- ಕೊಂದು ಅಪಘಾತದಂತೆ ಬಿಂಬಿಸಲು ಯತ್ನ
- ಫೋನ್ ಲೊಕೇಷನ್‌ನಿಂದ ಸಿಕ್ಕಿಬಿದ್ದ ಹಂತಕ
ಜೈಪುರ್: ಪ್ರೀತಿ (Love) ಬಯಸಿ ಸುಮಾರು 600 ಕಿಮೀ ಕಾರು (Car) ಚಲಾಯಿಸಿಕೊಂಡು ಬಂದಿದ್ದ ಪ್ರಿಯತಮೆಯನ್ನು ಆಕೆಯ ಪ್ರಿಯಕರನೇ ಹತ್ಯೆಗೈದ ಪ್ರಕರಣ ರಾಜಸ್ಥಾನದಲ್ಲಿ (Rajasthan) ನಡೆದಿದೆ.
ಹತ್ಯೆಯಾದ ಮಹಿಳೆಯನ್ನು ಜುನ್ಜುನುವಿನ ಅಂಗನವಾಡಿ ಶಿಕ್ಷಕಿ ಮುಖೇಶ್ ಕುಮಾರಿ (37) ಎಂದು ಗುರುತಿಸಲಾಗಿದೆ. ಅವರು ಸುಮಾರು 10 ವರ್ಷಗಳ ಹಿಂದೆ ಪತಿಯಿಂದ ಬೇರಾಗಿದ್ದರು. ಬಳಿಕ ಅವರಿಗೆ ಫೇಸ್ ಬುಕ್‌ನಲ್ಲಿ ಬಾರ್ಮರ್‌ನ ಶಾಲಾ ಶಿಕ್ಷಕ ಮನರಾಮ್ ಪರಿಚಯವಾಗಿದ್ದ. ಆಗಾಗ ಇಬ್ಬರು ಭೇಟಿಯಾಗುತ್ತಿದ್ದರು. ಅದೇ ರೀತಿ ಸೆ.10 ರಂದು ಸಹ ಆತನ ಭೇಟಿಗೆ ಆಕೆ ಬಂದಿದ್ದಳು. ಆದರೆ ಈ ಬಾರಿ ಆಕೆಯ ಮೇಲೆ ರಾಡ್‌ನಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾನೆ. ಇದನ್ನೂ ಓದಿ: ಉಡುಪಿ| ಪ್ರೇಯಸಿಗೆ ಚಾಕು ಇರಿದ ಪಾಗಲ್ ಪ್ರೇಮಿ – ಯುವತಿ ಸಾವು, ಬಾವಿಗೆ ಹಾರಿ ಯುವಕ ಆತ್ಮಹತ್ಯೆ
ಮುಖೇಶ್ ತನ್ನ ಪತಿಗೆ ವಿಚ್ಛೇದನ ನೀಡಿದ್ದರೂ. ಇನ್ನೂ ಮನರಾಮ್ ವಿಚ್ಛೇದನದ ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಇತ್ತು. ಇದರ ನಡುವೆಯೇ ಮಹಿಳೆ ತನ್ನನ್ನು ಮದುವೆಯಾಗುವಂತೆ ಆತನಿಗೆ ಒತ್ತಾಯಿಸುತ್ತಿದ್ದಳು ಎಂದು ತಿಳಿದುಬಂದಿದೆ.
ಸೆ.10 ರಂದು, ಮುಖೇಶ್ ಕುಮಾರಿ ತನ್ನ ಆಲ್ಟೋ ಕಾರಿನಲ್ಲಿ ಜುನ್ಜುನುವಿನಿಂದ ಬಾರ್ಮರ್‌ನಲ್ಲಿರುವ ಮನರಾಮ್‌ನ ಗ್ರಾಮಕ್ಕೆ ಬಂದು, ಜನರ ಸಹಾಯದಿಂದ ಆತನ ಮನೆಯನ್ನು ಪತ್ತೆಹಚ್ಚಿದ್ದಳು. ಬಳಿಕ ಕುಟುಂಬದ ಸದಸ್ಯರಿಗೆ ಇಬ್ಬರ ನಡುವಿನ ಸಂಬಂಧದ ಬಗ್ಗೆ ಹೇಳಿದ್ದಳು. ಇದು ಮನರಾಮ್‌ನನ್ನು ಕೆರಳಿಸಿತ್ತು. ಬಳಿಕ ಸ್ಥಳೀಯ ಪೊಲೀಸರನ್ನು ಅಲ್ಲಿಗೆ ಕರೆಸಲಾಗಿತ್ತು. ಈ ವೇಳೆ ಪೊಲೀಸರು ಮಾತಾಡಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸೂಚಿಸಿದ್ದರು. ಈ ಸಲಹೆಗೆ ಮನರಾಮ್ ಒಪ್ಪಿಕೊಂಡಿದ್ದ.
ಅದೇ ದಿನ ಸಂಜೆ ಇಬ್ಬರೂ ಒಟ್ಟಿಗೆ ಆತ ಮಹಿಳೆಯ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದು ಹತ್ಯೆ ಮಾಡಿದ್ದ. ಆಕೆಯ ಮೃತದೇಹವನ್ನು ಅವಳ ಕಾರಿನ ಡ್ರೈವರ್ ಸೀಟಿನಲ್ಲಿ ಇರಿಸಿ ಅಪಘಾತ ಎಂಬಂತೆ ಬಿಂಬಿಸಿದ್ದ. ವಳಿಕ ಮನೆಗೆ ಹಿಂತಿರುಗಿ ಮಲಗಿದ್ದ. ಮರುದಿನ ಬೆಳಿಗ್ಗೆ, ಮಹಿಳೆಯ ಸಾವನ್ನಪ್ಪಿರುವ ಬಗ್ಗೆ ಪೊಲೀಸರಿಗೆ ತಿಳಿಸಲು ತನ್ನ ವಕೀಲರಿಗೆ ಹೇಳಿದ್ದ.
ಪೊಲೀಸರು ಪರಿಶೀಲನೆ ನಡೆಸಿದಾಗ ಆಕೆಯ ಸಾವಿನ ಸಮಯದಲ್ಲಿ ಮನರಾಮ್ ಮತ್ತು ಮಹಿಳೆಯ ಫೋನ್ ಲೊಕೇಷನ್ ಒಂದೇ ಸ್ಥಳದಲ್ಲಿದ್ದವು ಎಂಬುದು ಗೊತ್ತಾಗಿದೆ. ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ. ಇದನ್ನೂ ಓದಿ: ಇನ್‌ಸ್ಟಾ ಪ್ರೇಮಿಯನ್ನ ಮದ್ವೆಯಾಗಿದ್ದ ಗೃಹಿಣಿ ಅನುಮಾನಾಸ್ಪದ ಸಾವು