ರಜನಿಕಾಂತ್ (Rajanikanth) ನಟನೆಯ ಕೂಲಿ (Coolie) ಸಿನಿಮಾ ಆಗಸ್ಟ್‌ನಲ್ಲಿ ಬಿಡುಗಡೆ ಆಗಲಿದೆ. ಬಿಡುಗಡೆ ಮುನ್ನವೇ ಭಾರೀ ಬೇಡಿಕೆಯನ್ನು ಈ ಸಿನಿಮಾ ಉಳಿಸಿಕೊಂಡಿದೆ. ಕನ್ನಡದ ನಟ ಉಪೇಂದ್ರ, ಬಾಲಿವುಡ್ ನಟ ಆಮೀರ್ ಖಾನ್ (Aamir Khan) ಸೇರಿದಂತೆ ಹೆಸರಾಂತ ತಾರಾಬಳಗವೇ ಸಿನಿಮಾದಲ್ಲಿದೆ. ಈ ಸಿನಿಮಾವನ್ನು ವಿತರಿಸಲು ನಾಮುಂದು ತಾಮುಂದು ಎನ್ನುವಂತಾಗಿದೆ.
ಸಾಮಾನ್ಯವಾಗಿ ರಜನಿಕಾಂತ್ ಸಿನಿಮಾಗಳು ಕನ್ನಡದಲ್ಲಿ ಸೂಪರ್ ಹಿಟ್ ಆಗುತ್ತವೆ. ಸಿನಿಮಾ ಎವರೇಜ್ ಅಂದರೂ, ಮೊದಲ ಒಂದು ವಾರ ಗಲ್ಲಾಪೆಟ್ಟಿಗೆಯನ್ನು ತುಂಬಿಸುತ್ತವೆ. ಹಾಗಾಗಿ ರಜನಿ ಸಿನಿಮಾಗಳನ್ನು ವಿತರಿಸಲು ಕರ್ನಾಟಕದಲ್ಲಿ ಪೈಪೋಟಿ ನಡೆಯುತ್ತದೆ. ಕೂಲಿ ಸಿನಿಮಾಗಾಗಿಯೂ ಅಂಥದ್ದೊಂದು ಪೈಪೋಟಿ ವ್ಯಕ್ತವಾಗಿತ್ತಂತೆ.
ಕನ್ನಡಪರ ಹೋರಾಟಗಾರ ಹಾಗೂ ನಿರ್ಮಾಪಕ ಸಾ.ರಾ ಗೋವಿಂದ್ ಹಿಂಟ್ ಕೊಟ್ಟಂತೆ ಕೂಲಿ ಸಿನಿಮಾವನ್ನು ಕರ್ನಾಟಕದಲ್ಲಿ ಬರೋಬ್ಬರಿ 22 ಕೋಟಿ ರೂಪಾಯಿ ಕೊಟ್ಟು ವಿತರಣೆ ಹಕ್ಕನ್ನು ಪಡೆದಿದ್ದಾರಂತೆ. ಹಕ್ಕು ಪಡೆದವರಿಗೆ ಈಗ ಸ್ವಲ್ಪ ಟೆನ್ಷನ್ ಶುರುವಾಗಿದೆಯಂತೆ. ಏಕರೂಪ ಟಿಕೆಟ್ ದರ ನಿಗದಿ ಆಗಿದ್ದರಿಂದ, ಅದು ಜಾರಿಗೆ ಬಂದರೆ, ಕಲೆಕ್ಷನ್ ಕಡಿಮೆ ಆಗುವ ಭಯ ಶುರುವಾಗಿದೆಯಂತೆ.