ಬೆಂಗಳೂರು: ಸುಮ್ಮನೇ ಕೆಲಸಕ್ಕೆ ಬಾರದವರೆಲ್ಲ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ನಟಿ ಎಂದು ಹೇಳಿಕೊಂಡು ತಿರುಗಾಡುತ್ತಾರೆ. ಆದರೆ ನಟಿ ಸರೋಜಾದೇವಿಯವರು (B.Sarojadevi) ಇದನ್ನೆಲ್ಲ ಮಾಡಲೇ ಇಲ್ಲ ಎಂದು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು (Rajendra Singh Babu) ಅವರು ಹೇಳಿದರು.
ನಟಿ ಬಿ.ಸರೋಜಾದೇವಿ ಅವರ ಸಿನಿ ಪಯಣದ ಬಗ್ಗೆ `ಪಬ್ಲಿಕ್ ಟಿಬಿ’ (PUBLiC TV) ಜೊತೆ ಮಾತನಾಡಿದ ಅವರು, ಸುಮಾರು 1954ರಲ್ಲಿ ನಮ್ಮ ತಂದೆಯವರ `ಆಷಾಡಭೂತಿ’ (AshadaBhooti) ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಅವಾಗಿನಿಂದಲೂ ನಮ್ಮ ಕುಟುಂಬಕ್ಕೆ ತೀರ ಹತ್ತಿರವಾದವರು. ಪ್ರತಿ ಬಾರಿ ನಮ್ಮ ಮನೆಗೆ ಬಂದಾಗ ನಮ್ಮನ್ನೆಲ್ಲಾ ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಅದಾದ ನಂತರ ನಟನೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿ, ಬಹು ದೊಡ್ಡ ಸ್ಟಾರ್ ಆದರು. ಆಗಲೂ ಅವರು ನಮ್ಮ ಮನೆಗೆ ಬಂದಾಗ ಮೊದಲು ಹೇಗೆ ನೋಡಿಕೊಳ್ಳುತ್ತಿದ್ದರೂ ಅದೇ ರೀತಿ ನಮ್ಮನ್ನೆಲ್ಲಾ ಕಾಣುತ್ತಿದ್ದರು. ಇನ್ನೂ ನನಗೆ ತುಂಬಾ ಹತ್ತಿರದವರು, ಯಾಕಂದ್ರೆ ಪ್ರತಿ ಬಾರಿ ನಾನು ಮದ್ರಾಸ್‌ಗೆ ಹೋದಾಗ ಚೆನ್ನಾಗಿ ಓದಬೇಕು ಅಂತ ಹೇಳಿ, ಒಂದು ಗಡಿಯಾರ ಉಡುಗೊರೆಯಾಗಿ ನೀಡಿದ್ದರು ಎಂದರು.ಇದನ್ನೂ ಓದಿ: ಪೂಜೆ ಮಾಡಿ ಟಿವಿ ಆನ್ ಮಾಡಿದ್ದರು – ಸರೋಜಾದೇವಿಯವರ ಕೊನೆ ಕ್ಷಣ ಹೀಗಿತ್ತು
ನಮ್ಮ ತಾಯಿಯನ್ನು ಕಂಡರೆ ಅವರಿಗೆ ತುಂಬಾ ಪ್ರೀತಿ, ಅದಲ್ಲದೇ ನನ್ನ ಸ್ನೇಹಿತನೊಬ್ಬನಿಗೆ ತುಂಬಾ ಸಹಾಯ ಮಾಡಿದ್ದರು. ಬಹಳ ಶಿಸ್ತಿನ ನಟಿ, ಅವರ ರೀತಿ ಈಗಿನ ಯಾವ ನಟಿಯರೂ ಇಲ್ಲ. ಸುಮ್ಮನೇ ಕೆಲಸಕ್ಕೆ ಬಾರದವರೆಲ್ಲ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ನಟಿ ಎಂದು ಹೇಳಿಕೊಂಡು ತಿರುಗಾಡುತ್ತಾರೆ. ಆದರೆ ಸರೋಜಾದೇವಿಯವರು ಇದನ್ನೆಲ್ಲ ಮಾಡಲೇ ಇಲ್ಲ. ನಾಲ್ಕು ಭಾಷೆಯಲ್ಲಿ ನಟಿಸೋದು ಅಂದರೆ ಸಣ್ಣ ಮಾತಲ್ಲ. ಹಿಂದಿ, ತಮಿಳು, ತೆಲುಗು ಹಾಗೂ ಕನ್ನಡದಲ್ಲಿ ನಟಿಸಿದರು. ಅವರು ಎಷ್ಟೇ ಬೆಳೆದರೂ ಕೂಡ ಕನ್ನಡದಲ್ಲಿ ಕಿತ್ತೂರು ಚೆನ್ನಮ್ಮ, ಭಾಗ್ಯವಂತರು ಅಂತಹ ಪಾತ್ರಗಳಲ್ಲಿ ನಟಿಸುವುದನ್ನು ನಿಲ್ಲಿಸಲಿಲ್ಲ. ಕೆಲವರಾದರೆ ಕನ್ನಡವನ್ನೇ ಮರೆತು ಬಿಡುತ್ತಿದ್ದರು. ಆದರೆ ಇವರು ಯಾವತ್ತೂ ಕನ್ನಡವನ್ನು ಮರೆಯಲಿಲ್ಲ. ಅಚ್ಚ ಕನ್ನಡದ ನಟಿ, ತುಂಬಾ ಎತ್ತರಕ್ಕೆ ಬೆಳೆದವರು. ಅವರ ಮಟ್ಟಕ್ಕೆ ಯಾರೂ ತಲುಪಲೇ ಇಲ್ಲ. ರಾಜಕುಮಾರ್ ಬಳಿಕ ಯಾರಿಗೂ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಲಿಲ್ಲ, ಬಿ.ಸರೋಜಾದೇವಿ ಅವರಿಗೆ ಈ ಪ್ರಶಸ್ತಿ ನೀಡಬೇಕಿತ್ತು ಎಂದರು ತಿಳಿಸಿದರು.
ಚಿತ್ರರಂಗದ ಯಾವುದೇ ಆಗು-ಹೋಗಗಳಲ್ಲೂ ನಟಿ ಜೊತೆಗೆ ಇರುತ್ತಿದ್ದರು. ನಿಜಕ್ಕೂ ಚಿತ್ರರಂಗಕ್ಕೆ ಬಹುದೊಡ್ಡ ನಷ್ಟ ಎಂದು ಸಂತಾಪ ಸೂಚಿಸಿದರು.ಇದನ್ನೂ ಓದಿ: ಹಿರಿಯ ನಟಿ ಬಿ. ಸರೋಜಾದೇವಿ ನಿಧನ – ಡಿಕೆಶಿ ಸಂತಾಪ