ಕಾಂಗ್ರೆಸ್‌ ಆಡಳಿತದಿಂದ ಜನರಲ್ಲಿ ಭಯೋತ್ಪಾದನೆಯ ಮನಸ್ಥಿತಿ ಹೆಚ್ಚಾಗಿದೆ – ಮೋದಿ ವಾಗ್ದಾಳಿ

Public TV
2 Min Read

ಜೈಪುರ: ಕಾಂಗ್ರೆಸ್‌ ಆಡಳಿತದಲ್ಲಿರುವ ರಾಜಸ್ಥಾನದಲ್ಲಿ (Rajasthan) ಅಭಿವೃದ್ಧಿ ಕುಂಠಿತವಾಗಿದೆ. ಅಲ್ಲದೇ ಕಾಂಗ್ರೆಸ್‌ ಆಡಳಿತದಲ್ಲಿ ರಾಜ್ಯವನ್ನು ಸಂಘರ್ಷಕ್ಕೆ ಎಳೆಯಲಾಗಿದ್ದು, ಜನರಲ್ಲಿ ಸಂಘರ್ಷ ಮತ್ತು ಭಯೋತ್ಪಾದನೆಯ ಮನಸ್ಥಿತಿ ಹೆಚ್ಚಾಗಿದೆ. ಊಹೆಗೂ ನಿಲುಕದ ಹಿಂಸಾಚಾರ ಘಟನೆಗಳು ಈ ನೆಲದಲ್ಲಿ ನಡೆದಿವೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಆತಂಕ ವ್ಯಕ್ತಪಡಿಸಿದ್ದಾರೆ.

ನವೆಂಬರ್‌ 25 ರಂದು ನಡೆಯಲಿರುವ ರಾಜಸ್ಥಾನ ವಿಧಾನಸಭಾ ಚುನಾವಣೆ (Rajasthan Assembly Elections) ಹಿನ್ನೆಲೆ ಪಾಲಿ ನಗರದಲ್ಲಿ ಚುನಾವಣಾ ಪ್ರಚಾರ ನಡೆಸಿದ ಪ್ರಧಾನಿ ಮೋದಿ, ಈ ಬಾರಿ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದರು. ಇದೇ ವೇಳೆ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್‌ ಪಕ್ಷವು (Congress Party) ಭ್ರಷ್ಟಾಚಾರ ಮತ್ತು ತುಷ್ಟೀಕರಣ ರಾಜಕೀಯದಲ್ಲಿ ತೊಡಗಿದೆ. ಕುಟುಂಬ ರಾಜಕಾರಣದ ರಾಜಕೀಯವೇ ಅವರಿಗೆ ಸರ್ವಸ್ವವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮಣಿಪುರ ಏರ್‌ಪೋರ್ಟ್ ಮೇಲೆ ಅಪರಿಚಿತ ಡ್ರೋನ್ ಹಾರಾಟ – ಹೆಚ್ಚಿದ ಆತಂಕ

21ನೇ ಶತಮಾನದಲ್ಲಿ ಭಾರತ ದೇಶವನ್ನು ಎತ್ತರಕ್ಕೆ ಕೊಂಡೊಯ್ಯುವಲ್ಲಿ ರಾಜಸ್ಥಾನದ ಪಾತ್ರವು ಬಹಳ ದೊಡ್ಡದಿದೆ. ಹಾಗಾಗಿ ಈ ರಾಜ್ಯದಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡುವ ಸರ್ಕಾರದ ಅಗತ್ಯವಿದೆ. ಆದ್ರೆ ಕಾಂಗ್ರೆಸ್‌ಗೆ ಭ್ರಷ್ಟಾಚಾರ ಮತ್ತು ಕುಟುಂಬ ರಾಜಕೀಯಕ್ಕಿಂತ ಬೇರೇನೂ ಮುಖ್ಯವಲ್ಲ. ತುಷ್ಟೀಕರಣ ರಾಜಕೀಯ ಬಿಟ್ಟು ಬೇರೇನೂ ಯೋಚಿಸುವುದಿಲ್ಲ ಎಂದು ಕಿಡಿ ಕಾರಿದ್ದಾರೆ.

ಕಳೆದ 5 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯದ ಅಭಿವೃದ್ಧಿ ಕುಂಠಿತಗೊಂಡಿದೆ. ತುಷ್ಟೀಕರಣ ರಾಜಕೀಯದ ಪರಿಣಾಮ ರಾಜ್ಯದ ಜನತೆ ಸಂಕಷ್ಟಕ್ಕೀಡಾಗಿದ್ದಾರೆ. ಕಾಂಗ್ರೆಸ್‌ ಆಡಳಿತದಲ್ಲಿ ರಾಜ್ಯವನ್ನು ಸಂಘರ್ಷಕ್ಕೆ ಎಳೆಯಲಾಗಿದೆ. ಇದರಿಂದ ಜನರಲ್ಲಿ ಸಂಘರ್ಷ ಮತ್ತು ಭಯೋತ್ಪಾದನೆಯ ಮನಸ್ಥಿತಿ ಹೆಚ್ಚಾಗಿದೆ. ಊಹೆಗೂ ನಿಲುಕದ ಹಿಂಸಾಚಾರ ಘಟನೆಗಳು ಈ ನೆಲದಲ್ಲಿ ನಡೆದಿವೆ. ನಾವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಪ್ರಯತ್ನಿಸುತ್ತಿದ್ದು, ಜನರು ಸಹ ಅಭಿವೃದ್ಧಿಗೆ ಆಧ್ಯತೆ ನೀಡುವ ನಮ್ಮ ಸರ್ಕಾರಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ದೇಶದ ಇತರೇ ರಾಜ್ಯಗಳಿಗೆ ಹೋಲಿಸಿದ್ರೆ ರಾಜಸ್ಥಾನದಲ್ಲಿ ಪೆಟ್ರೋಲ್‌ ಬೆಲೆ ಹೆಚ್ಚಾಗಿದೆ. ಆದ್ರೆ ಬಿಜೆಪಿ ಅಧಿಕಾರದಲ್ಲಿರುವ ನೆರೆಯ ರಾಜ್ಯಗಳಲ್ಲಿ ಪೆಟ್ರೋಲ್‌ ಬೆಲೆ ಕಡಿಮೆಯಿದೆ. ರಾಜಸ್ಥಾನದಲ್ಲೂ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಪೆಟ್ರೋಲ್‌ ಬೆಲೆಯನ್ನು ಮರುಪರಿಶೀಲಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಹಣಕಾಸು ಕೊರತೆಯ ನೆಪ ಬೇಡ; 6 ಮತ್ತು 7ನೇ ವೇತನ ಆಯೋಗ ಶಿಫಾರಸಿನನ್ವಯ ಶಿಕ್ಷಕರಿಗೆ ವೇತನ ನೀಡಿ: ಹೈಕೋರ್ಟ್‌ ಆದೇಶ

Share This Article