವೀರ ಜಡಗಣ್ಣ ಬಾಲಣ್ಣ ಅವರ ಕಂಚಿನ ಪುತ್ಥಳಿ ಅನಾವರಣ ಮಾಡಿ ಅವರು ಮಾತನಾಡಿದರು. ಈ ವೇಳೆ, ಸ್ವತಂತ್ರ ವೀರ ಯೋಧ ಜಡಗಣ್ಣ ಬಾಲಣ್ಣಗೆ ಜಾರಕಿಹೊಳಿಯವರನ್ನು ಹೋಲಿಸಿ, ಹಾಡಿ ಹೊಗಳಿದ್ದಾರೆ. ನಮ್ಮ ಸಮಾಜಕ್ಕೆ ಸತೀಶಣ್ಣ (ಸತೀಶ್ ಜಾರಕಿಹೊಳಿ) ಜಡಗಣ್ಣ ಬಾಲಣ್ಣ ಇದ್ದಂತೆ. ಮಾತು ಕಡಿಮೆ ಆದ್ರೆ ಪ್ಲ್ಯಾನ್ ಹಾಕಿದ್ರೆ ಕರೆಕ್ಟ್ ಏಟು ಹಾಕ್ತಾನೆ ನಮ್ಮಣ್ಣ. ವೀರ ಯೋಧ ಜಡಗಣ್ಣ ಬಾಲಣ್ಣ ಅವ್ರು ಬ್ರಿಟೀಷರ ಎದುರು ಶಸ್ತ್ರತ್ಯಾಗ ಮಾಡಿರಲಿಲ್ಲ. ನೀನು ಶಸ್ತ್ರ ತ್ಯಾಗ ಮಾಡಬೇಡ ಎಂದಿದ್ದಾರೆ. ಇದನ್ನೂ ಓದಿ: ಪಕ್ಷ ನಿಷ್ಠೆಗೆ ಫಲ ಸಿಗಲಿದೆ ತಾಳ್ಮೆಯಿಂದಿರಿ – ಡಿಕೆಶಿಗೆ ಖರ್ಗೆ ಅಭಯ, 1 ಗಂಟೆಗೂ ಹೆಚ್ಚುಕಾಲ ಮಾತುಕತೆ
ಈ ಬಾರಿ ನನಗೆ ಮುಖ್ಯಮಂತ್ರಿ ಆಸೆ ಇಲ್ಲ, ಮುಂದಿನ ಸಾರಿ ಆಗ್ತೇನೆ ಎಂದು ಹೇಳುತ್ತಿದ್ದೀಯ. ಅದೆಲ್ಲ ಬೇಡ ಇದೇ ಡಿಸೆಂಬರ್‍ನಲ್ಲಿ ಮುಖ್ಯಮಂತ್ರಿ ಆಗು. ನಿಮ್ಮನ್ನು ಮುಖ್ಯಮಂತ್ರಿ ಆಗಿ ನೋಡಬೇಕೆಂಬ ಆಸೆ ನಮ್ಮದು. ನಾವು ನಿಮ್ಮ ರಕ್ತವನ್ನೇ ಹಂಚಕೊಂಡು ಹುಟ್ಟೀವಿ, ನಾವೇನು ಹಗುರಿಲ್ಲ ಸುರಪುರ ಬ್ಯಾಡ್ರು. ಹಿಂದೆ ಬ್ರಿಟೀಷರನ್ನೂ ಬಿಟ್ಟಿಲ್ಲ, ಔರಂಗಜೇಬನನ್ನೂ ಬಿಟ್ಟಿಲ್ಲ ಎಂದಿದ್ದಾರೆ.
2028ಕ್ಕೆ (ಕಾಂಗ್ರೆಸ್) ನೀವು ಬರಲ್ಲ, ನಾವು (ಬಿಜೆಪಿ) ಬರುತ್ತೇವೆ, ನಿಮಗೆ ಬಿಟ್ಟುಕೊಡಲ್ಲ. ಈಗ ಆದ್ರೆ ನಮ್ಮ ಆಸೆ ಈಡೇರುತ್ತೆ. ನಿಮ್ಮ ಆಸೆನೂ ಈಡೇರುತ್ತೆ ಎಂದಿದ್ದಾರೆ. ಇದನ್ನೂ ಓದಿ: 24 ಗಂಟೆಯಲ್ಲಿ 300 ನಕ್ಸಲರ ಶರಣಾಗತಿ – ಭಯೋತ್ಪಾದನೆ ಮುಕ್ತ ಪ್ರದೇಶಗಳಲ್ಲಿ ಈ ಬಾರಿ ಶಾಂತಿಯ ದೀಪಾವಳಿ: ಮೋದಿ