ಹುಟ್ಟುತ್ತಾ ಆರೋಗ್ಯವಾಗಿ ಹುಟ್ಟುತ್ತಾರೆ, ಬೆಳೆಯುತ್ತಾ ಸಮಸ್ಯೆಗೊಳಗಾಗುತ್ತಾರೆ!

Public TV
1 Min Read

ರಾಯಚೂರು: ತಾಲೂಕಿನ ಕಟಕನೂರು ಗ್ರಾಮ ಅದ್ಯಾವುದೋ ಶಾಪಕ್ಕೆ ಒಳಗಾದಂತೆ ಮಕ್ಕಳ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದೆ. ಹುಟ್ಟುವ ಮಕ್ಕಳು ಆರೋಗ್ಯವಾಗೇ ಹುಟ್ಟುತ್ತಾರೆ. ಆದರೆ ಬೆಳೆಯುತ್ತಾ ನಾನಾ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಇದರಿಂದ ಪೋಷಕರು ಆಸ್ಪತ್ರೆಗಳಿಗೆ ಅಲೆದಾಡಿ ಸುಸ್ತಾಗಿದ್ದಾರೆ. ಆದ್ರೆ ಮಕ್ಕಳ ಸಮಸ್ಯೆಗಳಿಗೆ ಪರಿಹಾರ ಮಾತ್ರ ಸಿಕ್ಕಿಲ್ಲ.

2009ರ ಪ್ರವಾಹದ ಬಳಿಕ ಗ್ರಾಮ 2011ರಲ್ಲಿ ಸಂಪೂರ್ಣ ಸ್ಥಳಾಂತರವಾದ ಮೇಲೆ 10 ತಾಯಂದಿರು ಅವಳಿ ಜವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಹುಟ್ಟುವ ಎರಡು ಮಕ್ಕಳಲ್ಲಿ ಒಂದು ಮಗು ಆರೋಗ್ಯ ಸಮಸ್ಯೆಯನ್ನ ಎದುರಿಸುತ್ತದೆ. ಬುದ್ದಿಮಾಂದ್ಯತೆ, ಅಂಗವಿಕಲತೆ, ಮಾತು ಬಾರದೇ ಇರುವುದು, ಕಿವಿ ಕೇಳಿಸದೆ ಇರುವ ಸಮಸ್ಯೆಯನ್ನ ಇಲ್ಲಿನ ಮಕ್ಕಳು ಎದುರಿಸುತ್ತಿದ್ದಾರೆ. ಸದ್ಯ ಗ್ರಾಮದಲ್ಲಿ 15ಕ್ಕೂ ಹೆಚ್ಚು ಮಕ್ಕಳು ಈ ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನೂ ಓದಿ:  ನಮ್ಮಲ್ಲಿ ಪ್ರಾಣಿಗಳ ಕಾನೂನು ಕಠಿಣ ಇಲ್ಲ – ನಾಯಿ ‘ಲಾರಾ’ ಅಂತ್ಯಕ್ರಿಯೆಗೆ ಬಂದ ರಮ್ಯಾ

ಕೀಲು ನೋವು, ಓಡಾಡಲು ಸಾಧ್ಯವಾಗದೇ ಇರುವುದು ಸೇರಿದಂತೆ ಇಲ್ಲಿನ ಮಕ್ಕಳು ಬೇರೆ ಬೇರೆ ಸಮಸ್ಯೆ ಎದುರಿಸುತ್ತಿರುವುದರಿಂದ ನೀರಿನ ಕುಡಿಯುವ ನೀರಿನಲ್ಲೇ ದೋಷ ಇರಬಹುದಾ ಎಂದು ಜನ ಅನುಮಾನಿಸಿದ್ದಾರೆ. ಬೋರ್‍ವೆಲ್ ನೀರನ್ನೇ ಜನ ಕುಡಿಯಲು ಬಳಸುತ್ತಿರುವುದರಿಂದ ಸಮಸ್ಯೆಗಳು ಎದುರಾಗತ್ತಿರಬಹುದು ಅಂತ ಭಾವಿಸಿದ್ದಾರೆ. ಆದರೆ ಇಂಥಹದ್ದೇ ಸಮಸ್ಯೆ ಅಂತ ಇದುವರೆಗೂ ತಿಳಿದು ಬಂದಿಲ್ಲ. ಇದನ್ನೂ ಓದಿ: Budget 2022: ತಾಲಿಬಾನ್‌ ಆಡಳಿತದ ಅಫ್ಘಾನಿಸ್ತಾನಕ್ಕೆ 200 ಕೋಟಿ ನೆರವು

ಮಕ್ಕಳು ದೈಹಿಕ ಊನತೆ ಅನುಭವಿಸುತ್ತಿರುವುದು ಆಯಾ ಕುಟುಂಬದವರಷ್ಟೆ ಅಲ್ಲದೆ ಇಡೀ ಗ್ರಾಮಸ್ಥರನ್ನ ಚಿಂತೆಗೀಡು ಮಾಡಿದೆ. ಕುಡಿಯುವ ನೀರಿನ ಸಮಸ್ಯೆ ಇರಬಹುದೆ ಎಂಬ ಶಂಕೆ ಕಾಡುತ್ತಿದೆ. ಆದ್ರೆ ಹಳೆಯ ಗ್ರಾಮದಲ್ಲಿ ಇಂತಹ ಘಟನೆ ನಡೆದಿರಲಿಲ್ಲ. ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಗೆ ಕಾರಣ ತಿಳಿಯಬೇಕಿದೆ. ಸಮಸ್ಯೆ ಎದುರಿಸುತ್ತಿರುವ ಮಕ್ಕಳಿಗೆ ಸೂಕ್ತ ಚಿಕಿತ್ಸೆ ಸಿಗಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *