ದೇಶದ ಟಾಪ್-3 ಮಾದರಿ ಪೊಲೀಸ್ ಠಾಣೆಯಲ್ಲಿ ರಾಯಚೂರಿನ ಕವಿತಾಳ ಸ್ಟೇಷನ್ – ಕೇಂದ್ರ ಗೃಹ ಇಲಾಖೆಯಿಂದ ಆಯ್ಕೆ

Public TV
1 Min Read

ರಾಯಚೂರು: ಜಿಲ್ಲೆಯ ಸಿರವಾರ (Sirwar) ತಾಲೂಕಿನ ಕವಿತಾಳ ಪೊಲೀಸ್ ಠಾಣೆ (Kavital Police Station) ಕರ್ನಾಟಕ ಪೊಲೀಸ್ ಇಲಾಖೆಗೆ ಗೌರವ ಹೆಚ್ಚಿಸಿದೆ. 2025ರ ಸಾಲಿನಲ್ಲಿ ದೇಶದ ಟಾಪ್ 3 ಮಾದರಿ ಠಾಣೆಗಳಲ್ಲಿ ಕವಿತಾಳ ಪೊಲೀಸ್ ಸ್ಟೇಷನ್ ಸ್ಥಾನ ಪಡೆದಿದೆ.

ದೇಶದ 10 ಠಾಣೆಗಳಿಗೆ ರ‍್ಯಾಂಕ್ ನೀಡಿರುವ ಕೇಂದ್ರ ಗೃಹ ಇಲಾಖೆ ಕವಿತಾಳ ಠಾಣೆಯನ್ನ ಟಾಪ್-3ರಲ್ಲಿ ಆಯ್ಕೆ ಮಾಡಿದೆ. ಜನ ಸಂಪರ್ಕ, ಪೊಲೀಸ್ ಠಾಣಾ ಕಟ್ಟಡದ ಸುವ್ಯವಸ್ಥೆ, ಸಿಬ್ಬಂದಿ ಶಿಸ್ತು ಮತ್ತು ಕಾರ್ಯದಕ್ಷತೆ, ಕಡತಗಳ ವಿಲೇವಾರಿ, ಮೂಲಭೂತ ಸೌಕರ್ಯಗಳು ಸೇರಿದಂತೆ ವಿವಿಧ ಮಾನದಂಡಗಳ ಆಧಾರದ ಮೇಲೆ ಆಯ್ಕೆ ಮಾಡಿದೆ.ಇದನ್ನೂ ಓದಿ: ರಾಹುಲ್ ಗಾಂಧಿಗೆ ರಾಹುಕಾಲ ಶುರು, ಇನ್ಮುಂದೆ ಸಿದ್ದರಾಮಯ್ಯ ಹೇಳಿದಂತೆ ಕೇಳ್ಬೇಕು: ಅಶೋಕ್‌

ರ‍್ಯಾಂಕ್ ಹಿನ್ನೆಲೆ ಕವಿತಾಳ ಠಾಣೆಗೆ ಕೇಂದ್ರ ಸರ್ಕಾರದಿಂದ ವಿಶೇಷ ಸೌಲಭ್ಯಗಳು ದೊರೆಯಲಿವೆ. ಪೀಠೋಪಕರಣ, ಲ್ಯಾಪ್‌ಟಾಪ್ ಸೇರಿದಂತೆ ಕೇಂದ್ರದಿಂದ ವಿಶೇಷ ಸೌಲಭ್ಯಗಳು ಸಿಗಲಿವೆ. ಜಿಲ್ಲೆಯ ಬಳಗಾನೂರು ಹಾಗೂ ಕವಿತಾಳ ಪೊಲೀಸ್ ಠಾಣೆಗಳು ಈ ಸ್ಪರ್ಧೆಯಲ್ಲಿದ್ದವು. ಅಂತಿಮವಾಗಿ ಕವಿತಾಳ ಪೊಲೀಸ್ ಠಾಣೆ ದೇಶದ ಟಾಪ್-3 ಠಾಣೆಯ ಪಟ್ಟಿಗೆ ಸೇರಿದೆ.

ನ.28ರಂದು ಐಐಎಂ ರಾಯಪುರ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವರಿಂದ ಕವಿತಾಳ ಠಾಣೆ ಪಿಎಸ್‌ಐ ಗುರುಚಂದ್ರ ಯಾದವ್ ಟ್ರೋಫಿ ಸ್ವೀಕರಿಸಲಿದ್ದಾರೆ. ಇದಕ್ಕೂ ಮುನ್ನ 2021ರ ಸಾಲಿನಲ್ಲಿ ಮಾನ್ವಿ ಪೊಲೀಸ್ ಠಾಣೆ ಟಾಪ್-5ನೇ ಸ್ಥಾನ ಪಡೆದಿತ್ತು. ಈಗ ಕವಿತಾಳ ಠಾಣೆ ಟಾಪ್-3ನೇ ಸ್ಥಾನ ಪಡೆದಿದೆ.ಇದನ್ನೂ ಓದಿ: ಫರಿದಾಬಾದ್‌ನಲ್ಲಿ ಜಪ್ತಿ ಮಾಡಿದ್ದ ಸ್ಫೋಟಕ ಶ್ರೀನಗರ ಠಾಣೆಯಲ್ಲಿ ಸ್ಫೋಟ – ಇದು ಆಕಸ್ಮಿಕ ಘಟನೆ; ಗೃಹಸಚಿವಾಲಯ, ಡಿಜಿಪಿ ಸ್ಪಷ್ಟನೆ

Share This Article