ಯೋಗಿ ಸಿಎಂ ಆಗುವವರೆಗೆ ಗಡ್ಡ ತೆಗಿಯಲ್ಲ ಎಂದು ಶಪಥ ಮಾಡಿದಾತನ ಕಥೆಯಿದು!

Public TV
2 Min Read

ಲಕ್ನೋ: ಉತ್ತರ ಪ್ರದೇಶದ ಮಾಜಿ ಸಿಎಂ ಯೋಗಿ ಆದಿತ್ಯನಾಥ್ ಮತ್ತೊಮ್ಮೆ ಸಿಎಂ ಆಗುವವರೆಗೆ ನಾನು ಗಡ್ಡ, ತಲೆ ಕೂದಲು ತೆಗಿಯಲ್ಲ ಎಂದು ಅಭಿಮಾನಿಯೊಬ್ಬರು ಶಪಥ ಮಾಡಿ ಗೆದ್ದಿರುವ ಪ್ರಸಂಗ ಶಹಜಹಾನ್‍ಪುರದಲ್ಲಿ ನಡೆದಿದೆ.

ಉತ್ತರಪ್ರದೇಶದ ಶಹಜಹಾನ್‍ಪುರ ಜಿಲ್ಲೆಯ ಸದರ್ ಬಜಾರ್ ಪ್ರದೇಶದ ಮೊಹಲ್ಲಾ ಝಂಡಾ ಕಲಾನ್ ನಿವಾಸಿ ರಾಜಾರಾಂ ಯೋಗಿ ಮುಖ್ಯಮಂತ್ರಿ ಆಗುವವರೆಗೆ ನಾನು ಗಡ್ಡ, ತಲೆ ಕೂದಲನ್ನು ಕತ್ತರಿಸುವುದಿಲ್ಲ ಎಂದು ಶಪಥ ಮಾಡಿರುವವರು. ಇದೀಗ ರಾಜಾರಾಂ ಶಪಥ ಫಲಪ್ರದವಾಗಿದೆ. ಯೋಗಿ ಉತ್ತರ ಪ್ರದೇಶದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿದ್ದಾರೆ. ಈ ಮೂಲಕ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಹೊಸ್ತಿಲ್ಲಲಿದ್ದಾರೆ. ಹಾಗಾಗಿ ರಾಜಾರಾಂ, ಯೋಗಿ ಆದಿತ್ಯನಾಥ್ ಪ್ರಮಾಣ ವಚನ ಸ್ವೀಕರಿಸಿದ ನಂತರ ತಮ್ಮ ಗಡ್ಡ ಕತ್ತರಿಸಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: ಯೋಗಿ ಆದಿತ್ಯನಾಥ್ ವಿರುದ್ಧ ಘೋಷಣೆ – 29 ಮಂದಿ ಕಾರ್ಯಕರ್ತರ ವಿರುದ್ಧ ಪ್ರಕರಣ

ರಾಜಾರಾಂ ಬಡತನದಲ್ಲಿ ಜೀವನ ಸಾಗಿಸುತ್ತಿರುವ ಶ್ರಮಜೀವಿ. ಯೋಗಿ ಮುಖ್ಯಮಂತ್ರಿಯಾದರೆ ರಾಜ್ಯ ಮತ್ತಷ್ಟು ಅಭಿವೃದ್ಧಿ ಸಾಧಿಸುತ್ತದೆ. ಸರ್ಕಾರ ವಸತಿ, ಪಿಂಚಣಿ ಮತ್ತಿತರ ಸೌಲಭ್ಯ ಕಲ್ಪಿಸಲಿದೆ ಎಂಬ ಭರವಸೆಯನ್ನು ಅವರು ಹೊಂದಿದ್ದಾರೆ. ರಾಜಾರಾಂ ಚಮ್ಮಾರ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದು, ಅವರ ಪತ್ನಿ ಮರಣಹೊಂದಿದ್ದಾರೆ. ಇಬ್ಬರು ಗಂಡು ಮಕ್ಕಳಿದ್ದು, ಅವರಲ್ಲಿ ಹಿರಿಯ ಮಗ ವಿಕಲಚೇತನನಾಗಿದ್ದು, ಆತನಿಗೂ ರಾಜಾರಾಂ ಆಸರೆಯಾಗಿದ್ದಾರೆ.

ರಾಜಾರಾಂ ಕಿರಿಯ ಮಗ ಪಂಜಾಬ್‍ನಲ್ಲಿ ಉದ್ಯೋಗದಲ್ಲಿದ್ದು, ಆತನ ನೆರವಿನಿಂದಾಗಿ ಕುಟುಂಬ ನಿರ್ವಹಣೆ ಆಗುತ್ತಿದೆ. ಇಷ್ಟೆಲ್ಲ ಕಷ್ಟಗಲಿದ್ದರೂ ಕೂಡ ರಾಜಾರಾಂ ಮಾತ್ರ ಸರ್ಕಾರದ ಯಾವುದೇ ಯೋಜನೆಗಳಿಗೆ ಆಸೆ ಪಟ್ಟವರಲ್ಲ. ಲೋಕ ಹಿತ ಬಯಸುವ ರಾಜಾರಾಂ, ಯೋಗಿ ಮತ್ತೊಮ್ಮೆ ಮುಖ್ಯಮಂತ್ರಿಯಾದರೆ ರಾಜ್ಯ ಅಭಿವೃದ್ಧಿ ಹೊಂದುತ್ತದೆ ಬಡವರಿಗೆ ಸಹಾಯ ಆಗುತ್ತದೆ ಎಂಬ ಒಂದೇ ಕಾರಣಕ್ಕೆ ರಾಜಾರಾಂ ಶಪಧ ಮಾಡಿದ್ದರು ಇದೀಗ ಅವರ ಶಪಧ ಈಡೇರಿದೆ. ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‍ಗೆ ಹೀನಾಯ ಸೋಲು – ಬಿಜೆಪಿಗಿಂತಲೂ, ಕಾಂಗ್ರೆಸ್‍ಗೆ ಡೇಂಜರ್ ಆ ಪಕ್ಷ!

ರಾಜಾರಾಂ ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಎರಡನೇ ಬಾರಿ ಪ್ರಧಾನಿಯಾದ ಬಳಿಕ ನಾನು ಗಡ್ಡ, ತಲೆ ಕೂದಲಿಗೆ ಕತ್ತರಿ ಹಾಕುತ್ತೇನೆ ಎಂದಿದ್ದರು. ನಂತರ ಮೋದಿ ಎರಡನೇ ಬಾರಿ ಪ್ರಧಾನಿ ಆದ ಸಂದರ್ಭದಲ್ಲಿ ತಮ್ಮ ಕೂದಲು ಹಾಗೂ ಗಡ್ಡಕ್ಕೆ ಕತ್ತರಿ ಹಾಕಿದ್ದರು. ಇದನ್ನೂ ಓದಿ: ಗೋವಾದಲ್ಲಿ ಕಾಂಗ್ರೆಸ್ ಸೋಲಿನ ಅಸಲಿಯತ್ತು ಬಹಿರಂಗ

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 255 ಸ್ಥಾನಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿ ಸತತ 2ನೇ ಬಾರಿ ಗದ್ದುಗೆ ಏರಲು ತಯಾರಿ ನಡೆಸುತ್ತಿದೆ. ನಿನ್ನೆ ರಾಜಭವನದಲ್ಲಿ ರಾಜ್ಯಪಾಲೆ ಆನಂದಿ ಬೆನ್ ಪಟೇಲ್ ಭೇಟಿ ಮಾಡಿದ ಯೋಗಿ, ರಾಜೀನಾಮೆ ಪತ್ರ ನೀಡಿದ್ದಾರೆ. ಮೊದಲ ಅವಧಿಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಯೋಗಿ, ಈಗ ಹೊಸ ಸಂಪುಟ ರಚಿಸಲು ಮುಂದಾಗಿದ್ದು, ಆದಷ್ಟು ಬೇಗಾ ಮುಖ್ಯಮಂತ್ರಿಯಾಗಿ ಎರಡನೇ ಬಾರಿ ಪಟ್ಟವೇರಲು ತಯಾರಿಯಲ್ಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *