‘ದಸರಾ’ ಸಿನಿಮಾ ಕೊಂಡಾಡಿದ ರಾಜಮೌಳಿ-ಪ್ರಭಾಸ್-ಪ್ರಿನ್ಸ್

Public TV
2 Min Read

ನ್ಯಾಚುರಲ್ ಸ್ಟಾರ್ ನಾನಿ (Nani) ಹಾಗೂ ಕೀರ್ತಿ ಸುರೇಶ್ ನಟನೆಯ ದಸರಾ (Dasara) ಸಿನಿಮಾಗೆ ಭರಪೂರ ಮೆಚ್ಚುಗೆ ವ್ಯಕ್ತವಾಗ್ತಿದೆ. ಗಲ್ಲಾಪೆಟ್ಟಿಗೆ ಲೂಟಿ ಮಾಡಿರುವ ನಾನಿ ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ. ಶ್ರೀರಾಮನವಮಿ ಪ್ರಯುಕ್ತ ವಿಶ್ವಾದ್ಯಂತ ಬಿಡುಗಡೆಯಾದ ದಸರಾ ಅಬ್ಬರ ಕಲೆಕ್ಷನ್ ಮಾಡಿದ್ದು, ಸೆಲೆಬ್ರಿಟಿಗಳಿಂದಲೂ ಬಹುಪರಾಕ್ ಎನಿಸಿಕೊಂಡಿದೆ.

ದಸರಾ ಮೆಚ್ಚಿದ ಜಕ್ಕಣ್ಣ ಹೇಳಿದ್ದೇನು?

ಚಿತ್ರಬ್ರಹ್ಮ ಎಸ್ ಎಸ್ ರಾಜಮೌಳಿ (Rajamouli) ದಸರಾ ಸಿನಿಮಾವನ್ನು ಬಾಯ್ ತುಂಬ ಹೊಗಳಿದ್ದಾರೆ. ಚಿತ್ರ ನೋಡಿ ತಮ್ಮದೇ ವಿಮರ್ಶೆ ಕೊಟ್ಟಿರುವ ಜಕ್ಕಣ್ಣ, ನಾನಿ ವೃತ್ತಿಜೀವನದ ಅತ್ಯುತ್ತಮ ನಟನೆ, ಶ್ರೀಕಾಂತ್ ಒಡೆಲ ಹೃದಯ ಸ್ಪರ್ಶಿ ಕಥೆ, ಪ್ರತಿಯೊಬ್ಬರ ಅಭಿನಯ ಗಮನಸೆಳೆಯುತ್ತದೆ. ಛಾಯಾಗ್ರಹಣ ಫಸ್ಟ್ ಕ್ಲಾಸ್ ಆಗಿದ್ದು, ಹಿನ್ನೆಲೆ ಸಂಗೀತ ವಿಶೇಷವಾಗಿದೆ. ಭರ್ಜರಿ ಯಶಸ್ಸು ಕಂಡಿರುವ ದಸರಾ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.

ದಸರಾ ಬೆರಗುಗೊಳಿಸುವ ಸಿನಿಮಾ ಎಂದ ಪ್ರಿನ್ಸ್

ದಸರಾ ಸಿನಿಮಾ ನೋಡಿ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಬೆರಗಾಗಿದ್ದಾರೆ. ಚಿತ್ರದ ಬಗ್ಗೆ ಬಹಳ ಹೆಮ್ಮೆ ಇದೆ. ಸ್ಟನ್ನಿಂಗ್ ಸಿನಿಮಾ ಎಂದಿದ್ದಾರೆ. ಇದನ್ನೂ ಓದಿ: ಅವಳಿ ಮಕ್ಕಳ ಹೆಸರನ್ನು ರಿವೀಲ್ ಮಾಡಿದ ನಟಿ ನಯನತಾರಾ

ಧೂಮ್ ಧಾಮ್ ಬ್ಲಾಕ್ ಬಸ್ಟರ್ ಪ್ರಭಾಸ್ ಬಣ್ಣನೆ

ಬಾಹುಬಲಿ ಸೂಪರ್ ಸ್ಟಾರ್ ಡಾರ್ಲಿಂಗ್ ಪ್ರಭಾಸ್ (Prabhas) ದಸರಾ ಸಿನಿಮಾ ಮೆಚ್ಚಿಕೊಂಡಿದ್ದಾರೆ. ಈಗಷ್ಟೇ ದಸರಾ ನೋಡಿದೆ. ಎಂಥ ಅದ್ಭುತ ಸಿನಿಮಾ..ತುಂಬಾ ಇಷ್ಟವಾಯ್ತು,. ನಾನಿ, ಕೀರ್ತಿ ಸುರೇಶ್ ಹಾಗೂ ಶ್ರೀಕಾಂತ್ ಒಡೆಲಾ ಇಡೀ ತಂಡಕ್ಕೆ ಒಳ್ಳೆ ಸಿನಿಮಾ ಮಾಡಿದೆ. ಇದೇ ರೀತಿ ಮತ್ತಷ್ಟು ಸಿನಿಮಾ ಬರಲಿ ಎಂದಿದ್ದಾರೆ ಪ್ರಭಾಸ್.

ದಸರಾ ಸಿನಿಮಾ ಔಟ್ ಅಂಡ್ ಔಟ್ ಮಾಸ್ ಸಿನಿಮಾವಾಗಿದ್ದು, ನಾನಿ ರಗಡ್ ಲುಕ್ ನಲ್ಲಿ ಜಾದು ಮಾಡಿದ್ದಾರೆ. ಕೀರ್ತಿ ಡಿಗ್ಲಾಮರ್ ಲುಕ್ ನಲ್ಲಿ ಬಲು ಸೊಗಸಾಗಿ ನಟಿಸಿದ್ದು,. ಕನ್ನಡದ ದಿಯಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸುಧಾಕರ್ ಚೆರಕೂರಿ ನಿರ್ಮಿಸಿರುವ ದಸರಾಗೆ ಸಂತೋಷ್ ನಾರಾಯಣ್ ಸಂಗೀತ, ಸತ್ಯನ್ ಸೂರ್ಯನ್ ಛಾಯಾಗ್ರಹಣವಿದೆ. ಶೈನ್ ಟಾಮ್ ಚಾಕೋ, ಸಮುದ್ರಖನಿ, ಸಾಯಿಕುಮಾರ್, ಜಾನ್ಸಿ, ಶಮಾ ಖಾಸೀಂ, ರಾಜಶೇಖರ್ ಅನಿಂಗಿ, ರವಿ ತೇಜ ನನ್ನಿಮಾಲಾ ಮುಂತಾದ ತಾರಾಬಳಗ ಚಿತ್ರದಲ್ಲಿದೆ.

Share This Article