`ರಾಜಕುಮಾರ’, `Mr & Mrs ರಾಮಾಚಾರಿ’ ಚಿತ್ರದ ನಿರ್ದೇಶಕರಿಗೆ ನಿಶ್ಚಿತಾರ್ಥ

Public TV
1 Min Read

ಬಳ್ಳಾರಿ: ಸ್ಯಾಂಡಲ್ ವುಡ್ ನಲ್ಲಿ ತೆರೆಕಂಡ ಸೂಪರ್ ಹಿಟ್ ಚಲನಚಿತ್ರಗಳಾದ ರಾಜಕುಮಾರ, ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ ಚಿತ್ರದ ನಿರ್ದೇಶಕ ಸಂತೋಷ ಆನಂದರಾಮ್ ಸಪ್ತಪದಿ ತುಳಿಯಲು ಸಿದ್ಧರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಾನುವಾರ ಅದ್ಧೂರಿಯಾಗಿ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ.

ಮೂಲತಃ ಉಡುಪಿ ಮೂಲದವರಾದ ಸಂತೋಷ್ ಆನಂದರಾಮ್, ಬಳ್ಳಾರಿಯ ಅಲ್ಲಭವನದಲ್ಲಿ ಉದ್ಯಮಿ ಶ್ರೀನಿವಾಸ್‍ರಾವ್ ಪುತ್ರಿ ಸುರಭಿ ಅವರ ಜೊತೆ ಭಾನುವಾರ ಸಂಪ್ರದಾಯಕವಾಗಿ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ.

ಸಂತೋಷ್ ಅವರು ಮದುವೆ ಸಮಾರಂಭವೊಂದರಲ್ಲಿ ಸುರಭಿಯನ್ನು ನೋಡಿ ಮನಸೋತಿದ್ದು, ಪ್ರೀತಿಸಿ ಮದುವೆಯಾಗುತ್ತಿದ್ದಾರೆ. ಈ ಅದ್ಧೂರಿ ಸಮಾರಂಭದಲ್ಲಿ ಸುರಭಿ-ಸಂತೋಷ್ ಕೈಗೆ ರಿಂಗ್ ತೊಡಿಸುವುದರ ಮೂಲಕ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ.

ಸಂತೋಷ್ ನಿಶ್ಚಿತಾರ್ಥಕ್ಕೆ ನಟ ಯಶ್-ರಾಧಿಕಾ ದಂಪತಿ ಬಂದು ಶುಭಾಶಯ ಕೋರಿ ಹಾರೈಸಿದ್ದಾರೆ. ಅಷ್ಟೇ ಅಲ್ಲದೇ ರಾಜಕುಮಾರ ಚಿತ್ರದ ನಂತರ ಸಂತೋಷ್ ಜೊತೆ ಆಪ್ತರಾಗಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಹ ಬಂದು ಶುಭಾಶಯ ಕೋರಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ನೆಚ್ಚಿನ ನಟರನ್ನು ನೋಡಲು ಅಭಿಮಾನಿಗಳು ಅಲ್ಲಭವನದಲ್ಲಿ ಮುಗಿಬಿದ್ದರು.

ಸುರಭಿಗೆ ಕೈಗೆ ರಿಂಗ್ ತೊಡಿಸಿದ ಆನಂದವನ್ನು ಹಚ್ಚಿಕೊಂಡ ಸಂತೋಷ್, ಇದೀಗ ನಾನು ಬಳ್ಳಾರಿ ಅಳಿಯನಾಗಿದ್ದೇನೆ ಎಂದು ಹೇಳಿ ಹರ್ಷವನ್ನು ವ್ಯಕ್ತಪಡಿಸಿದರು. ಅದ್ಧೂರಿ ಚಿತ್ರಗಳ ಮೂಲಕ ಸ್ಯಾಂಡಲ್ ವುಡ್ ನಲ್ಲಿ ನೆಲೆಯೂರಿರುವ ಸಂತೋಷ್ ಆನಂದರಾಮ್ ಇದೀಗ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಮದುವೆಗೆ ಸಿದ್ಧರಾಗಿದ್ದಾರೆ.

 

 

Share This Article
Leave a Comment

Leave a Reply

Your email address will not be published. Required fields are marked *