ದತ್ತ ಪೀಠದ ಬಳಿ ಭಾರೀ ಮಳೆ – ಗಾಳಿಯ ರಭಸಕ್ಕೆ ಹಾರಿಹೋದ ಶೆಡ್!

Public TV
1 Min Read

ಚಿಕ್ಕಮಗಳೂರು: ದತ್ತ ಪೀಠದ ಬಳಿ (Datta peeta) ಭಾರೀ ಗಾಳಿ-ಮಳೆಯಾಗುತ್ತಿದ್ದು (Rain), ದತ್ತ ಜಯಂತಿ (Datta Jayanti) ಪ್ರಯುಕ್ತ ನಿರ್ಮಿಸಲಾಗಿದ್ದ ಶೆಡ್‍ನ ಶೀಟ್‍ಗಳು ಹಾರಿ ಹೋಗಿವೆ.

ದತ್ತ ಜಯಂತಿ ಪ್ರಯುಕ್ತ ಶನಿವಾರದ ವಿಶೇಷ ಪೂಜೆಗೆಂದು ತಾತ್ಕಾಲಿಕವಾಗಿ ಶೆಡ್ ನಿರ್ಮಿಸಲಾಗಿತ್ತು. ಆದರೆ ಭಾರೀ ಗಾಳಿ ಮಳೆಯಿಂದಾಗಿ ಶೆಡ್‍ನ ಶೀಟ್‍ಗಳು ಹಾರಿಹೋಗಿವೆ. ಅಲ್ಲದೇ ದತ್ತಪೀಠದ ಬಳಿ ರಸ್ತೆಯೇ ಕಾಣದಂತೆ ದಟ್ಟ ಮಂಜು ಆವರಿಸಿದೆ.

ಜಿಲ್ಲಾಡಳಿತದಿಂದ ಮತ್ತೆ ಶೆಡ್ ದುರಸ್ಥಿ ಕಾರ್ಯ ನಡೆಯುತ್ತಿದೆ. ಅಲ್ಲದೇ ದತ್ತ ಪೀಠಕ್ಕೆ ಆಗಮಿಸುವ ಭಕ್ತರಿಗೆ ಯಾವುದೇ ಅನಾನೂಕೂಲತೆ ಆಗದಂತೆ ಜಿಲ್ಲಾಡಳಿತ ನಿಗಾ ವಹಿಸಿದೆ.

ಶನಿವಾರ ದತ್ತ ಜಯಂತಿಯ ಕೊನೆಯ ದಿನವಾಗಿದ್ದು, ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಲಿದ್ದಾರೆ. ಈ ಬಾರಿ ಸುಮಾರು 20,000ಕ್ಕೂ ಅಧಿಕ ಭಕ್ತರು ಆಗಮಿಸುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಪೊಲೀಸರು ಜಿಲ್ಲಾದ್ಯಂತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹದ್ದಿನ ಕಣ್ಣಿರಿಸಿದ್ದಾರೆ.

Share This Article