ಸಿದ್ದರಾಮಯ್ಯನವರಿಗೆ ಮತಿಭ್ರಮಣೆ ಆಗಿದೆ: ತೇಲ್ಕೂರ್

Public TV
1 Min Read

ಕಲಬುರಗಿ: ಇತ್ತೀಚೆಗೆ ಎಲ್ಲಡೆ ಆರ್‌ಎಸ್‌ಎಸ್‌ ಬಗ್ಗೆ ಹಗುರವಾಗಿ ಹಾಗೂ ಪ್ರಧಾನಿಗಳ ಬಗ್ಗೆ ಏಕ ವಚನದಲ್ಲಿ ಮಾತನಾಡುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತಿಭ್ರಮಣೆ ಆಗಿದೆ. ಅವರು ಅಧಿಕಾರವಿಲ್ಲದೇ ಹುಚ್ಚರಂತೆ ವರ್ತಿಸುತ್ತಿದ್ದಾರೆ ಅವರನ್ನು ಕೂಡಲೇ ಹುಚ್ಚಾಸ್ಪತ್ರೆಗೆ ಸೇರಿಸುವುದು ಉತ್ತಮ ಎಂದು ಸೇಡಂ ಶಾಸಕ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜ್‍ಕುಮಾರ್ ಪಾಟೀಲ್ ತೇಲ್ಕೂರ್ ವಾಗ್ದಾಳಿ ನಡೆಸಿದ್ದಾರೆ.

ಪತ್ರಿಕಾ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿಯ ದೃಷ್ಟಿಯಿಂದ ಸಂಸತ್ತಿನಲ್ಲಿ ಹಲವಾರು ವಿಧೇಯಕಗಳ ಬಗ್ಗೆ ಚರ್ಚೆ ಆಗುವ ಸಮಯದಲ್ಲಿ ಕಾಂಗ್ರೆಸ್‍ನವರು ಪ್ರತಿಭಟನೆ ಮಾಡುವುದು, ಸಭಾತ್ಯಾಗ ಮಾಡುವುದು ರೂಢಿಯಾಗಿದೆ. ಅವರಿಗೆ ಅಭಿವೃದ್ಧಿ ಬೇಕಾಗಿಲ್ಲ. ಏನೇ ಮಾಡಿದರೂ ಕೂಡ ಅದಕ್ಕೆ ವಿರೋಧ ವ್ಯಕ್ತಪಡಿಸುವುದು ಅವರ ಅಜೆಂಡಾ ಆಗಿ ಬಿಟ್ಟಿದೆ. ಅಲ್ಲದೇ ಎಲ್ಲಡೆ ದೇಶದ ಒಬ್ಬ ಪ್ರಧಾನಮಂತ್ರಿಗಳ ಬಗ್ಗೆ ಏಕ ವಚನದಲ್ಲಿ ಮಾತನಾಡುವುದನ್ನು ಬಿಡಬೇಕು, ಹೀಗೆ ಮುಂದುವರಿಸಿದರೆ ಸಿದ್ದರಾಮಯ್ಯ ಸೇರಿದಂತೆ ಕೈ ನಾಯಕರ ಕಾರ್ಯಕ್ರಮಗಳಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಭಾರತ ದೇಶದ ಹಿಂದುತ್ವದ ಸಂಕೇತ ಕೇಸರಿ – ಸಿದ್ದರಾಮಯ್ಯಗೆ ಮುನಿರತ್ನ ಟಾಂಗ್

ಪ್ರಸ್ತುತ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಎಲ್ಲರೂ ಕಾಂಗ್ರೆಸ್ ಪಕ್ಷವನ್ನು ಕೈ ಬಿಟ್ಟಿದ್ದು, ಕೇವಲ ತುಷ್ಟೀಕರಣದ ರಾಜಕಾರಣಗೋಸ್ಕರ ಹಾಗೂ ಅಧಿಕಾರಗೋಸ್ಕರ ಈ ರೀತಿಯ ಮಾತನಾಡುತ್ತಿದ್ದಾರೆ. ಒಂದು ಕಡೆ ಒಂದು ಹೇಳಿಕೆ ಕೊಟ್ಟರೆ ಇನ್ನೊಂದು ಕಡೆ ಮತ್ತೊಂದು ಹೇಳಿಕೆ ಕೊಡುತ್ತಿದ್ದಾರೆ. ಕಾಂಗ್ರೆಸ್‍ನವರು ನೈತಿಕತೆ ಕಳೆದುಕೊಂಡಿದ್ದಾರೆ ಎಂಬುದಕ್ಕೆ ಉದಾಹರಣೆ ಲೋಕಸಭೆಯ ಕಲಾಪಗಳಾಗಿವೆ ಎಂದರು. ಇದನ್ನೂ ಓದಿ: 2023 ರಲ್ಲಿ ಜೆಡಿಎಸ್ ಏಕಾಂಗಿಯಾಗಿ ಅಧಿಕಾರಕ್ಕೆ ಬರುತ್ತೆ, ಇದು ದೈವದ ಆಟ: ಶರವಣ

Share This Article
Leave a Comment

Leave a Reply

Your email address will not be published. Required fields are marked *