ಮಂಗಳೂರು: ಧರ್ಮಸ್ಥಳದಲ್ಲಿ ಯೂಟ್ಯೂಬರ್ಸ್ ಮೇಲೆ ಹಲ್ಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಖ್ಯಾತಿಯ ರಜತ್ ಕಿಶನ್ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಧರ್ಮಸ್ಥಳಕ್ಕೆ ಹೋಗಿದ್ದು, ಸೌಜನ್ಯ ಕೇಸ್‌ನಲ್ಲಿ ನ್ಯಾಯ ಕೇಳೋಕೆ ಮಾತ್ರ. ನಾನು ಯಾವತ್ತೂ ಧರ್ಮಸ್ಥಳದ ಬಗ್ಗೆ ತಪ್ಪಾಗಿ ಮಾತನಾಡಿಲ್ಲ. ನಾನು ಸೌಜನ್ಯ ಕುಟುಂಬಸ್ಥರನ್ನು ಭೇಟಿ ಮಾಡೋಕೆ ಹೋಗಿದ್ದೆ. ಈ ವೇಳೆ ಯೂಟ್ಯೂಬರ್ಸ್ಗೆ ಮಾತನಾಡುತ್ತಿದ್ದಾಗಲೇ ಗುಂಪು ಬಂತು. ಕಾರು ಮತ್ತು ಬೈಕ್‌ನಲ್ಲಿ ಬಂದವರಿಂದ ಹಲ್ಲೆ ನಡೆಯಿತು ಎಂದು ತಿಳಿಸಿದ್ದಾರೆ.
ಏಕಾಏಕಿ ಯೂಟ್ಯೂಬರ್ಸ್ ಮೇಲೆ ಗುಂಪು ಎರಗಿತು. ಸುಮಾರು 50-60 ಜನ ಬಂದು ಅಟ್ಯಾಕ್ ಮಾಡಿದ್ದರು. ಅಲ್ಲಿ ನನ್ನ ಮೇಲೆ ಯಾರು ಬೆರಳೆತ್ತಿ ತೋರಿಸಿಲ್ಲ, ಏನೂ ಮಾಡಿಲ್ಲ. ಆದರೆ, ಯೂಟ್ಯೂಬರ್ಸ್ ಬಗ್ಗೆ ಮಾತ್ರ ಅವರು ಕೋಪ ತೋರಿಸಿದ್ದರು. ಸೌಜನ್ಯ ಕೇಸ್‌ನಲ್ಲಿ ನ್ಯಾಯ ಕೊಡಿಸಿ ಅಂತಾ ಕೇಳೋಕೆ ಹೋಗಿದ್ದೆ. ಸೌಜನ್ಯ ಬಗ್ಗೆ ಕೇಳಿದ್ದರೆ ಅವರೆಲ್ಲಾ ಧರ್ಮ ಅಂತಾ ಮಾತಾಡಿದ್ದರು ಎಂದು ಹೇಳಿದ್ದಾರೆ.
ಯೂಟ್ಯೂಬರ್ಸ್‌ಗೆ ಹೊಡೆದು ಕ್ಯಾಮೆರಾ ಕಿತ್ತು ಬಿಸಾಡಿದರು. ಯೂಟ್ಯೂಬರ್ಸ್‌ಗೆ ಹಲ್ಲೆ ಮಾಡಿದ್ದರ ಬಗ್ಗೆ ನನ್ನ ಬಳಿ ಸಾಕ್ಷಿ ಇದೆ ಎಂದು ರಜತ್ ತಿಳಿಸಿದ್ದಾರೆ.