ರಾಜಕಾಲುವೆ ಒತ್ತುವರಿ – ನಲಪಾಡ್ ಅಕಾಡೆಮಿಗೆ ಬಿಗ್ ರಿಲೀಫ್

Public TV
2 Min Read

ಬೆಂಗಳೂರು: ರಾಜಕಾಲುವೆ ಒತ್ತುವರಿ (Rajkaluve Occupy) ತೆರವಿಗೆ ಬಿಬಿಎಂಪಿ ಕೈಗೊಂಡಿರುವ `ಆಪರೇಷನ್ ಬುಲ್ಡೋಜರ್’ (Operation Bulldozer)ಆರಂಭದಲ್ಲೇ ವಿಘ್ನ ಉಂಟಾಗಿದೆ. ಚಲ್ಲಘಟ್ಟದಲ್ಲಿ ರಾಜಕಾಲುವೆ ಒತ್ತುವರಿ ತೆರವು ಪ್ರಕರಣದಲ್ಲಿ ನಲಪಾಡ್ ಅಕಾಡೆಮಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಅಕಾಡೆಮಿ ತೆರವುಗಳಿಸುವ ಕಾರ್ಯಕ್ಕೆ ಬ್ರೇಕ್ ಬಿದ್ದಿದೆ.

ನಲಪಾಡ್ ಅಕಾಡೆಮಿ (Nalapad Academy) ಒತ್ತುವರಿ ತೆರವುಗೊಳಿಸುವ ವಿಚಾರದಲ್ಲಿ ವಾರದ ಮಟ್ಟಿಗೆ ಪಡೆದಿದ್ದ ಹೈಕೋರ್ಟ್ ತಡೆಯಾಜ್ಞೆ ಸೆಪ್ಟೆಂಬರ್ 23ರ ವರೆಗೂ ವಿಸ್ತರಣೆಯಾಗಿದೆ. ಹೈಕೋರ್ಟ್ (Karnataka HighCourt) ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರಿದ್ದ ಏಕಸದಸ್ಯ ಪೀಠವು ಸೆಪ್ಟೆಂಬರ್ 23ರ ವರೆಗೂ ತಡೆಯಾಜ್ಞೆ ವಿಸ್ತರಿಸಿ ಆದೇಶ ಹೊರಡಿಸಿದೆ. ಇದನ್ನೂ ಓದಿ: ಪಬ್ಲಿಕ್‌ ಟಿವಿ ಇಂಪ್ಯಾಕ್ಟ್‌ – ನಲಪಾಡ್‌ ಅಕಾಡೆಮಿಗೆ ಜೆಸಿಬಿ ಗುನ್ನಾ!

ಹಿನ್ನೆಲೆ ಏನು?
ಚಲ್ಲಘಟ್ಟದ ಎಂಬೆಸಿ ಗಾಲ್ಫ್ ಲಿಂಕ್ ಬಿಸಿನೆಸ್ ಪಾರ್ಕ್ ಬಳಿ ನಲಪಾಡ್ ಅಕಾಡೆಮಿ ಸ್ಥಾಪನೆಯಾಗಿದೆ. ಒತ್ತುವರಿ ಮಾಡಿ ಅಕಾಡೆಮಿಯ ಕಾಪೌಂಡ್ ಕಟ್ಟಿದ ಹಿನ್ನೆಲೆಯಲ್ಲಿ ಮಂಗಳವಾರ ಜೆಸಿಬಿ ಜೊತೆ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದರು. ಜೆಸಿಬಿ ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆ ಶಾಂತಿನಗರದ ಕಾಂಗ್ರೆಸ್ ಶಾಸಕ ಹ್ಯಾರಿಸ್ (MLA Haris) ಅವರ ಪಿಎ, ನೋಟಿಸ್ ನೀಡಿಲ್ಲ. ಹೇಗೆ ತೆರವು ಮಾಡುತ್ತೀರಾ ಎಂದು ಅವಾಜ್ ಹಾಕಿದ್ದರು ಜೆಸಿಬಿ (JCB) ಕಾರ್ಯಾಚರಣೆ ನಡೆಸುತ್ತಿದ್ದಂತೆ ಸ್ಥಗಿತಕ್ಕೆ ಸೂಚನೆ ನೀಡಿದರು. ಬಿಬಿಎಂಪಿ (BBMP) ಅಧಿಕಾರಿಗಳಿಗೆ ಗೇಟು ತೆಗೆಯಲು ಕೂಡ ಅವಕಾಶ ಕೊಡಲಿಲ್ಲ. ಹೀಗಾಗಿ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಇದನ್ನೂ ಓದಿ: 

ಕಾರ್ಯಾಚರಣೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ (Public TV) ನಿರಂತರ ವರದಿ ಪ್ರಸಾರ ಮಾಡಿತ್ತು. ಇದಾದ ಬಳಿಕ ಕಾರ್ಯಾಚರಣೆ ಆರಂಭಗೊಂಡಿತ್ತು. ಈ ಕಾರ್ಯಾಚರಣೆಗೆ ಶಾಂತಿನಗದ ಕಾಂಗ್ರೆಸ್ (Congress) ಶಾಸಕ ಹ್ಯಾರಿಸ್ ಆಕ್ಷೇಪ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ನಲಪಾಡ್‌ ಅಕಾಡೆಮಿಯಿಂದ ರಾಜಕಾಲುವೆ ಒತ್ತುವರಿ – ಪ್ರಭಾವಿಗಳ ಬಿಲ್ಡಿಂಗ್‌ ತೆರವಿಗೆ BBMP ಹಿಂದೇಟು!

ನಲಪಾಡ್ ಅಕಾಡೆಮಿ ರಾಜಕಾಲುವೆ ಆಪರೇಷನ್ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ್ದ ಕೋರ್ಟ್ ಕಾರ್ಯಾಚರಣೆ ನಡೆಸದಂತೆ ಒಂದು ವಾರದ ಮಟ್ಟಿಗೆ ತಡೆಯಾಜ್ಞೆ ನೀಡಿತ್ತು. ಇದರಿಂದ ಒತ್ತುವರಿ ಕಾರ್ಯ ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಸೆಪ್ಟೆಂಬರ್ 23ರ ವರೆಗೆ ಹೈಕೋರ್ಟ್ ತಡೆಯಾಜ್ಞೆ ವಿಸ್ತರಿಸಿದ್ದು, ನಲಪಾಡ್ ಅಕಾಡೆಮಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *