ರಜನಿ ‘ಜೈಲರ್ ಸಕ್ಸಸ್’: ಚಿತ್ರತಂಡಕ್ಕೆ ಚಿನ್ನದ ಉಡುಗೊರೆ

Public TV
2 Min Read

ಜೈಲರ್ ಸಿನಿಮಾ ಭರ್ಜರಿ ಗೆಲುವು (Success) ಸಾಧಿಸಿದೆ. ಬಾಕ್ಸ್ ಆಫೀಸಿನಲ್ಲಿ ಭಾರೀ ಕಲೆಕ್ಷನ್ ಮಾಡಿದೆ. ಹೀಗಾಗಿ ನಿರ್ಮಾಪಕ ಕಲಾನಿಧಿ ಮಾರನ್, ಭರ್ಜರಿ ಉಡುಗೊರೆಗಳನ್ನು ಚಿತ್ರತಂಡಕ್ಕೆ ನೀಡುತ್ತಿದ್ದಾರೆ. ಚಿತ್ರದ ನಾಯಕ, ನಿರ್ದೇಶಕ, ಸಂಗೀತ ನಿರ್ದೇಶಕರಿಗೆ ಈಗಾಗಲೇ ಕಾರುಗಳ ಉಡುಗೊರೆ (Gift) ನೀಡಿರುವ ನಿರ್ಮಾಪಕರು, ಇದೀಗ ಚಿತ್ರತಂಡದಲ್ಲಿ ಕೆಲಸ ಮಾಡಿದ ಮುನ್ನೂರಕ್ಕೂ ಹೆಚ್ಚು ಜನರಿಗೆ ಬಂಗಾರದ ಉಡುಗೊರೆ ನೀಡಿದೆ. ಸಕ್ಸಸ್ ಪಾರ್ಟಿಯಲ್ಲಿ ಚಿನ್ನವನ್ನು ಗಿಫ್ಟ್ ಆಗಿ ನೀಡಿದ್ದಾರೆ.

ಈ ಹಿಂದೆ ನಿರ್ಮಾಪಕ ಕಲಾನಿಧಿ ಮಾರನ್ (Kalanidhi Maran), ನಟ ರಜನಿಕಾಂತ್ (Rajinikanth) ಅವರಿಗೆ ದುಬಾರಿ ಉಡುಗೊರೆಯನ್ನೇ ನೀಡಿದ್ದರು. ಈ ಸಿನಿಮಾಗಾಗಿ ರಜನಿ 250 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದ್ದು, ಮೊದಲ ಕಂತಾಗಿ 150 ಕೋಟಿ ರೂಪಾಯಿ ಸಂದಾಯವಾಗಿತ್ತು. ಎರಡನೇ ಕಂತು ನೂರು ಕೋಟಿ ರೂಪಾಯಿ ಮತ್ತು ಬಿಎಂಡಬ್ಲೂ ಎಕ್ಸ್ 7 ದುಬಾರಿ ಕಾರನ್ನು (Car) ಉಡುಗೊರೆಯಾಗಿ ನೀಡಲಾಗಿದೆ. ಈ ಕಾರಿನ ಬೆಲೆ  1.50 ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ.

ಜೈಲರ್ (Jailer) ಸಿನಿಮಾ ಈಗಲೂ ಬಾಕ್ಸ್ ಆಫೀಸಿನಲ್ಲಿ ಈಗಲೂ ಸದ್ದು ಮಾಡುತ್ತಿದೆ. ಹಲವು ವರ್ಷಗಳ ನಂತರ ರಜನಿ ಇಂಥದ್ದೊಂದು ಗೆಲುವನ್ನು (Success) ತಮ್ಮದಾಗಿಸಿಕೊಂಡಿದ್ದಾರೆ. ಹಾಗಾಗಿ ಸಹಜವಾಗಿಯೇ ಅವರ ಅಭಿಮಾನಿಗಳಲ್ಲಿ ಸಂಭ್ರಮ ತಂದಿದೆ. ಈ ಖುಷಿಯನ್ನು ಅವರು ಚಿತ್ರತಂಡದ ಜೊತೆಗೆ ಹಂಚಿಕೊಂಡಿದ್ದರು.

ಜೈಲರ್ ಸಿನಿಮಾದ ಚಿತ್ರತಂಡದ ಜೊತೆಗೆ ಕೇಕ್ ಕತ್ತರಿಸಿ ಸಂಭ್ರಮಸಿರುವ ರಜನಿಕಾಂತ್, ಸಿನಿಮಾಗಾಗಿ ದುಡಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದ್ದರು. ಅಲ್ಲದೇ ಸಿನಿಮಾ ನೋಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಈ ಸಂದರ್ಭದಲ್ಲಿ ಅವರು ಹೇಳಿದ್ದರು. ಸ್ವತಃ ತಾವೇ ಎಲ್ಲರಿಗೂ ಕೇಕ್ (Cake)ತಿನ್ನಿಸಿದ್ದರು. ಇದನ್ನೂ ಓದಿ:ಅಮೆರಿಕಾದಲ್ಲಿ ‘ಮೈ ಹೀರೋ’ ಶೂಟಿಂಗ್ : ಹಾಲಿವುಡ್ ನಟ ಎರಿಕ್ ಭಾಗಿ

ರಜನಿಕಾಂತ್ ಮೇನಿಯಾ ನಿಲ್ಲುತ್ತಿಲ್ಲ. ಒಂದಲ್ಲ ಎರಡಲ್ಲ. ಭರ್ತಿ ಹದಿನಾರು ದಿನಗಳು ಮುಗಿದಿದೆ. ಆದರೂ ಜನರು ಚಿತ್ರಮಂದಿರಕ್ಕೆ ನುಗ್ಗುತ್ತಿದ್ದಾರೆ. ನೋಡಿದವರೇ ಮತ್ತೆ ಮತ್ತೆ ನೋಡುತ್ತಿದ್ದಾರೆ. ರಜನಿ ಯುಗ ಮುಗಿಯಿತು ಎಂದವರಿಗೆ ಕಪಾಳಕ್ಕೆ ಬಾರಿಸುವಂಥ ಉತ್ತರ ಕೊಟ್ಟಿದೆ ಜೈಲರ್. ವಿಶ್ವದಾದ್ಯಂತ ಇಲ್ಲಿವರೆಗೆ 600 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿದೆ.

 

ಮೊದಲ ದಿನ ಒಟ್ಟು 500 ಪ್ರದರ್ಶನ ಕಂಡಿತ್ತು ಜೈಲರ್. ಮೊದಲ ವಾರದ ನಂತರ ಪ್ರದರ್ಶನ ಸಂಖ್ಯೆ ಕಮ್ಮಿ ಆಗಬಹುದು. ಹೀಗಂತ ಲೆಕ್ಕಾಚಾರ ಹಾಕಲಾಗಿತ್ತು. ಆದರೆ ಐದು ನೂರರಲ್ಲಿ ಒಂದೇ ಒಂದು ಪ್ರದರ್ಶನ ಕಮ್ಮಿಯಾಗಿಲ್ಲ. ಜನರು ಸಿನಿಮಾ ನೋಡುವುದನ್ನು ನಿಲ್ಲಿಸುತ್ತಿಲ್ಲ. ರಜನಿ ಅಷ್ಟೊಂದು ಮೋಡಿ ಮಾಡಿದ್ದಾರೆ. ಏನಾದರಾಗಲಿ  ಹಳೇ ರಜನಿಕಾಂತ್ ಮತ್ತೆ ಸಿಕ್ಕಿದ್ದಾರೆ. ಫ್ಯಾನ್ಸ್ ಕೇಕೆ ಹಾಕುತ್ತಿದ್ದಾರೆ. ನಿರ್ದೇಶಕ ನೆಲ್ಸನ್ ನಿರ್ದೇಶನಕ್ಕೆ ಭೇಷ್ ಎಂದಿದ್ದಾರೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್