ರಾಹುಲ್‌ ಖಡಕ್‌ ಸೂಚನೆ ಬೆನ್ನಲ್ಲೇ ರಾಜಣ್ಣ ರಾಜೀನಾಮೆ!

Public TV
1 Min Read

ಬೆಂಗಳೂರು: ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ (Rahul Gandhi) ಸೂಚನೆಯ ಬೆನ್ನಲ್ಲೇ ಕೆಎನ್‌ ರಾಜಣ್ಣ (KN Rajanna) ಸಹಕಾರಿ ಮಂತ್ರಿ  ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಆ.8 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಹುಲ್‌ ಗಾಂಧಿ ಮತಗಳ್ಳನ ಆರೋಪ ಮಾಡಿದ್ದರು. ಆರೋಪದ ನಂತರ ರಾಜಣ್ಣ, ನಾವು ಮೊದಲು ಮತಪಟ್ಟಿ ನೋಡಿಕೊಳ್ಳದೇ ಈಗ ಹೇಳುತ್ತಿರುವುದಕ್ಕೆ ನಮಗೆ ನಾಚಿಕೆಯಾಗಬೇಕು. ನಮ್ಮದೇ ಸರ್ಕಾರ ಇದ್ದಾಗ ವೋಟರ್ ಲಿಸ್ಟ್ ಸಿದ್ಧವಾಗಿತ್ತು. ಆಗೇನು ಕಣ್ಮುಚ್ಚಿ ಕುಳಿತಿದ್ರಾ ಎಂದು ಪ್ರಶ್ನಿಸುವ ಮೂಲಕ  ರಾಜಣ್ಣ ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ವಿಡಿಯೋವನ್ನು ಇಟ್ಟುಕೊಂಡು ಬಿಜೆಪಿ ರಾಹುಲ್‌ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿತ್ತು. ರಾಜಣ್ಣ ತುಮಕೂರಿನಲ್ಲಿ ಮಾತನಾಡಿದ ವಿಡಿಯೋವನ್ನು ಎಐಸಿಸಿ ಕಾರ್ಯದರ್ಶಿ ವೇಣುಗೋಪಾಲ್‌ಗೆ ಕರ್ನಾಟಕ ಉಸ್ತುವಾರಿ ಸುರ್ಜೇವಾಲಾ ಕಳುಹಿಸಿದ್ದರು.  ಇದನ್ನೂ ಓದಿ: ರಾಜಣ್ಣ ರಾಜೀನಾಮೆ| ಎರಡು ಕೈ ಮುಗಿದು ಒಳಗೆ ಹೋದ ಡಿಕೆಶಿ

 

ಪರಿಶೀಲನೆ ಮಾಡಿ ರಾಹುಲ್ ಗಾಂಧಿ ಗಮನಕ್ಕೆ‌ ವೇಣುಗೋಪಾಲ್‌ (KC Venugopal) ತಂದಿದ್ದರು. ವಿಡಿಯೋ ನೋಡಿ ಕೂಡಲೇ ರಾಜೀನಾಮೆ ಪಡೆಯುವಂತೆ ರಾಹುಲ್‌ ಗಾಂಧಿ ಸೂಚನೆ ನೀಡಿದ್ದಾರೆ.ಇದನ್ನೂ ಓದಿಕೆಎನ್‌ ರಾಜಣ್ಣ ಏನು ತಪ್ಪು ಹೇಳಿದ್ದಾರೆ  ಪುತ್ರ ರಾಜೇಂದ್ರ ಪಶ್ನೆ

ರಾಹುಲ್ ಗಾಂಧಿ ಅವರ ಹೋರಾಟವನ್ನು ಅವಮಾನಿಸುವಂತ ರಾಜಣ್ಣ ಮಾತನಾಡಿದ್ದಾರೆ. ರಾಹುಲ್‌ ಆದೇಶದಂತೆ ರಾಜಣ್ಣ ಕೂಡಲೇ ರಾಜೀನಾಮೆ ನೀಡಬೇಕೆಂದು ಸುರ್ಜೇವಾಲಾ ಸಿಎಂ ಸಿದ್ದರಾಮಯ್ಯಗೆ ಸೂಚನೆ ನೀಡಿದ್ದಾರೆ. ಈ  ಆದೇಶದ ಬೆನ್ನಲ್ಲೇ ರಾಜಣ್ಣ ಪುತ್ರ ರಾಜೇಂದ್ರ ಮೂಲಕ ರಾಜೀನಾಮೆ ಪತ್ರವನ್ನು ಸಿಎಂಗೆ ಸಲ್ಲಿಸಿದ್ದರು. ಹೈಕಮಾಂಡ್‌ ಖಡಕ್‌ ಸೂಚನೆಯ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ರಾಜಣ್ಣ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.

ರಾಷ್ಟ್ರಮಟ್ಟದಲ್ಲಿ ರಾಹುಲ್‌ ಗಾಂಧಿಯವರು ಕರ್ನಾಟಕದ ಮೂಲಕ ಚುನಾವಣಾ ಆಯೋಗದ ವಿರುದ್ಧ ಮತಗಳ್ಳತನದ ಆರೋಪ ಮಾಡಿದ್ದರು. ಮತಗಳ್ಳತನದ ಲೋಪಕ್ಕೆ ಕರ್ನಾಟಕ ಮಂತ್ರಿ  ಕಾಂಗ್ರೆಸ್‌ ಸರ್ಕಾರವನ್ನೇ ಬೊಟ್ಟು ಮಾಡಿದ್ದು ಹೈಕಮಾಂಡ್‌ ಮಟ್ಟದ ನಾಯಕರಿಗೆ ಭಾರೀ ಮುಜುಗರ ತಂದಿತ್ತು.

Share This Article