ಕಾಲಿವುಡ್‌ನ ಆಪ್ತ ಮಿತ್ರ ಸ್ಟಾರ್ ನಟರು ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಕಮಲ್ ಹಾಸನ್. ಇಬ್ಬರೂ ನಿರ್ದೇಶಕ ಕೆ.ಬಾಲಚಂದರ್ ಶಿಷ್ಯಂದಿರು. 21 ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದ ಜೋಡಿ ಇದು. ಅವುಗಳಲ್ಲಿ 7 ಚಿತ್ರಗಳನ್ನ ಕೆ. ಬಾಲಚಂದರ್ ನಿರ್ದೇಶಿಸಿದ್ದರು. 70ರ ದಶಕದಲ್ಲಿ ರಜನಿಕಾಂತ್-ಕಮಲ್ ಹಾಸನ್ ಕಾಂಬಿನೇಷನ್ ಚಿತ್ರಗಳು ಮಾಡಿದ್ದ ದಾಖಲೆ ಲೆಕ್ಕಕ್ಕಿಲ್ಲ. ಆದರೆ ಇಬ್ಬರೂ ಜಂಟಿಯಾಗಿ ತೆರೆ ಹಂಚಿಕೊಳ್ಳದೆ 40 ವರ್ಷ ಉರುಳಿದೆ. ವಿಶೇಷ ಅಂದ್ರೆ ಇದೀಗ ಫ್ಯಾನ್ಸ್‌ಗೆ ಮತ್ತೆ ಒಟ್ಟಾಗಿ ನಟಿಸುವ ಶುಭ ಸುದ್ದಿ ಕೊಟ್ಟಿದ್ದಾರೆ. ಇದು ಕಟ್ಟುಕಥೆಯಲ್ಲ, ನಿಜ ಸಂಗತಿ.
ದಕ್ಷಿಣ ಭಾರತದ ಈ ಇಬ್ಬರು ಸೂಪರ್‌ಸ್ಟಾರ್‌ಗಳು ಮತ್ತೆ ಒಟ್ಟಿಗೆ ನಟಿಸುವುದು ಕೇವಲ ಗಾಳಿ ಸುದ್ದಿ ಎಂದು ಭಾವಿಸಿರುವಾಗಲೇ ಅಧಿಕೃತ ಸುದ್ದಿಯೊಂದು ತೇಲಿಬಂದಿದೆ. 40 ವರ್ಷಗಳ ಬಳಿಕ ದಿಗ್ಗಜರನ್ನ ಒಂದೇ ಸ್ಕ್ರೀನ್‌ನಲ್ಲಿ ತೋರಿಸುವ ಧೈರ್ಯ, ತಾಕತ್ತು ಬೇಕು. ಈ ಚಿತ್ರವನ್ನ ಕೈಗೆತ್ತಿಕೊಂಡಿರೋದು ಸ್ಟಾರ್ ಡೈರೆಕ್ಟರ್ ಲೋಕೇಶ್ ಕನಕರಾಜ್. ಕೂಲಿ ಸಕ್ಸಸ್ ಬೆನ್ನಲ್ಲೇ ರಜನಿಕಾಂತ್ ಜೊತೆ ಮತ್ತೆ ಸಿನಿಮಾ ಮಾಡುತ್ತಿದ್ದಾರೆ ಲೋಕೇಶ್, ಜೊತೆಗೆ ವಿಕ್ರಂ ಬಳಿಕ ಕಮಲ್ ಹಾಸನ್ ಜೊತೆ ಸಿನಿಮಾ ಮಾಡುವ ಡೇಟ್ಸ್ನ್ನೂ ಲೋಕೇಶ್ ಪಡೆದುಕೊಂಡಿದ್ದರು. ಇಬ್ಬರನ್ನೂ ಕೊಲ್ಯಾಬರೇಟ್ ಮಾಡುತ್ತಿದ್ದಾರೆ ಲೋಕೇಶ್. ಈ ಚಿತ್ರ ಲೋಕೇಶ್ ಸಿನಿಮಾ ಸ್ಪೆಷಲ್ ಆಫ್ ಮೇಕಿಂಗ್, ಲೋಕೇಶ್ ಸಿನಿಮ್ಯಾಟಿಕ್ ಯುನಿವರ್ಸಲ್ ಸ್ಪೆಷಲ್‌ನಲ್ಲಿ ಬರುವ ಸಾಧ್ಯತೆ ಇದೆ.
ಇಬ್ಬರು ಸ್ಟಾರ್ ನಟರ ಚಿತ್ರ ಎಂದಾಗ ಬಿಗ್ ಬಂಡವಾಳದ ಚಿತ್ರವಾಗಿ ಬರಬೇಕಿರುವುದು ಸಾಮಾನ್ಯ. ಮೂಲಗಳ ಪ್ರಕಾರ ಇದೇ ಸನ್ ಪಿಕ್ರ್ಸ್ ಚಿತ್ರವನ್ನ ನಿರ್ಮಾಣ ಮಾಡಲು ಮುಂದಾಗಿದೆ ಎನ್ನಲಾಗುತ್ತಿದೆ. ಘೋಷಣೆಯೊಂದೇ ಬಾಕಿ ಇದೆ. ಸದ್ಯಕ್ಕೆ ಕೂಲಿ ಬಾಕ್ಸಾಫೀಸ್‌ನಲ್ಲಿ ಸೌಂಡ್ ಮಾಡ್ತಿರೋದ್ರಿಂದ ಅಬ್ಬರ ನಡುವೆ ಘೋಷಣೆ ಬೇಡ ಎಂದು ಸುಮ್ಮನಿದೆ ಟೀಮ್ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಎಷ್ಟೋ ಸಿನಿ ಪ್ರಿಯರ ಕನಸು ಮತ್ತೆ ನನಸಾಗುತ್ತಿದೆ. ರಜನಿಕಾಂತ್-ಕಮಲ್ ಒಟ್ಟಿಗೆ ಕಾಣಿಸ್ಕೊಳ್ಳೋ ಚಿತ್ರ ತಯಾರಾಗುತ್ತಿದೆ.