L2: Empuraan | ವಿವಾದ ಸುಳಿಯಲ್ಲಿ ಬ್ಲಾಕ್‌ಬಸ್ಟರ್‌ ಸಿನಿಮಾ – 17 ದೃಶ್ಯಗಳಿಗೆ ಕತ್ತರಿ

Public TV
2 Min Read

ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ (Mohan Lal) ಅಭಿನಯದ ಎಲ್‌2: ಎಂಪೂರನ್‌ (L2: Empuraan) ಸಿನಿಮಾ ತೆರೆ ಕಂಡ ಮೂರೇ ದಿನಕ್ಕೆ ವಿವಾದದ ಸುಳಿಯಲ್ಲಿ ಸಿಲುಕಿದೆ. ಎರಡೇ ದಿನದಲ್ಲಿ 100 ಕೋಟಿ ಕ್ಲಬ್‌ ಸೇರಿರುವ ಈ ಸಿನಿಮಾ 3ನೇ ದಿನ ವಿವಾದಕ್ಕೆ ಸಿಲುಕಿದೆ. ಹೀಗಾಗಿ ಸಿನಿಮಾದ 17 ದೃಶ್ಯಗಳಿಗೆ ಕತ್ತರಿ ಹಾಕಲು ಚಿತ್ರತಂಡ ನಿರ್ಧರಿಸಿದೆ.

ಹೌದು. ಮಾರ್ಚ್‌ 27ರಂದು ತೆರೆ ಕಂಡ ಮೋಹನ್‌ ಲಾಲ್‌ ಅಭಿನಯದ ಎಲ್‌2: ಎಂಪೂರನ್‌ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದಲ್ಲಿ 2002ರ ಗುಜರಾತ್‌ ಗಲಭೆಯ ದೃಶ್ಯಗಳನ್ನು ತಿರುಚಿ ಬಳಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಸಿನಿಮಾದ 17 ದೃಶ್ಯಗಳಿಗೆ ಕತ್ತರಿ ಹಾಕಲು ಚಿತ್ರತಂಡ ನಿರ್ಧರಿಸಿದೆ. ಇಂದು ಯುಗಾದಿ ಹಬ್ಬ, ನಾಳೆ ರಂಜಾನ್‌ ಹಬ್ಬದ ಹಿನ್ನೆಲೆ ರಜೆ ಇರುವ ಕಾರಣ, ಹೊಸ ಆವೃತ್ತಿಯನ್ನು ಮಂಗಳವಾರ ಸೆನ್ಸಾರ್‌ ಮಂಡಳಿಗೆ ನೀಡಲಾಗುವುದು. ಬುಧವಾರದ ಒಳಗೆ ಎಲ್ಲ ಚಿತ್ರಮಂದಿರಗಳಲ್ಲಿ ಹೊಸ ಆವೃತ್ತಿ ತಲುಪಲಿದೆ ಎಂದು ಚಿತ್ರತಂಡ ಹೇಳಿದೆ. ಇದನ್ನೂ ಓದಿ: L2 Empuraan: ರಿಲೀಸ್ ಆದ ಎರಡೇ ದಿನಕ್ಕೆ 100 ಕೋಟಿ ಬಾಚಿದ ಮೋಹನ್‌ ಲಾಲ್‌

mohan lal

‌ಚಿತ್ರದಲ್ಲಿರುವ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಗಲಭೆಗಳನ್ನು ಬಿಂಬಿಸುವ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಲಾಗುವುದು, ವಿರೋಧಿ ಬಾಬಾ ಬಜರಂಗಿ ಹೆಸರನ್ನು ಬದಲಾಯಿಸಲಾಗುವುದು ಮತ್ತು ಜೊತೆಗೆ ಕೆಲವು ಸಂಭಾಷಣೆಗಳನ್ನು ಮ್ಯೂಟ್ ಮಾಡಲಾಗುವುದು ಚಿತ್ರತಂಡ ಪ್ರಕಟಿಸಿದೆ. ನಿರ್ದೇಶಕ, ನಟ-ನಿರ್ಮಾಪಕ ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ಸಹ ಇದಕ್ಕೆ ಒಪ್ಪಿದ್ದಾರೆ ಅಂತ ತಿಳಿದುಬಂದಿದೆ. ಇದನ್ನೂ ಓದಿ: ಮಚ್ಚು ಹಿಡಿದು ರೀಲ್ಸ್ ಮಾಡಬಾರದಿತ್ತು, ನನ್ನಿಂದ ತಪ್ಪಾಗಿದೆ: ವಿನಯ್ ಫಸ್ಟ್ ರಿಯಾಕ್ಷನ್

MOHANLAL

ಕೇಂದ್ರ ಸಚಿವ ಭಾರೀ ನಿರಾಸೆ:
ಸದ್ಯ ಚಿತ್ರತಂಡದ ವಿರುದ್ಧ ಬಿಜೆಪಿ ಪ್ರತಿಭಟನೆ ಕೈಬಿಟ್ಟಿದ್ದರೂ ಬಿಜೆಪಿ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಭಾರೀ ನಿರಾಸೆ ಹೊರಹಾಕಿದ್ದಾರೆ. ಇದನ್ನೂ ಓದಿ: ನಾನು ಸಿನಿಮಾ ಸಕ್ಸಸ್‌ಗೆ ಪ್ರಾರ್ಥಿಸಲ್ಲ: ಸೀಕ್ರೆಟ್ ಬಿಚ್ಚಿಟ್ಟ ಸಲ್ಮಾನ್ ಖಾನ್

mohan lal 1

ನಾನು ಲೂಸಿಫರ್ ಚಿತ್ರ ನೋಡಿದ್ದೇನೆ ಮತ್ತು ಅದನ್ನು ಇಷ್ಟಪಟ್ಟಿದ್ದೇನೆ. ನಾನು ಎಂಪುರಾನ್ ಚಿತ್ರವನ್ನು ಲೂಸಿಫರ್‌ನ ಮುಂದುವರಿದ ಭಾಗ ಎಂದು ಕೇಳಿದಾಗ ನೋಡುತ್ತೇನೆ ಎಂದು ಹೇಳಿದ್ದೆ. ಆದ್ರೆ ಈಗ ಚಿತ್ರದ ನಿರ್ಮಾಪಕರು ಸ್ವತಃ ಚಲನಚಿತ್ರದಲ್ಲಿ 17 ತಿದ್ದುಪಡಿಗಳನ್ನು ಮಾಡಿದ್ದಾರೆ ಮತ್ತು ಚಲನಚಿತ್ರವನ್ನು ಮರು-ಸೆನ್ಸಾರ್ಶಿಪ್ ಮಾಡಲಾಗುತ್ತಿದೆ ಎಂದು ನನಗೆ ತಿಳಿದಿದೆ. ಮೋಹನ್‌ಲಾಲ್ ಅಭಿಮಾನಿಗಳು ಮತ್ತು ಇತರ ವೀಕ್ಷಕರನ್ನು ತೊಂದರೆಗೀಡುಮಾಡುವ ವಿಷಯಗಳು ಚಿತ್ರದಲ್ಲಿವೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಚಲನಚಿತ್ರವನ್ನು ಚಲನಚಿತ್ರವಾಗಿ ನೋಡಬೇಕು. ಅದನ್ನು ಇತಿಹಾಸವಾಗಿ ನೋಡಲಾಗುವುದಿಲ್ಲ. ಅಲ್ಲದೇ, ಸತ್ಯವನ್ನು ತಿರುಚಿ ಕಥೆಯನ್ನು ನಿರ್ಮಿಸಲು ಪ್ರಯತ್ನಿಸುವ ಯಾವುದೇ ಚಲನಚಿತ್ರವು ವಿಫಲಗೊಳ್ಳುತ್ತದೆ. ಹಾಗಾಗಿ, ನಾನು ಲೂಸಿಫರ್‌ನ ಈ ಸೀಕ್ವೆಲ್ ಅನ್ನು ನೋಡುತ್ತೇನೆಯೇ? ಖಂಡಿತಾ ಇಲ್ಲ. ಈ ರೀತಿಯ ಚಲನಚಿತ್ರ ನಿರ್ಮಾಣದಿಂದ ನಾನು ನಿರಾಶೆಗೊಂಡಿದ್ದೇನೆ ಎಂದು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Share This Article