ಜಾರ್ಖಂಡ್ ರಾಜ್ಯಪಾಲರ ಭೇಟಿ ಮಾಡಿದ ರಜನಿಕಾಂತ್

Public TV
1 Min Read

ಮಿಳುನಾಡು ಮೂಲದ ಜಾರ್ಖಂಡ್ (Jharkhand) ರಾಜ್ಯಪಾಲ ಸಿ.ಪಿ ರಾಧಾಕೃಷ್ಣನ್ ಅವರನ್ನು ರಜನಿಕಾಂತ್ ಭೇಟಿ ಮಾಡಿದ್ದಾರೆ. ಹಿಮಾಲಯ ಪ್ರವಾಸದಲ್ಲಿದ್ದ ರಜನಿಕಾಂತ್, ಆ ಪ್ರವಾಸವನ್ನು ಮುಗಿಸಿಕೊಂಡು ರಾಂಚಿಯಲ್ಲಿ ರಾಧಾಕೃಷ್ಣನ್ (Radhakrishnan) ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿಯ ಫೋಟೋಗಳನ್ನು ರಾಜ್ಯಪಾಲರು (Governor) ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ರಾಧಾಕೃಷ್ಣನ್ ಮತ್ತು ರಜನಿಕಾಂತ್ ಸ್ನೇಹಿತರು. ಹಾಗಾಗಿ ಇದೊಂದು ಸೌಜನ್ಯದ ಭೇಟಿ ಎಂದು ಸ್ವತಃ ರಾಜ್ಯಪಾಲರೇ ಹೇಳಿಕೊಂಡಿದ್ದಾರೆ. ಭಾರತದ ಶ್ರೇಷ್ಠ ನಟ, ಆತ್ಮೀಯ ಸ್ನೇಹಿತ ಮತ್ತು ಮಹಾನ್ ಮಾನವತಾವಾದಿ ರಜನಿಕಾಂತ್ ಅವರು ರಾಂಚಿಗೆ (Ranchi) ಭೇಟಿ ನೀಡಿದ್ದರು. ರಾಜಭವನಕ್ಕೆ ಅವರನ್ನು ಸ್ವಾಗತಿಸಿ ಭೇಟಿ ಮಾಡಿದೆ ಎಂದು ಬರೆದುಕೊಂಡಿದ್ದಾರೆ.

ರಜನಿಕಾಂತ್(Rajanikanth)- ಶಿವಣ್ಣ (Shivarajkumar) ಕಾಂಬೋ ಸಿನಿಮಾ ‘ಜೈಲರ್’ (Jailer) ರಿಲೀಸ್ ಆಗಿ ಬಿಡುಗಡೆಯ ದಿನದಿಂದಲೂ ಭರ್ಜರಿ ರೆಸ್ಪಾನ್ಸ್ ಪಡೆಯುತ್ತಿದೆ. ಆಗಸ್ಟ್ 10 ರಿಲೀಸ್ ಆಗಿ ಮೊದಲ ದಿನದಿಂದ ಈವರೆಗೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ‘ಬೀಸ್ಟ್’ ಸಿನಿಮಾದಿಂದ ಕೈ ಸುಟ್ಟುಕೊಂಡಿದ್ದ ನೆಲ್ಸನ್ ದಿಲೀಪ್ ಕುಮಾರ್ ಅವರು ಈ ಚಿತ್ರದಿಂದ ಯಶಸ್ಸು ಸಿಕ್ಕಿದೆ.

ಕೆಲ ವರ್ಷಗಳ ನಂತರ ತಲೈವಾ ‘ಜೈಲರ್’ (Jailer) ಮೂಲಕ ದರ್ಶನ ನೀಡಿದ್ದಾರೆ. ಚಿತ್ರದಲ್ಲಿ ಸಿಂಪಲ್ ಕಾಮನ್ ಮ್ಯಾನ್ ಮುತ್ತುವೇಲ್ ಆಗಿ ಕಾಣಿಸಿಕೊಳ್ಳುವ ತಲೈವಾ, ದ್ವಿತೀಯಾರ್ಧದಲ್ಲಿ ಟೈಗರ್ ಮುತ್ತುವೇಲ್ ಪಾಂಡಿಯನ್ ಆಗಿ ಮಾಸ್ ಅವತಾರದಲ್ಲಿ ಅಬ್ಬರಿಸಿದ್ದಾರೆ.

 

ದೇವರ ಮನೆಯಲ್ಲಿ ಪೂಜೆ ಮಾಡುತ್ತಾ ಎಂಟ್ರಿ ನೀಡುವ ಮುತ್ತುವೇಲ್ ಬಹಳ ಸಿಂಪಲ್ ವ್ಯಕ್ತಿ. ಮಡದಿ, ಮಗ, ಸೊಸೆ- ಮೊಮ್ಮಗನ ಜತೆ ಸರಳ ಸುಖ ಸಂಸಾರ ನಡೆಸುವ ಕಾಮನ್ ಮ್ಯಾನ್. ಮುತ್ತುವೇಲ್ ಮಗ ಅರ್ಜುನ್ ಪೊಲೀಸ್ ಅಧಿಕಾರಿಯಾಗಿದ್ದು, ಪ್ರಕರಣವೊಂದನ್ನು ಭೇದಿಸಲು ಹೋಗಿ ಕಣ್ಮರೆಯಾಗ್ತಾನೆ. ಹೀಗೆ ಕಣ್ಮರೆಯಾಗುವ ಮಗನನ್ನು ಹುಡುಕಲು ನಾಯಕ ಮುತ್ತುವೇಲ್ ಮುಂದಾಗಲಿದ್ದು, ಯಾವ ರೀತಿ ಸೇಡು ತೀರಿಸಿಕೊಳ್ಳಲಿದ್ದಾನೆ ಎಂಬುವುದೇ ಚಿತ್ರದ ಕಥೆಯಾಗಿದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್