ಬೆಂಗಳೂರು: ನಗರ ಸೇರಿ ರಾಜ್ಯದಲ್ಲಿ ಇಂದು ಮಳೆ ಬಿಡುವು ನೀಡಿದೆ. ಆದರೆ ಕಳೆದೊಂದು ವಾರದಿಂದ ಸುರಿದ ಭಾರಿ ಮಳೆಯಿಂದ ರಾಜ್ಯದ ಹಲವೆಡೆ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ.
ಮಳೆ ಬಂದು ನಾಲ್ಕು ದಿನ ಕಳೆದ್ರೂ ಬೆಂಗಳೂರಿನ ಸಾಯಿ ಲೇಔಟ್‍ನಲ್ಲಿ ಪೂರ್ಣ ಪ್ರಮಾಣದಲ್ಲಿ ನೀರು ತೆರವಾಗಿಲ್ಲ. ಇದ್ರಿಂದ ಬಾಡಿಗೆದಾರರು ರೋಸಿಹೋಗಿದ್ದು, ಮನೆ ಖಾಲಿ ಮಾಡ್ಕೊಂಡು ಹೋಗ್ತಿದ್ದಾರೆ. ಗದಗದ ಬೆಣ್ಣೆ ಹಳ್ಳ ಪ್ರವಾಹದಿಂದ ಯಾವಗಲ್-ನರಗುಂದ ಸಂಪರ್ಕ ಬಂದ್ ಆಗಿದೆ. ಸೇತುವೆಯ ಮೇಲ್ಭಾಗದಲ್ಲೇ ಹಳ್ಳದ ನೀರು ಹರಿಯುತ್ತಿದ್ದು, ಜನ ಪರದಾಡ್ತಿದ್ದಾರೆ. ಇದನ್ನೂ ಓದಿ: ಅಸ್ಸಾಂನಲ್ಲಿ ಭೀಕರ ಪ್ರವಾಹ – 14ಕ್ಕೇರಿದ ಸಾವಿನ ಸಂಖ್ಯೆ
ಹರಿಹರದ ಶಾಗಲೇ ಹಳ್ಳ, ಜಗಳೂರಿನ ತುಪ್ಪದಹಳ್ಳಿ ಕೆರೆ ಭರ್ತಿಯಾಗಿವೆ. ಮುಧೋಳದ ಮಿರ್ಜಿ ಸೇತುವೆ ಮೇಲೆ ನೀರು ಹರೀತಿರೋದ್ರಿಂದ ಸಂಪರ್ಕ ಸ್ಥಗಿತಗೊಂಡಿದೆ. ಶಿವಮೊಗ್ಗದ ಬಡಾವಣೆಗಳು ಜಲಮುಕ್ತವಾಗಿದ್ದು, ಜನತೆ ಮನೆ ವಸ್ತುಗಳನ್ನು ಒಣಗಿಸ್ತಾ ಇದ್ದಿದ್ದು ಕಂಡುಬಂತು. ಶಿಕಾರಿಪುರದ ಮುರುಗಣ್ಣನ ಕೆರೆ ಕೋಡಿ ಒಡೆದು ಅಡಿಕೆ ತೋಟ ನಾಶವಾಗಿದೆ. ಪರಿಶೀಲನೆಗೆ ಬಂದ ಸಂಸದ ಬಿ.ವೈ ರಾಘವೇಂದ್ರ ಮುಂದೆ ರೈತರು ಕಣ್ಣೀರು ಹಾಕಿದ್ರು. ಇದನ್ನೂ ಓದಿ: ವಾಹನ ಸವಾರರಿಗೆ ಕೇಂದ್ರ ಸರ್ಕಾರದಿಂದ ಗುಡ್‌ನ್ಯೂಸ್ – ಪೆಟ್ರೋಲ್, ಡೀಸೆಲ್ ಅಬಕಾರಿ ಸುಂಕ ಇಳಿಕೆ
ಚನ್ನರಾಯಪಟ್ಟಣದ ಮಾಳೇನಹಳ್ಳಿ ಬಳಿ ಹೇಮಾವತಿ ಕಾಲುವೆ ಕುಸಿದು ಹೋಗಿದೆ. ಕಾಲುವೆಯ ಮೇಲ್ಭಾಗದಲ್ಲಿ ರೈಲ್ವೇ ಮಾರ್ಗ ಹಾದು ಹೋಗಿದೆ. ಅದು ಕೂಡ ಕುಸಿಯುವ ಭೀತಿ ಎದುರಾಗಿದೆ. ಹಾವೇರಿ, ಗದಗ, ದಾವಣಗೆರೆ ಸೇರಿ ಬಹುತೇಕ ಜಿಲ್ಲೆಗಳಲ್ಲಿ ಅಪಾರ ಬೆಳೆ ಹಾಳಾಗಿದೆ.