ರಾಜ್ಯದ ಹಲವೆಡೆ ಮಳೆ ಅವಾಂತರ – ಬೆಳೆ ನಾಶ, ಹೈರಾಣಾದ ಅನ್ನದಾತ

By
2 Min Read

ಬೆಂಗಳೂರು: ರಾಜ್ಯದಲ್ಲಿ ಮಳೆಗೆ (Rain) ಹಲವೆಡೆ ಅವಾಂತರ ಸೃಷ್ಟಿಯಾಗಿದೆ. ಹಾವೇರಿ, ಧಾರವಾಡ, ಬಳ್ಳಾರಿ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರೈತರಿಗೆ ನಿರಂತರ ಮಳೆಯಿಂದಾಗಿ ಬೆಳೆ ಕಳೆದುಕೊಳ್ಳುವ ಭೀತಿ ಎದುರಾಗಿದೆ. ನದಿ ಪ್ರವಾಹಕ್ಕೆ ಮೆಕ್ಕೆಜೋಳ, ಮೆಣಸಿನಕಾಯಿ ಸೇರಿದಂತೆ ತೋಟಗಾರಿಕೆ ಬೆಳೆಗಳು ಸಂಪೂರ್ಣ ನಾಶವಾಗಿದೆ. ಸಾಲಸೂಲ ಮಾಡಿ ಬಿತ್ತನೆ ಮಾಡಿದ ಅನ್ನದಾತರು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ.

ಹಾವೇರಿ ಜಿಲ್ಲೆಯಲ್ಲಿ ತುಂಗಭದ್ರಾ, ವರದಾ, ಕುಮುದ್ವತಿ ಹಾಗೂ ಧರ್ಮಾ ನದಿಗಳು ತುಂಬಿ ಹರಿಯುತ್ತಿವೆ. ನದಿಪಾತ್ರದಲ್ಲಿರೋ ಜಮೀನಿನಲ್ಲಿ ಬೆಳೆದಿರುವ ಮೆಕ್ಕೆಜೋಳ, ಹತ್ತಿ, ಕಬ್ಬು ಹಾಗೂ ಸೋಯಾಬೀನ್ ಬೆಳೆಗಳು ನಾಶವಾಗಿವೆ. ಪ್ರತಿ ಎಕರೆ 15 ರಿಂದ 20 ಸಾವಿರ ರೂ. ಖರ್ಚು ಮಾಡಿ ಬೆಳೆದಿದ್ದ ರೈತರು (Farmers) ಕಂಗಾಲಾಗಿದ್ದಾರೆ. ಇದನ್ನೂ ಓದಿ: Kalaburagi | ಗುಟ್ಕಾ ತಿನ್ನಬೇಡ ಎಂದಿದ್ದಕ್ಕೆ ಬಾಲಕ ಆತ್ಮಹತ್ಯೆ

ಬಳ್ಳಾರಿ ಜಿಲ್ಲೆಯಾದ್ಯಂತ ವಾರದಿಂದ ಸುರಿಯುತ್ತಿರೋ ಜಿಟಿ ಜಿಟಿ ಮಳೆ ಹಿನ್ನೆಲೆ, ಮೆಣಸಿನಕಾಯಿ ಬೆಳೆಗೆ ಕೊಳೆ ರೋಗದ ಭಾದೆ ಶುರುವಾಗಿದ್ದು, ರೈತರು ಕಂಗಾಲಾಗಿದ್ದಾರೆ. ಕಾಂಡ ಕೊಳೆಯುವಿಕೆ, ಕಾಂಡ ಕೊರಕ, ಎಲೆ ಚುಕ್ಕಿ ಹಳದಿ ರೋಗದಿಂದ ಬಳಲುತ್ತಿರುವ ಮೆಣಸಿನಕಾಯಿ ಬೆಳೆ ಉಳಿಸಿಕೊಳ್ಳಲು ರೈತರು ಹೆಣಗಾಡ್ತಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿಂದು ʻಧರ್ಮ ಸಂರಕ್ಷಣಾʼ ಸಮಾವೇಶ

ಆಗಸ್ಟ್ ತಿಂಗಳಲ್ಲಿ ಚಿಕ್ಕಬಳ್ಳಾಪುರದಲ್ಲಿ ಆಲೂಗಡ್ಡೆ ಬಿತ್ತನೆ ಕಾರ್ಯ ಆರಂಭವಾಗುತ್ತದೆ. ಆದರೆ ಈ ಬಾರಿ ಆಗಸ್ಟ್ ತಿಂಗಳು ಕಳೆಯುತ್ತಿದ್ರೂ ಬಿತ್ತನೆ ಕಾರ್ಯ ಆರಂಭವಾಗಿಲ್ಲ. ನಿರಂತರ ಮಳೆಯಿಂದ ರೈತರು ಜಮೀನು ಹದ ಮಾಡೋಕೆ ಆಗಿಲ್ಲ. ರೈತರು ಸಹ ಮಾರುಕಟ್ಟೆಗೆ ಬಂದು ಆಲೂಗಡ್ಡೆ ಬಿತ್ತನೆ ಬೀಜ ಕೇಳ್ತಿಲ್ಲ. ಇದ್ರಿಂದ ಮಾರುಕಟ್ಟೆಯಲ್ಲೇ ಸಾವಿರಾರು ಮೂಟೆ ಆಲೂಗಡ್ಡೆ ಬಿತ್ತನೆ ಬೀಜಗಳು ಕೊಳೆಯುವಂತಾಗಿವೆ. ಇದನ್ನೂ ಓದಿ: ಸಮೀರ್ ಮುಲ್ಲಾನ ಕುತಂತ್ರಕ್ಕೆ ಕೊನೇ ಮೊಳೆ ಹೊಡೆಯೋಣ – ಚಕ್ರವರ್ತಿ ಸೂಲಿಬೆಲೆ

ಇನ್ನು ಧಾರವಾಡದ ನವಲಗುಂದ ಭಾಗದಲ್ಲಿ ಹೆಚ್ಚಾಗಿ ಈರುಳ್ಳಿ ಬೆಳೆ ಬೆಳೆಯಲಾಗುತ್ತಿದ್ದು, ಈಗ ಹಳದಿ ರೋಗಕ್ಕೆ ತುತ್ತಾಗಿದೆ. ಈರುಳ್ಳಿಗೆ ವಿಮೆ ಸಹ ಬಂದಿಲ್ಲ. ಇದರಿಂದ ರೈತ ತೀವ್ರ ಸಂಕಷ್ಟದಲ್ಲಿದ್ದಾರೆ. ಈರುಳ್ಳಿ ಜೊತೆಗೆ ಗೋವಿನ ಜೋಳ, ಹೆಸರು, ಉದ್ದು ಬೆಳೆ ಕೂಡ ಸಂಪೂರ್ಣ ಹಾಳಾಗಿವೆ. ನವಲಗುಂದ ತಾಲೂಕಿಗೆ ಭೇಟಿ ನೀಡಿದ ಸಚಿವ ಲಾಡ್ ಅಲ್ಲಿನ ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಹಂತದ ಅಧಿಕಾರಿಗಳ ಜೊತೆಗೂಡಿ ಪರಿಶೀಲನೆ ಮಾಡಿದರು. ಇದನ್ನೂ ಓದಿ: Bengaluru | ಒನ್ ವೇಯಲ್ಲಿ ಬಂದು ಬೈಕ್‌ಗೆ ಡಿಕ್ಕಿ ಹೊಡೆದ ಕಾರು – ಫ್ಲೈಓವರ್ ಮೇಲಿಂದ ಬಿದ್ದು ಮಹಿಳೆ ಸಾವು

ಒಟ್ಟಿನಲ್ಲಿ ಪ್ರತಿವರ್ಷವೂ ನದಿ ಪಾತ್ರದ ರೈತರು ಸಾಲಸೂಲ ಮಾಡಿ ಬಿತ್ತನೆ ಮಾಡುತ್ತಾರೆ. ಅದರೆ ನಿರಂತರ ಮಳೆಯಿಂದಾಗಿ ರೈತರು ಬೆಳೆದ ಬೆಳೆಗಳು ಸಂಪೂರ್ಣ ನಾಶವಾಗುತ್ತಿವೆ. ಇದನ್ನೂ ಓದಿ: ಮಂಜುನಾಥಸ್ವಾಮಿಗೆ ಬೆದರಿಕೆ – ತುಮಕೂರಿನಲ್ಲಿ ಯೂಟ್ಯೂಬರ್‌ ಅರೆಸ್ಟ್‌

Share This Article