ಜಪಾನ್ ಭೂಕಂಪದಿಂದ ಪಾರಾದ ರಾಜಮೌಳಿ & ಟೀಮ್

Public TV
1 Min Read

ಆರ್.ಆರ್.ಆರ್ (RRR) ಸಿನಿಮಾದ ವಿಶೇಷ ಪ್ರದರ್ಶನ ಜಪಾನ್ (Japan) ನಲ್ಲಿ ನಡೆಯುತ್ತಿದೆ. ನಿರ್ದೇಶಕ ರಾಜಮೌಳಿ (Rajamouli), ಅವರ ಪುತ್ರ ಕಾರ್ತಿಕೇನ್ ಸೇರಿದಂತೆ ಚಿತ್ರತಂಡದ ಹಲವು ಸದಸ್ಯರು ಜಪಾನ್‌ನಲ್ಲಿ ಬೀಡು ಬಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಅವರು ಭೂಕಂಪನದ (Earthquake) ಅನುಭವಕ್ಕೆ ತುತ್ತಾಗಿದ್ದಾರೆ. ಆ ಅನುಭವವನ್ನು ರಾಜಮೌಳಿ ಪುತ್ರ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

ಭೂಕಂಪ ಆದಾಗ ರಾಜಮೌಳಿ ಮತ್ತು ಟೀಮ್ ಖಾಸಗಿ ಹೋಟೆಲ್‍ ನ 28ನೇ ಮಹಡಿಯಲ್ಲಿ ವಾಸ್ತವ್ಯ ಹೂಡಿದ್ದರು. ಭೂಕಂಪವಾದಾಗ ಕಟ್ಟಡ ಅಲುಗಾಡಿದ ಅನುಭವ ಕೂಡ ಆಗಿದೆ. ಅಲ್ಲಿ ಭೂಕಂಪದ ತೀವ್ರತೆ ಮತ್ತು ಅಲರ್ಟ್ ಕುರಿತಾಗಿಯೂ ಅವರು ಬರೆದುಕೊಂಡಿದ್ದಾರೆ. ಭೂಕಂಪ ಆಗುವುದಕ್ಕೂ ಮುನ್ನ ಮೊಬೈಲ್ ಗೆ ಅಲರ್ಟ್ ಬಂದಿರುವ ಮೆಸೇಜ್ ಕೂಡ ಹಾಕಿದ್ದಾರೆ.

 

ಆರ್.ಆರ್.ಆರ್ ಸಿನಿಮಾದ ವಿಶೇಷ ಪ್ರದರ್ಶನವು ಜಪಾನ್‌ನಲ್ಲಿ ಹಲವು ದಿನಗಳಿಂದ ನಡೆಯುತ್ತಿದೆ. ಸಿನಿಮಾ ಕುರಿತಂತೆ ರಾಜಮೌಳಿ ನೋಡುಗರ ಜೊತೆ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೇ, ಮುಂದಿನ ಪ್ರಾಜೆಕ್ಟ್ ಬಗ್ಗೆಯೂ ಒಂದಷ್ಟು ವಿಷಯ ರಿವಿಲ್ ಮಾಡಿದ್ದಾರೆ.

Share This Article