BBK 11: ಹನುಮಂತ ಪ್ರೊಫೆಷನಲ್ ಕಿಲಾಡಿ: ತಿವಿದ ರಜತ್

Public TV
1 Min Read

‘ಬಿಗ್ ಬಾಸ್ ಕನ್ನಡ 11ರ’ (Bigg Boss Kannada 11) ಆಟದಲ್ಲಿ ಒಬ್ಬೊಬ್ಬರೇ ಮನೆ ಖಾಲಿ ಮಾಡುತ್ತಿದ್ದಾರೆ. ಕಳೆದ ವಾರ ಶೋಭಾ ಶೆಟ್ಟಿ ಹೋಗಿದ್ದರು. ಇವರ ಬೆನ್ನಲ್ಲೇ ಈ ವಾರ ಹೊರಗಡೆ ಹೋಗುವುದು ಯಾರು ಎಂಬುದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಇದೆಲ್ಲದರ ನಡುವೆ ಮನೆಯ ಟಿಆರ್‌ಪಿ ಸ್ಪರ್ಧಿ ಯಾರು? ಎಂಬ ಪ್ರಶ್ನೆಯನ್ನು ಮನೆ ಮಂದಿಗೆ ಸುದೀಪ್ (Sudeep) ಭಾನುವಾರ ಎಪಿಸೋಡ್‌ನಲ್ಲಿ ಕೇಳಿದ್ದಾರೆ. ಇದರ ಪ್ರೋಮೋವನ್ನು ವಾಹಿನಿ ಹಂಚಿಕೊಂಡಿದೆ. ಈ ವೇಳೆ, ಹನುಮಂತ, ಸುರೇಶ್ ವಿರುದ್ಧ ರಜತ್ ತಿರುಗಿಬಿದ್ದಿದ್ದಾರೆ. ಇದನ್ನೂ ಓದಿ:ಶ್ರೀಲೀಲಾಗೆ ಮದುವೆ ಮಾಡುವ ಜವಾಬ್ದಾರಿ ನನ್ನದು: ಬಾಲಯ್ಯ

ಸುದೀಪ್ ಅವರ ಸೂಪರ್ ಸಂಡೇಯ ವಿಡಿಯೋ ರಿಲೀಸ್ ಮಾಡಲಾಗಿದ್ದು, ಗೋಲ್ಡ್ ಸುರೇಶ್ ಹಾಗೂ ರಜತ್ ನಡುವೆ ಮಾತಿನ ಸಮರ ನಡೆದಿದೆ. ಸುದೀಪ್ ಮುಂದೆ ಇಬ್ಬರು ಒಬ್ಬರ ಮೇಲೆ ಒಬ್ಬರು ದೂರು ಹೇಳಿದ್ದಾರೆ. ಹನುಮಂತ (Hanumantha) ಮೇಲೆ ಎರಗಿದ್ದ ರಜತ್ ಅವರು ನಂತರ ಗೋಲ್ಡ್ ಸುರೇಶ್ ಮೇಲೆಯೂ ದೂರುಗಳನ್ನ ಹೇಳಿದ್ದಾರೆ. ಹನುಮಂತು ಪ್ರೊಫೆಷನಲ್ ಕಿಲಾಡಿ, ಎಲ್ಲ ಗೊತ್ತು, ಆದರೆ ಗೊತ್ತಿಲ್ಲ ಎನ್ನುವಂತೆ ಇರುತ್ತಾರೆ ಎಂದಿದ್ದರು. ಇದಾದ ಮೇಲೆ ರಜತ್ ಅವರ ಫೋಟೋ ತೆಗೆದುಕೊಂಡು ಗೋಲ್ಡ್ ಸುರೇಶ್ 2ನೇ ಸ್ಥಾನಕ್ಕೆ ಇಡುತ್ತಾರೆ. ಇದಕ್ಕೆ ಸುದೀಪ್ ಯಾಕೆ ಎಂದು ಗೋಲ್ಡ್ ಸುರೇಶ್‌ರನ್ನ ಪ್ರಶ್ನಿಸುತ್ತಾರೆ.

ಆಗ ಮನೆಗೆ ಬಂದು 3 ವಾರ ಕಳೆದರೂ ರಜತ್ ಅಷ್ಟೇನು ಕೊಡುಗೆ ಕೊಟ್ಟಿಲ್ಲ ಎಂದು ಸುರೇಶ್ ಹೇಳಿದ್ದಾರೆ. ಇದಾದ ಮೇಲೆ ರಜತ್, ಫಸ್ಟ್ ಜಗಳ ಆಗಿದ್ದಕ್ಕೆ ಗಾಬರಿ ಬಿದ್ದು ಹೋಗಿ ಡೋರ್ ಬಡೆದವರು ಟಾಸ್ಕ್ ಬಿಟ್ಟು ಮತ್ತೆ ಏನೂ ಕೂಡ ಅವರ ಕೊಡುಗೆ ಕಾಣಿಸಿಲ್ಲ. ಅವರು ಹೆಂಗೇ ಕೊಡುತ್ತಾರೋ ನಾವು ಹಂಗೆ ಕೊಡುತ್ತೇವೆ. ನಾವು ಒಳ್ಳೆಯ ಮನುಷ್ಯರಲ್ಲ, ನಾವು ಕೆಟ್ಟೋರೇ ಎಂದು ಗೋಲ್ಡ್ ಸುರೇಶ್ ವಿರುದ್ಧ ಗುಡುಗಿದ್ದಾರೆ. ಈ ಮೂಲಕ ಸುರೇಶ್‌ಗೆ ರಜತ್‌ (Rajath) ಟಾಂಗ್ ಕೊಟ್ಟಿದ್ದಾರೆ.

Share This Article