ಜೈಪುರ: ವೇಗವಾಗಿ ಬಂದ ಕಾರೊಂದು ಫುಟ್‌ಪಾತ್ (ಪಾದಚಾರಿ ಮಾರ್ಗ)ದಲ್ಲಿ ಮಲಗಿದ್ದವರ ಮೇಲೆ ಹರಿದು, ಓರ್ವ ಮೃತಪಟ್ಟಿರುವ ಘಟನೆ ರಾಜಾಸ್ಥಾನದ ಕೋಟಾ ಜಿಲ್ಲೆಯಲ್ಲಿ ನಡೆದಿದೆ.
ಕೋಟಾದ ಜೆ.ಕೆ.ಲೋನ್ ಆಸ್ಪತ್ರೆಯ ಮುಂಭಾಗದ ಫುಟ್‌ಪಾತ್‌ನಲ್ಲಿ ಮಲಗಿದ್ದ ಕೂಲಿ ಕಾರ್ಮಿಕರ ಕುಟುಂಬದ ಸದಸ್ಯರ ಮೇಲೆ ಅತಿವೇಗವಾಗಿ ಕಾರು ಹರಿದಿದೆ. ಘಟನೆ ಬಳಿಕ ಸ್ಥಳದಲ್ಲೇ ಕಾರನ್ನು ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಟೀ ಜೊತೆಗೆ ಟಿಫನ್ ಕೊಡದಿದ್ದಕ್ಕೆ ಸೊಸೆಗೆ ಗುಂಡಿಟ್ಟ ಮಾವ
ಘಟನೆಯಲ್ಲಿ ಕೂಲಿ ಕಾರ್ಮಿಕ ದಿನೇಶ್ ಸ್ಥಳದಲ್ಲೇ ಮೃತಪಟ್ಟಿದ್ದು, ಪತ್ನಿ ಮತ್ತು ಮಗ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಚಾಲಕನ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ.