ಬಹುಕಾಲದ ಗೆಳೆಯ ದ್ವಾರಕೀಶ್ ನೆನೆದ ರಜನಿಕಾಂತ್

Public TV
1 Min Read

ದ್ವಾರಕೀಶ್ (Dwarakish) ಮತ್ತು ರಜನಿಕಾಂತ್ (Rajinikanth) ಬಹುಕಾಲದ ಗೆಳೆಯರು. ದ್ವಾರಕೀಶ್ ಹೇಳಿದವರಿಗೆ ರಜನಿಕಾಂತ್ ಕಾಲ್ ಶೀಟ್ ಕೊಡುತ್ತಿದ್ದರು ಎಂದು ಸ್ವತಃ ದ್ವಾರಕೀಶ್ ಅವರೇ ಹೇಳಿದ್ದಾರೆ. ಅಡ್ಡ ವಾರಿಸು ಸಿನಿಮಾದಲ್ಲಿ ರಜನಿಕಾಂತ್ ನಟಿಸಿದ್ದರೆ, ಈ ಸಿನಿಮಾವನ್ನು ದ್ವಾರಕೀಶ್ ನಿರ್ಮಾಣ ಮಾಡಿದ್ದರು. 1983ರಲ್ಲಿ ಈ ಚಿತ್ರ ಬಿಡುಗಡೆ ಆಗಿತ್ತು. ಆನಂತರ ನೀ ಬರೆದ ಕಾದಂಬರಿ, ಗುಂಗುವಾ ಸೇರಿದಂತೆ ಹಲವು ಚಿತ್ರಗಳಲ್ಲಿಇಬ್ಬರೂ ಕೆಲಸ ಮಾಡಿದ್ದಾರೆ. ಹಾಗೆ ಇವರ ಸ್ನೇಹವಿತ್ತು.

ಈ ಸ್ನೇಹಕ್ಕೆ ಕುರುಹು ಎನ್ನುವಂತೆ ತಮ್ಮಿಬ್ಬರ ಸ್ನೇಹವನ್ನು ರಜನಿಕಾಂತ್ ನೆನಪಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ರಜನಿ, ನನ್ನ ಬಹುಕಾಲದ ಆತ್ಮೀಯ ಗೆಳೆಯ ದ್ವಾರಕೀಶ್ ಅವರ ನಿಧನ ನನಗೆ ಅತೀ ನೋವನ್ನು ತಂದಿದೆ. ಹಾಸ್ಯ ನಟನಾಗಿ ವೃತ್ತಿ ಜೀವನ ಆರಂಭಿಸಿ, ಆನಂತರ ದೊಡ್ಡ ನಿರ್ಮಾಪಕರು ಹಾಗೂ ನಿರ್ದೇಶಕರಾಗಿ ಬೆಳೆದರು ಹಾಗೂ ಬೆಳೆಸಿದರು. ಅವರ ಅಗಲಿಕೆ ನೋವು ತಂದಿದೆ. ಅವರಿಗೆ ಭಾವ ಪೂರ್ಣ ಸಂತಾಪ ಎಂದು ಬರೆದುಕೊಂಡಿದ್ದಾರೆ.

 

ಹಿರಿಯ ನಟ ದ್ವಾರಕೀಶ್ ಅವರ ನಿಧನಕ್ಕೆ ಹಿರಿಯ ನಿರ್ದೇಶಕ ಭಾರ್ಗವ್ ಕೂಡ ಸಂತಾಪ ಸೂಚಿಸಿದ್ದಾರೆ. ದ್ವಾರಕೀಶ್ ಅವರ ಸಂಬಂಧಿಯೂ ಆಗಿರುವ ಭಾರ್ಗವ್, ಅಗಲಿದ ದ್ವಾರಕೀಶ್ ಅವರನ್ನು ನೆನಪಿಸಿಕೊಂಡಿದ್ದು ಹೀಗೆ, ನಾನು ಮತ್ತು ದ್ವಾರಕೀಶ್ ಬಾಲ್ಯದ ಸ್ನೇಹಿತರು. ಸ್ಕೂಲ್ ಕಾಲೇಜು ಶಿಕ್ಷಣ ಒಟ್ಟಿಗೆ ಕಲಿತಿದ್ದೇವೆ. ಕಾಲೇಜು ದಿನಗಳಿಂದಾನೇ ದ್ವಾರಕೀಶ್ ಗೆ ನಟನಾ ಆಸಕ್ತಿ. ಅವ್ರ ಅಣ್ಣ ಮೈಸೂರಲ್ಲಿ ಅಂಗಡಿ ಹಾಕಿ ಕೊಟ್ಟಿದ್ರು. ಅಂಗಡಿ ಬಿಟ್ಟು ಬೆಂಗಳೂರಿಗೆ ನಟ ಆಗೋಕೆ ಬಂದ್ರು. ಚಿತ್ರರಂಗದಲ್ಲಿ 50ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ನನ್ಗೆ ಅವ್ನು ಅನ್ನದಾತ ಅವ್ನಿಂದ್ಲೇ ನಾನು ಚಿತ್ರರಂಗಕ್ಕೆ ಬಂದೆ . ದ್ವಾರಕೀಶ್ ನನ್ ಗುರು ಅನ್ನದಾತ ಎಂದು ಭಾರ್ಗವ್ ಭಾವುಕ ಮಾತುಗಳನ್ನು ಆಡಿದ್ದಾರೆ.

Share This Article