ಮಾಜಿ ಸಿಎಂ ವಿರುದ್ಧ ಅವಾಚ್ಯವಾಗಿ ಮಾತನಾಡಿದ ಕೈ ಕಾರ್ಯಕರ್ತ ಅರೆಸ್ಟ್

Public TV
2 Min Read

– ಸಿದ್ದರಾಮಯ್ಯ ನಿಂದಿಸಿದ ವ್ಯಕ್ತಿಗೆ ಫೇಸ್ ಬುಕ್ ಲೈವ್ ಮೂಲಕ ಟಾಂಗ್ ಕೊಟ್ಲು ಮಹಿಳೆ

ರಾಯಚೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಕಾಂಗ್ರೆಸ್ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತ ಲಾಲಪ್ಪ ನಾಯಕ ಬಂಧಿತ ಆರೋಪಿ. ಲಾಲಪ್ಪನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನವೆಂಬರ್ 17ರ ವರೆಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.

ಏನಿದು ಪ್ರಕರಣ?:
ಲಾಲಪ್ಪ ಕೆಲ ದಿನಗಳ ಹಿಂದೆ ವಿಡಿಯೋ ಮೂಲಕ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಹಾಗೂ ಜಾತಿನಿಂದನೆ ಮಾಡಿ ಮಾತನಾಡಿದ್ದ. ಬಳಿಕ ಅದನ್ನು ಫೇಸ್‍ಬುಕ್, ವಾಟ್ಸಪ್ ಮೂಲಕ ಹರಿಬಿಟ್ಟಿದ್ದನು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಲಾಲಪ್ಪನ ವಿರುದ್ಧ ಕುರುಬ ಸಮಾಜದ ಮುಖಂಡರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಿಶೋರ್ ಬಾಬು ಅವರಿಗೆ ದೂರು ನೀಡಿದ್ದರು.

ದೂರು ದಾಖಲಿಸಿಕೊಂಡಿದ್ದ ಕಿಶೋರ್ ಬಾಬು ಅವರು, ಪಶ್ಚಿಮ ಠಾಣೆ ಪೊಲೀಸರಿಗೆ ಸೂಚನೆ ನೀಡಿ ಬಂಧಿಸಿದ್ದರು. ಆದರೆ ಬೇಲ್ ಪಡೆದು ಲಾಲಪ್ಪ ಬಿಡುಗಡೆ ಆಗಿದ್ದ. ಮತ್ತೆ ಲಾಲಪ್ಪನನ್ನು ಬಂಧಿಸಿ ತಾಲೂಕು ದಂಡಾಧಿಕಾರಿ ಅನಿಲ್ ಕುಮಾರ್ ಮುಂದೆ ಹಾಜರು ಪಡಿಸಲಾಗಿತ್ತು. ಈ ಕುರಿತು ತೀರ್ಪು ನೀಡಿದ ಅನಿಲ್ ಕುಮಾರ್ ಅವರು, ನವೆಂಬರ್ 17ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ ಲಾಲಪ್ಪನ ವಿರುದ್ಧ ಸಿದ್ದರಾಮಯ್ಯ ಅವರ ಅಭಿಮಾನಿಗಳು ಕಿಡಿಕಾರಿದ್ದಾರೆ. ಮಹಿಳೆಯೊಬ್ಬರು ಫೇಸ್ ಬುಕ್ ಲೈವ್ ಮೂಲಕ ಲಾಲಪ್ಪನಿಗೆ ಹಿಗ್ಗಾಮುಗ್ಗ ಬೈದು ಎದುರಿಗೆ ಬರುವಂತೆ ಸವಾಲು ಹಾಕಿದ್ದಾರೆ. ಈ ವಿಡಿಯೋ ಕೂಡ ಸಖತ್ ವೈರಲ್ ಆಗಿದೆ.

ಮಹಿಳೆ ಹೇಳಿದ್ದೇನು?:
ಸಿದ್ದರಾಮಯ್ಯ ನಮ್ಮ ಅಪ್ಪಾಜಿ. ಅವರಿಗೆ ಹಾಗೂ ನಮ್ಮ ಜಾತಿಯ ಕುರಿತು ಲಾಲಪ್ಪ ಅವಾಚ್ಯವಾಗಿ ಮಾತನಾಡಿದ್ದಾರೆ. ಅವನಿಗೆ 24 ಗಂಟೆ ಕಾಲಾವಕಾಶ ನೀಡುತ್ತೇನೆ. ಎಲ್ಲಿದ್ದರೂ ಬಂದು ಉತ್ತರ ಕೊಡಬೇಕು. ಇಲ್ಲದಿದ್ದರೆ ಆತನ ನೀನು ಗಂಡಸು ಅಲ್ಲ. ಎನ್ನುವ ಮೂಲಕ ಅವಾಚ್ಯ ಪದಗಳ ಮೂಲಕ ಮಹಿಳೆ ವಾಗ್ದಾಳಿ ನಡೆಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *