ದೀಪಾವಳಿಗೆ ರಾಜ್ಯದಲ್ಲಿ ವಿಶೇಷ ರೈಲು ಸಂಚಾರ: ಸೋಮಣ್ಣ

Public TV
1 Min Read

ಬೆಂಗಳೂರು: ದೀಪಾವಳಿ ಹಬ್ಬದ ಸಮಯದಲ್ಲಿ ಪ್ರಯಾಣಿಕರ ದಟ್ಟಣೆ ಜಾಸ್ತಿ ಇರಲಿರುವುದರಿಂದ ಅಕ್ಟೋಬರ್ 31 ರಿಂದ ನವೆಂಬರ್ 2 ವರೆಗೆ ರಾಜ್ಯದ್ಯಂತ ವಿಶೇಷ ರೈಲುಗಳು ಸಂಚರಿಸಲಿವೆ.

ರೈಲ್ವೇ ಖಾತೆಯ ರಾಜ್ಯ ಸಚಿವ ಸೋಮಣ್ಣ ಅವರು ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ತಿಳಿಸಿದ್ದಾರೆ. ಇದನ್ನೂ ಓದಿ: ಹೆಚ್‌ಡಿಕೆ ಚನ್ನಪಟ್ಟಣ ಕ್ಷೇತ್ರವನ್ನು ಯೋಗೇಶ್ವರ್‌ಗೆ ಬಿಟ್ಟುಕೊಡಬೇಕು: ಸಿಪಿವೈ ಪರ ಮುನಿಸ್ವಾಮಿ ಬ್ಯಾಟಿಂಗ್

ಪೋಸ್ಟ್‌ನಲ್ಲಿ ಏನಿದೆ?
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಜನದಟ್ಟಣೆ ನಿಯಂತ್ರಿಸಿ, ಸುಗಮ ಸಂಚಾರಕ್ಕಾಗಿ ವಿಶೇಷ ರೈಲುಗಳ ಸಂಚಾರದ ವ್ಯವಸ್ಥೆ ಮಾಡಲಾಗಿದೆ. ಇದೇ ಅಕ್ಟೋಬರ್ 31 ರಿಂದ ನವೆಂಬರ್ 2 ವರೆಗೆ ರಾಜ್ಯದಾದ್ಯಂತ ವಿಶೇಷ ರೈಲುಗಳು ಸಂಚರಿಸಲಿವೆ.

ರಾಜ್ಯದ ಪ್ರಮುಖ ರೈಲ್ವೆ ನಿಲ್ದಾಣಗಳಾದ ಬೆಳಗಾವಿಯಿಂದ ಮೀರಜ್, ಬೆಂಗಳೂರಿನಿಂದ ಬೆಳಗಾವಿ, ಮೈಸೂರಿನಿಂದ ವಿಜಯಪುರದವರೆಗೆ ಹಾಗೂ ವಿಸ್ತರಿತ ರೈಲ್ವೆ ಮಾರ್ಗ ಹುಬ್ಬಳ್ಳಿಯಿಂದ ರಾಮೇಶ್ವರಂ ಹಾಗೂ ಋಷಿಕೇಶದಿಂದ ಹುಬ್ಬಳ್ಳಿವರೆಗೆ ವಿಶೇಷ ರೈಲುಗಳು ಸಂಚರಿಸಲಿವೆ.

ಪ್ರಯಾಣಿಕರಿಗೆ ಉತ್ತಮ ಸಂಚಾರದ ವ್ಯವಸ್ಥೆ ಕಲ್ಪಿಸಲು ಭಾರತೀಯ ರೈಲ್ವೆ ಒಟ್ಟು 34 ವಿಶೇಷ ರೈಲುಗಳ ವ್ಯವಸ್ಥೆಮಾಡಿದೆ. ಸಾರ್ವಜನಿಕರು ಈ ವಿಶೇಷ ರೈಲುಗಳ ಸೌಲಭ್ಯ ಪಡೆದುಕೊಳ್ಳಿ, ನಿಮ್ಮ ಹಬ್ಬದ ಸಂಭ್ರಮ ಇಮ್ಮಡಿಯಾಗಲಿ ಎಂದು ಪ್ರಾರ್ಥಿಸುತ್ತೇನೆ.

 

Share This Article