ಕನ್ನಡದ ನಾಡು, ನುಡಿ ಮತ್ತು ಸಾಹಿತಿಗಳ ರಕ್ಷಣೆಗೆ ಕಾಂಗ್ರೆಸ್ ಸದಾ ಬದ್ಧ: ರಾಹುಲ್ ಗಾಂಧಿ

Public TV
1 Min Read

ನವದೆಹಲಿ: ಕರ್ನಾಟಕದ ಜನ ಸದಾ ಸಾಮಾಜಿಕ ನ್ಯಾಯ, ಮಹನೀಯರ ಏಕತೆ ಹಾಗೂ ಮಾನವತಾವಾದದ ತತ್ವಗಳನ್ನ ಪಾಲಿಸಿಕೊಂಡು ಬಂದಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕನ್ನಡದಲ್ಲಿಯೇ ಟ್ವೀಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಿ. ಆರ್ ಅಂಬೇಡ್ಕರ್, ಬುದ್ಧ, ಬಸವಣ್ಣ, ನಾರಾಯಣ ಗುರು, ಕುವೆಂಪು ಮುಂತಾದ ಅನೇಕ ಮಹನೀಯರ ಜೀವನಕ್ಕೆ ಹಾಗೂ ಕರ್ನಾಟಕದ ಅಸ್ಮಿತೆಗೆ ವಿರುದ್ಧವಾದ ಸಂದೇಶಗಳನ್ನು ಪಠ್ಯಪುಸ್ತಕದ ಮೂಲಕ ಮಕ್ಕಳಿಗೆ ಕಲಿಸಲು ಬಿಜೆಪಿ ಹೊರಟಿದೆ ಎಂದಿದ್ದಾರೆ. ಇದನ್ನೂ ಓದಿ: ಮದರಸಾ ತೆರವು ಮಾಡದೆ ಇದ್ದರೆ ನಾವೇ ಅವರ ಕೊರಳಪಟ್ಟಿ ಹಿಡಿದು ಹೊರ ಹಾಕ್ತಿವಿ: ಹಿಂದೂ ಸಂಘಟನೆಗಳು

ಕರ್ನಾಟಕದ ಒಂದು ಕೋಟಿ ಮಕ್ಕಳ ಭವಿಷ್ಯದ ನಿರ್ಧಾರವನ್ನು ಅರ್ಹತೆಯಿಲ್ಲದ ಕೈಗಳಿಗೆ ವಹಿಸಲಾಗಿದೆ. ಸಾಮಾಜಿಕ ನ್ಯಾಯ, ಪ್ರಾದೇಶಿಕತೆ ಮತ್ತು ಲಿಂಗ ಸಮಾನತೆ ಸಾರುವ ಪಾಠಗಳನ್ನು, ಲೇಖಕರನ್ನು ಹೊರಗಿಟ್ಟು ಮಕ್ಕಳಿಗೆ ಕೇಸರೀಕರಣದ ಪಾಠ ಹೇಳಲು ಹೊರಟಿರುವುದು ವೈವಿಧ್ಯತೆಯ ತೊಟ್ಟಿಲಾದ ಭಾರತಕ್ಕೆ ಮಾಡುವ ಅಪಮಾನ ಎಂದು ಹೇಳಿದರು. ಇದನ್ನೂ ಓದಿ: ಖಾಕಿ ಚಡ್ಡಿ ಏನು ಈ ದೇಶದ ರಾಷ್ಟ್ರಧ್ವಜವೇ: ಎನ್‍ಎಸ್‍ಯುಐ ಉಪಾಧ್ಯಕ್ಷೆ

ರಾಜ್ಯದ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಎಲ್ಲರೂ ಒಂದಾಗಿ ಅದನ್ನ ಮೆಟ್ಟಿನಿಲ್ಲುತ್ತಾರೆ ಎನ್ನುವುದನ್ನ ಕನ್ನಡಿಗರು ಹಲವು ಬಾರಿ ತೋರಿಸಿಕೊಟ್ಟಿದ್ದಾರೆ. ಕರ್ನಾಟಕದ ಬಹುತ್ವಕ್ಕೆ ಮಾರಕವಾದ ಪಠ್ಯವನ್ನ ಮಕ್ಕಳ ಮೇಲೆ ಹೇರಲು ಕಾಂಗ್ರೆಸ್ ಬಿಡುವುದಿಲ್ಲ. ಕನ್ನಡದ ನಾಡು, ನುಡಿ ಮತ್ತು ಸಾಹಿತಿಗಳ ರಕ್ಷಣೆಗೆ ಕಾಂಗ್ರೆಸ್ ಸದಾ ಬದ್ಧವಾಗಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *