ಭಾರೀ ಮಳೆಗೆ 13 ಸಾವಿರಕ್ಕೂ ಹೆಚ್ಚು ಕೋಳಿಗಳ ಮಾರಣಹೋಮ – ರೈತ ಕಂಗಾಲು

Public TV
1 Min Read

–  50 ಲಕ್ಷ ನಷ್ಟ – ದಿಕ್ಕು ದೋಚದಂತಾದ ರೈತ

ಚಿಕ್ಕಬಳ್ಳಾಪುರ: ಕಳೆದ ರಾತ್ರಿ ಚಿಕ್ಕಬಳ್ಳಾಪುರ ತಾಲೂಕಿನ ದಿಬ್ಬೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗಿದ್ದು, ಗಂಗರೆ ಕಾಲುವೆ ಗ್ರಾಮದಲ್ಲಿ ಕೋಳಿ ಫಾರಂಗೆ ಮಳೆ ನೀರು ನುಗ್ಗಿ 13 ಸಾವಿರಕ್ಕೂ ಹೆಚ್ಚು ಕೋಳಿಗಳ ಮಾರಣ ಹೋಮ ಆಗಿದೆ.

chicken farm

ಗ್ರಾಮದ ಗುಣಭೂಷಣ್ ಅವರ ಕೋಳಿ ಫಾರಂ ಇದಾಗಿದ್ದು, ಸರಿಸುಮಾರು 50 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದು ರೈತ ಗುಣಭೂಷನ್ ತಿಳಿಸಿದ್ದಾರೆ. ಅಂದಹಾಗೆ ಕಳೆದ ರಾತ್ರಿ ಧಾರಕಾರವಾಗಿ ಎಡೆಬಿಡದೇ ಸತತ 4-5 ಗಂಟೆಗಳ ಕಾಲ ಸುರಿದ ಮಳೆಗೆ, ರಾಜಕಾಲುವೆಯಲ್ಲಿ ಹರಿಯಬೇಕಾದ ನೀರು ಕೋಳಿ ಫಾರಂ ಶೆಡ್‍ಗೆ ನುಗ್ಗಿದೆ. ಕೋಳಿ ಫಾರಂ ಶೆಡ್ ತುಂಬಾ 2-3 ಅಡಿ ನೀರು ಶೇಖರಣೆಗೊಂಡು ಕೋಳಿಗಳೆಲ್ಲವೂ ಸಾವನ್ನಪ್ಪಿವೆ. ಇದನ್ನೂ ಓದಿ: ಹೆಚ್‍ಡಿಕೆ ರಾತ್ರಿ 10 ಗಂಟೆ ನಂತ್ರ ಕಣ್ಮುಚ್ಚಿ ಮಲಗಿ ಎಲ್ಲವನ್ನೂ ನೆನಪಿಸ್ಕೊಳ್ಳಲಿ: ಎಸ್‍ಟಿಎಸ್

chicken farm

ಇದೇ ಮೊದಲ ಬಾರಿಗೆ ಕೋಳಿ ಫಾರಂ ಆರಂಭಿಸಿದ್ದ ರೈತ ಗುಣಭೂಷಣ್, ಕಳೆದ ಒಂದು ವರ್ಷದಿಂದ 220 ಅಡಿ ಉದ್ದ 40 ಅಡಿ ಅಗಲದ ಕೋಳಿ ಫಾರಂ ಶೆಡ್ ನಿರ್ಮಾಣ ಕಾರ್ಯ ಮಾಡಿ, ಮೂರು ತಿಂಗಳ ಹಿಂದೆಯಷ್ಟೇ 13 ಸಾವಿರಕ್ಕೂ ಹೆಚ್ಚು ಕೋಳಿಗಳ ಸಾಕಾಣಿಕೆ ಮಾಡಿದ್ದರು. ಇನ್ನೂ ಎರಡು ಮೂರು ದಿನಗಳಲ್ಲಿ ಕೋಳಿಗಳನ್ನು ಮಾರಾಟ ಸಹ ಮಾಡಬೇಕಿತ್ತು. ಆದರೆ ದುರದೃಷ್ಟವಶಾತ್ ಮಳೆಯಿಂದಾಗಿ ಕೋಳಿ ಫಾರಂಗೆ ನೀರು ನುಗ್ಗಿದ್ದು, ಕೋಳಿಗಳು ಸಾವನ್ನಪ್ಪಿದ್ದು, ರೈತನ ಕನಸುಗಳು ನುಚ್ಚು ನೂರಾಗಿದೆ. ಇದನ್ನೂ ಓದಿ: ನಿಮ್ಮ ಜೊತೆ ನಾವಿದ್ದೇವೆ – ಸೂರಪ್ಪ ಬಾಬುಗೆ ಧೈರ್ಯ ತುಂಬಿದ ಕಿಚ್ಚ

chicken farm

ಸದ್ಯ ಮಾರುಕಟ್ಟೆಯಲ್ಲಿ 200 ರಿಂದ 250 ರೂಪಾಯಿಯವರೆಗೂ 1 ಕೆಜಿ ಚಿಕನ್ ಮಾರಾಟವಾಗುತ್ತಿದ್ದು, ಸರಿ ಸುಮಾರು 25 ಟನ್‍ಗೆ 25 ರಿಂದ 30 ಲಕ್ಷ ಆದಾಯ ಕಣ್ಣು ಮುಂದೆಯೇ ನಾಶವಾಗಿದೆ. ನಾನು ನೇಣು ಹಾಕಿಕೊಳ್ಳುವ ಪರಿಸ್ಥಿತಿಯನ್ನು ಮಳೆ ತಂದೊಡ್ಡಿದೆ ಎಂದು ಗುಣಭೂಷಣ್ ನೋವು ತೋಡಿಕೊಂಡಿದ್ದಾರೆ ಮತ್ತು ಸರ್ಕಾರ ಸಹಾಯ ಹಸ್ತ ಚಾಚುವಂತೆ ಮನವಿ ಮಾಡಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *