ಪುನೀತ್ ಅಗಲಿ 1 ತಿಂಗಳು – ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ ದೊಡ್ಮನೆ ಕುಟುಂಬ

Public TV
2 Min Read

ಬೆಂಗಳೂರು: ಕರುನಾಡ ಜನಮನದೊಳಗೆ ಶಾಶ್ವತವಾಗಿ ನೆಲೆಸಿರುವ ಅಪ್ಪು ಮರೆಯಾಗಿ ಇಂದಿಗೆ ಒಂದು ತಿಂಗಳು. ದೊಡ್ಮನೆ ಪ್ರೀತಿಯ ಕುಡಿಯನ್ನು ಕಳೆದುಕೊಂಡ ಕರುನಾಡಿನ ರೋಧನೆ ಇನ್ನೂ ನಿಂತಿಲ್ಲ. ಅದಾಗಲೇ ಒಂದು ಮಾಸ ಕಳೆದೋಗಿದೆ. ಆಗುವ ಕಾರ್ಯ ಮಾಡಬೇಕಿರುವ ಕಾರಣ ದೊಡ್ಮನೆ ಕುಟುಂಬ ಪ್ರೀತಿಯ ಅಪ್ಪುವಿನ ತಿಂಗಳ ಪೂಜೆಯನ್ನು ಅಪ್ಪು ಸಮಾಧಿಗೆ ತೆರಳಿ ನೆರವೇರಿಸಿದೆ.

ದೊಡ್ಮನೆ ಕುಟುಂಬಸ್ಥರು ಕಂಠೀರವ ಸ್ಟುಡಿಯೋಗೆ ತೆರಳಿ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ. ನಂತರ ಸದಾಶಿವನಗರ ಅಪ್ಪು ನಿವಾಸದಲ್ಲಿ ತಿಂಗಳ ಪೂಜೆ ನಡೆಯಲಿದೆ. ಅಪ್ಪು ಸಮಾಧಿ ಪೂಜೆಯನ್ನು ಅಶ್ವಿನಿ, ಶಿವಣ್ಣ, ಗೀತಾ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ವಿನಯ್ ರಾಜ್ ಕುಮಾರ್ ಸೇರಿ ಕುಟುಂಬಸ್ಥರು ಪೂಜೆ ಸಲ್ಲಿಸಿದರು. ಇದನ್ನೂ ಓದಿ: ಪುನೀತ್ ಅಗಲಿ ಇಂದಿಗೆ ಒಂದು ತಿಂಗಳು – ದೊಡ್ಮನೆಯಲ್ಲಿ ವಿಶೇಷ ಪೂಜೆ

ಪೊಜೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್, ಪುನೀತ್ ಅಗಲಿ ನಮ್ಮನ್ನು ಅಗಲಿ ಒಂದು ತಿಂಗಳು ಅಯ್ತು. ಒಂದು ತಿಂಗಳ ಪೂಜೆಯನ್ನು ಸಮಾಧಿ ಬಳಿ ಸಲ್ಲಿಸಿದ್ದೇವೆ. ಮನೆಗೆ ಹೋಗಿ ಈಗ ಪುನೀತ್ ಪೋಟೋಗೆ ಕುಟುಂಬದವರು ಸೇರಿ ಪೊಜೆ ಸಲ್ಲಿಸುತ್ತೇವೆ. ಇವತ್ತು ಯಾವುದೇ ಹಬ್ಬದ ರೀತಿಯಲ್ಲಿ ಆಚರಣೆ ಮಾಡುತ್ತಿಲ್ಲ. ಸಾಂಬ್ರಾಣಿಯನ್ನು ಹಾಕಿ ಪೊಜೆ ಸಲ್ಲಿಸಿದ್ದೇವೆ. ಒಂದು ವರ್ಷದ ಕಾರ್ಯವನ್ನು ಎಲ್ಲರನ್ನು ಕರೆದು ಮಾಡುತ್ತೇವೆ ಎಂದರು. ಇದನ್ನೂ ಓದಿ: ಕೋಟ್ಯಂತರ ದುಡ್ಡು, ಕಾರು ಇದ್ರೂ ಅಪ್ಪುಗೆ 5 ನಿಮಿಷ ಸಿಗಲಿಲ್ಲ: ರಾಘಣ್ಣ

ಅವನು ಸಾಮಾಜಿಕ ಕಳಕಳಿಯ ಏನ್ ಕೆಲಸ ಮಾಡ್ತಿದ್ದ ಅದನ್ನು ಮುಂದುವರೆಸುತ್ತೇವೆ. ಅವನೇ ದಾರಿ ತೊರಿಸಬೇಕು. ಏನೇ ಮಾಡಿದ್ರು ಯಾರಿಗೂ ಗೊತ್ತಾಗಬಾರದು. ಕೆಲವೊಂದು ವಿಚಾರ ಅವನ ಜೊತೆ ಮಣ್ಣಾಗ ಬೇಕೆಂದು ಅಂದು ಕೊಂಡಿದ್ದ ಅದ್ಯಾವುದು ಹೇಳಿಲ್ಲ. ಪಿಆರ್‌ಕೆ ಪ್ರಾಜೆಕ್ಟ್ ಗಂಧದಗುಡಿ ವಿಚಾರ. ವೈಲ್ಡ್ ಲೈಫ್, ಕಾಡಿನ ಮಹತ್ವದ ಬಗ್ಗೆ ಒಳ್ಳೆ ಭಾವನೆಯಿಂದ ಮೂಡಿ ಬರುತ್ತಿರುವ ಡಾಕ್ಯೂಮೆಂಟರಿ ಅತಿಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಅದೊಂದು ಕೊನೆ ಆಸ್ತಿ ಬಿಟ್ಟು ಹೊಗಿದ್ದಾನೆ. ಸಿನಿಮಾ ಸಂದೇಶ ಎಲ್ಲರಿಗೂ ಅನ್ವಯಿಸುತ್ತದೆ ಎಂದು ನುಡಿದರು. ಇದನ್ನೂ ಓದಿ: ಸ್ಯಾಂಡಲ್‍ವುಡ್ ಕ್ವೀನ್‍ಗೆ ಬರ್ತ್‍ಡೇ ಸಂಭ್ರಮ – 40ನೇ ವಸಂತಕ್ಕೆ ಕಾಲಿಟ್ಟ ರಮ್ಯಾ

ಅಭಿಮಾನಿಗಳೂ ಕೂಡ ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಸಮಾಧಿ ದರ್ಶನಕ್ಕೆ ಆಗಮಿಸುತ್ತಿದ್ದಾರೆ. 9 ಗಂಟೆಯ ಬಳಿಕ ಅಭಿಮನಿಗಳಿಗೂ ಸಮಾಧಿ ದರ್ಶನ ಭಾಗ್ಯ ಕಲ್ಪಿಸಿಕೊಡಲಾಗಿದೆ. ಹಾಗೆ ಅಪ್ಪುವನ್ನು ಕಳೆದುಕೊಂಡ ಈ ದಿನವನ್ನು ಇಡೀ ಕರುನಾಡು ಕರಾಳ ದಿನವನ್ನಾಗಿ ಮಾಡಿಕೊಂಡು ಶಪಿಸುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *