‘ಜೈಲರ್‌’ ಪಾರ್ಟ್‌ 2ಗೆ ಟೈಟಲ್‌ ಬದಲಾವಣೆ? ಇಲ್ಲಿದೆ ಬಿಗ್‌ ಅಪ್‌ಡೇಟ್

Public TV
1 Min Read

ಜನಿಕಾಂತ್ (Rajanikanth) ನಟನೆಯ ‘ಜೈಲರ್’ (Jailer) ಸಿನಿಮಾ ಕಳೆದ ವರ್ಷ ರಿಲೀಸ್ ಆಗಿ ಸೂಪರ್ ಡೂಪರ್ ಸಕ್ಸಸ್ ಕಂಡಿತ್ತು. ತಲೈವಾ ಅಬ್ಬರಕ್ಕೆ ಫ್ಯಾನ್ಸ್ ಫಿದಾ ಆಗಿದ್ದರು. ಮತ್ತೆ ಪಾರ್ಟ್ 2 ದರ್ಶನ ಯಾವಾಗ? ಎಂದು ಎದುರು ಅಭಿಮಾನಿಗಳು ನೋಡುತ್ತಿದ್ದರು. ಈಗ ‘ಜೈಲರ್ 2’ (Jailer 2) ಬಗ್ಗೆ‌ ಬಿಗ್ ಅಪ್‌ಡೇಟ್ ಸಿಕ್ಕಿದೆ.‌ ತೆರೆಮರೆಯಲ್ಲಿ ಟೈಟಲ್‌ ಬದಲಾವಣೆ ಕುರಿತು ಪ್ಲ್ಯಾನ್‌ ನಡೆಯುತ್ತಿದೆ.

ಡೈರೆಕ್ಟರ್ ನೆಲ್ಸನ್ ‘ಜೈಲರ್’ ಪಾರ್ಟ್ 2ಗೆ ಪವರ್‌ಫುಲ್ ಕಥೆಯನ್ನು ಹೆಣೆದಿದ್ದಾರೆ. ಚಿತ್ರದ ಮೊದಲ ಡ್ರಾಪ್ಟ್ ರೆಡಿಯಾಗಿದ್ದು, ರಜನಿಕಾಂತ್ ಮತ್ತು ನಿರ್ಮಾಣ ಸಂಸ್ಥೆಗೆ ಕಥೆ ಇಷ್ಟವಾಗಿದೆ. ಡೈರೆಕ್ಟರ್ ಹೆಣೆದ ಕಥೆಗೆ ಮುಂದುವರೆಯಲು ಗ್ರೀನ್ ಸಿಗ್ನಲ್ ಕೂಡ ಕೊಟ್ಟಿದ್ದಾರೆ. ಇದನ್ನೂ ಓದಿ:‘ವಾರ್ 2’ನಲ್ಲಿ ಇರಲಿದೆ ನಾಟು ನಾಟು ರೀತಿಯೇ ಎನರ್ಜಿಟಿಕ್ ಡ್ಯಾನ್ಸ್

‘ಜೈಲರ್’ ಚಿತ್ರದ ಸಕ್ಸಸ್ ನಂತರವೇ ಪಾರ್ಟ್ 2ಗಾಗಿ ತಯಾರಿ ಮಾಡಿಕೊಳ್ತಿದ್ದರು. ಈಗ ಅಂತಿಮ ಹಂತದಲ್ಲಿದೆ. ಜೂನ್‌ನಿಂದಲೇ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸ ಕೂಡ ಶುರುವಾಗಲಿದೆ.

ಪಾರ್ಟ್ 2ಗೆ ಟೈಟಲ್ ಬದಲಿಸುವ ಸಾಧ್ಯತೆ ಇದೆ. ‘ಜೈಲರ್ 2’ ಅಥವಾ ‘ಹುಕುಮ್’ ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡಲಿದ್ದಾರೆ ಎನ್ನಲಾಗಿದೆ. ಚಿತ್ರತಂಡದವರು ಹುಕುಮ್‌ ಟೈಟಲ್‌ಗೆ ಹೆಚ್ಚಿನ ಆಧ್ಯತೆ ನೀಡಿದ್ದಾರೆ ಎನ್ನಲಾಗಿದೆ. ಲೋಕೇಶ್ ಕನಗರಾಜ್ ಜೊತೆಗಿನ ಸಿನಿಮಾದ ನಂತರ ಜೈಲರ್ 2ಗೆ ಮುಹೂರ್ತ ಫಿಕ್ಸ್ ಆಗಲಿದೆ. 2025ರ ಶುರುವಿನಲ್ಲಿ ತಲೈವಾ ಜೊತೆ ನೆಲ್ಸನ್ ಶೂಟಿಂಗ್‌ಗೆ ಚಾಲನೆ ನೀಡಲಿದ್ದಾರೆ ಎನ್ನಲಾಗಿದೆ. ಟೈಟಲ್‌ ಬದಲಾವಣೆ ವಿಚಾರ ನಿಜನಾ? ಎಂಬುದನ್ನು ಚಿತ್ರತಂಡದ ಕಡೆಯಿಂದ  ಅಧಿಕೃತ ಅಪ್‌ಡೇಟ್‌ಗಾಗಿ ಕಾದುನೋಡಬೇಕಿದೆ.

Share This Article