– ಇಡೀ ರಾಜ್ಯಾದ್ಯಂತ ನೀರು ಸರಬರಾಜಿನಲ್ಲಿ ವ್ಯತ್ಯಯ
ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ (Himachal Pradesh) ನಿರಂತರ ಮಳೆಯಿಂದಾಗಿ ಅವಾಂತರಗಳು ಮುಂದುವರಿಯುತ್ತಲೇ ಇವೆ. ಭಾರೀ ಮಳೆಯ ಬಳಿಕ ಹವಾಮಾನ ಇಲಾಖೆ 22 ಸೂಕ್ಷ್ಮ ಪ್ರದೇಶಗಳ ಪೈಕಿ 18 ಸ್ಥಳಗಳಲ್ಲಿ ಭೂಕುಸಿತ (Landslide) ಸಾಧ್ಯತೆಗಳಿರುವುದಾಗಿ ಎಚ್ಚರಿಸಿದೆ.
ಈಗಾಗಲೇ ಮಳೆಯಿಂದ ಸುಮಾರು 130 ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇಡೀ ರಾಜ್ಯದಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಆಗಾಗ್ಗೆ ಬರುತ್ತಿರುವ ಸಣ್ಣ ಸಣ್ಣ ಹಠಾತ್ ಮಳೆಯಿಂದ ರಾಜ್ಯದಲ್ಲಿ 259 ರಸ್ತೆಗಳಲ್ಲಿ ಸಂಚಾರವನ್ನೇ ಬಂದ್ ಮಾಡಲಾಗಿದೆ. ಇದನ್ನೂ ಓದಿ: ʻಪಬ್ಲಿಕ್ ಟಿವಿʼಯ ಅರುಣ್ ಬಡಿಗೇರ್‌ಗೆ ಕೊಪ್ಪಳ ಮೀಡಿಯಾ ಕ್ಲಬ್ ವಾರ್ಷಿಕ ಪ್ರಶಸ್ತಿ
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿಎಂ ಸುಖ್ವಿಂದರ್ ಸಿಂಗ್ ಸುಖು, ಮಂಡಿ, ಕಾಂಗ್ರಾ, ಸೋಲನ್ ಮತ್ತು ಸಿರ್ಮೌರ್ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ನೀಡುವಂತೆ ಸೂಚಿಸಲಾಗಿದೆ. ಹವಾಮಾನ ಇಲಾಖೆ ಎಚ್ಚರಿಕೆ ಬೆನ್ನಲ್ಲೇ ಅಲರ್ಟ್ ಆಗಿದ್ದು, ಸೂಕ್ತ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಇನ್ನೂ ಮಳೆಯಿಂದಾಗಿ ರೈಲು ಸೇವೆಗಳ ಮೇಲೂ ಪರಿಣಾಮ ಬೀರಿದೆ. ಶಿಮ್ಲಾ-ಕಲ್ಕಾ ರೈಲು ಮಾರ್ಗದಲ್ಲಿ ಮರಗಳು ಮತ್ತು ಅವಶೇಷಗಳು ಉರುಳಿ ಬಿದ್ದ ಪರಿಣಾಮ ಬಲವು ಗಂಟೆಗಳ ಕಾಲ ರೈಲು ಸೇವೆಯಲ್ಲಿ ವ್ಯತ್ಯಯವಾಗಿತ್ತು. ಇದನ್ನೂ ಓದಿ: ಕೋಲ್ಕತ್ತಾ ಅತ್ಯಾಚಾರ ಕೇಸ್ – ವಿಡಿಯೋ ಮಾಡಿ, ಬ್ಲ್ಯಾಕ್‌ಮೇಲ್ ಮಾಡಲು ಪ್ಲ್ಯಾನ್ ಮಾಡಿದ್ದ ಆರೋಪಿಗಳು