ರಾಜವರ್ಧನ್ ನಟನೆಯ ‘ಪ್ರಣಯಂ’ ಫಸ್ಟ್ ಲುಕ್ ಟೀಸರ್ ರಿಲೀಸ್

Public TV
2 Min Read

ಲ್ಲಕ್ಕಿ, ಗಣಪ, ಕರಿಯಾ 2, ಪಾರಿಜಾತದಂಥ ಯಶಸ್ವಿ ಚಿತ್ರಗಳನ್ನು ನಿರ್ಮಿಸಿದ ಪರಮೇಶ್ ಬಹಳ ದಿನಗಳ ನಂತರ ಮತ್ತೊಂದು ಲವ್ ಸ್ಟೋರಿಯೊಂದಿಗೆ ಬಂದಿದ್ದಾರೆ. “ಪ್ರಣಯಂ” (Pranayam) ಹೆಸರಿನ ಆ ಚಿತ್ರಕ್ಕೆ ದತ್ತಾತ್ರೇಯ ಆಕ್ಷನ್ ಕಟ್ ಹೇಳಿದ್ದಾರೆ.  ನಿಶ್ಚಿತಾರ್ಥವಾದ ನವಜೋಡಿಗಳ ನಡುವಿನ ಪ್ರೀತಿ ಪ್ರೇಮದ ಕಥೆಯಿದಾಗಿದ್ದು, ಯುವ ನಟ ರಾಜವರ್ಧನ್ (Rajavardhan), ನೈನಾ ಗಂಗೂಲಿ ಚಿತ್ರದ  ನಾಯಕ, ನಾಯಕಿಯಾಗಿ ಅಭಿನಯಿಸಿದ್ದಾರೆ.  ಈಗಾಗಲೇ ಚಿತ್ರದ  ಚಿತ್ರೀಕರಣ ಪೂರ್ಣಗೊಂಡಿದ್ದು,  ಬಿಡುಗಡೆಯ  ಹಂತಕ್ಕೆ ಬಂದಿದೆ. ಈ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಇತ್ತೀಚಿಗೆ ನೆರವೇರಿತು.

ನಿರ್ಮಾಪಕ ಪರಮೇಶ್ ಮಾತನಾಡಿ, ಈ ಕಥೆಯನ್ನು ಬಹಳ ದಿನಗಳಿಂದ ಇಟ್ಟುಕೊಂಡಿದ್ದೆ. ದತ್ತಾತ್ರೇಯ ಸಿಕ್ಕನಂತರ ಇದರ ಸ್ಕ್ರಿಪ್ಟ್ ಮಾಡಿಕೊಂಡು ಬಂದದ್ದು. ನಾನು ಈವರೆಗೂ ಹೊಸಬರನ್ನೇ ಇಟ್ಟುಕೊಂಡು ಸಿನಿಮಾ ಮಾಡಿಕೊಂಡು ಬಂದವನು. ಈ ಸಿನಿಮಾದಲ್ಲೂ ಬಹುತೇಕ ಹೊಸಬರಿದ್ದಾರೆ. ಚಿತ್ರಕ್ಕೆ ನಾಯಕಿಯರಾಗಿ ರಚಿತಾರಾಮ್, ಆಶಿಕಾ ರಂಗನಾಥ್ ಹೀಗೆ ಬಹಳಷ್ಟು ಜನರನ್ನು ಕೇಳಿದ್ದೆವು. ಕೊನೆಗೆ ನಯನಾ ಗಂಗೂಲಿ ಬಂದರು. ಅವರು ತುಂಬಾ ಚೆನ್ನಾಗಿ  ಪರ್ಫಾಮೆನ್ಸ್, ಮಾಡಿದ್ದಾರೆ. ಪ್ರಯಣಂ, ನಿಶ್ಚಿತಾರ್ಥದಿಂದ ಮದುವೆ ಆಗುವವರೆಗೆ  ನಡೆಯುವ ಕಥೆ. ಏಪ್ರಿಲ್‍ನಲ್ಲಿ ಚಿತ್ರವನ್ನು ತೆರೆಗೆ ತರುವ ಉದ್ದೇಶವಿದೆ. ತೆಲುಗು, ತಮಿಳು, ಮಲಯಾಳಂನಲ್ಲಿ ಕೆಲವರ ಜೊತೆ ಡಬ್ಬಿಂಗ್ ಕುರಿತು ಮಾತಾಡಿದ್ದೇನೆ. ಎಲ್ಲ ಕಲಾವಿದರ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ ಎಂದರು. ಇದನ್ನೂ ಓದಿ: ಪವನ್ ಕಲ್ಯಾಣ್ ಚಿತ್ರದಲ್ಲಿ ಸೊಂಟ ಬಳುಕಿಸಲು ಸಜ್ಜಾದ ನಟಿ ಶ್ರೀಲೀಲಾ

ನಿರ್ದೇಶಕ ದತ್ತಾತ್ರೇಯ ಮಾತನಾಡುತ್ತ ಕಳೆದ 15 ವರ್ಷದಿಂದ ಭಗವಾನ್, ರಾಮನಾಥ ಋಗ್ವೇದಿ ಇತರರ ಜೊತೆ ವರ್ಕ್ ಮಾಡಿದ್ದೇನೆ. ಚಿಕ್ಕಮಗಳೂರು, ಮಡಿಕೇರಿಯಂಥ ಸುಂದರ ಲೊಕೇಶನ್ ಗಳಲ್ಲಿ  ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಎಲ್ಲರೂ ಚಿತ್ರವನ್ನು ಇಷ್ಟ ಪಡುತ್ತಾರೆ ಎನ್ನುವ ವಿಶ್ವಾಸ ವ್ಯಕ್ತಡಿಸಿದರು. ಕಲಾವಿದರಾದ ಗೋವಿಂದೇಗೌಡ,  ಮಂಥನ, ಪ್ರಶಾಂತ್, ಸಮೀಕ್ಷಾ, ಪ್ರಿಯಾ ತರುಣ್, ನೃತ್ಯ ನಿರ್ದೇಶಕರಾದ ಮದನ್ ಹರಿಣಿ ಸೇರಿದಂತೆ ಅನೇಕರಿಗೆ ನಿರ್ಮಾಪಕ ಪರಮೇಶ್ ಚಿತ್ರ ಆರಂಭಕ್ಕೂ ಮುನ್ನವೇ ಸಂಭಾವನೆಯನ್ನು ಚೆಕ್ ಮೂಲಕ ನೀಡಿದ್ದರು. ಇದು ಖುಷಿ ಪಡುವ ಸಂಗತಿ. ಇದರ ಜೊತೆಗೆ ಚಿತ್ರದ ಸಣ್ಣ ಸಣ್ಣ ವಿಷಯಗಳ ಬಗ್ಗೆ ಕಾಳಜಿ ವಹಿಸುತ್ತಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಾಯಕ ರಾಜವರ್ಧನ್ ಮಾತನಾಡಿ,  ಇದುವರೆಗೂ ಆಕ್ಷನ್ ಚಿತ್ರಗಳನ್ನೇ ಮಾಡುತ್ತಿದ್ದೆ. ಈ ಚಿತ್ರದಲ್ಲಿ ಒಬ್ಬ ಲವರ್ ಬಾಯ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಪಾತ್ರ ಹೊಸತನದಿಂದ ಕೂಡಿದೆ. ಚಿತ್ರ ನೋಡಿದ ಎಲ್ಲರಿಗೂ ಇಷ್ಟವಾಗಲಿದೆ ಎಂದು ಮಾಹಿತಿ ನೀಡಿದರು.  ಮನೋಮೂರ್ತಿ ಅವರ  ಸಂಗೀತ ನಿರ್ದೇಶನ, ವಿ. ನಾಗೇಶ್ ಆಚಾರ್ಯ ಅವರ ಛಾಯಾಗ್ರಹಣ. ಮದನ್ ಹರಿಣಿ ಅವರ ನೃತ್ಯ ನಿರ್ದೇಶನ, ಥ್ರಿಲ್ಲರ್ ಮಂಜು, ಮಾಸ್ ಮಾದ ಅವರ ಸಾಹಸ ನಿರ್ದೇಶನ ಪ್ರಣಯಂ  ಚಿತ್ರಕ್ಕಿದೆ.

Share This Article
Leave a Comment

Leave a Reply

Your email address will not be published. Required fields are marked *