ಸಂಸದರ ವಿರುದ್ಧ ನೀಡಿದ್ದ ಜೀವಬೆದರಿಕೆ ದೂರನ್ನು ಹಿಂಪಡೆದ ರಾಹುಲ್‌

Public TV
2 Min Read

ನವದೆಹಲಿ: ಇಬ್ಬರು ಸಂಸದರ ವಿರುದ್ಧ ನ್ಯಾಯಾಲಯಕ್ಕೆ ನೀಡಿದ್ದ ಜೀವ ಬೆದರಿಕೆ ದೂರನ್ನು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ (Rahul Gandhi) ಹಿಂದಕ್ಕೆ ಪಡೆದಿದ್ದಾರೆ.

ರಾಹುಲ್‌ ಒಪ್ಪಿಗೆ ಇಲ್ಲದೆ ಕೋರ್ಟ್‌ನಲ್ಲಿ ಜೀವ ಬೆದರಿಕೆ ದೂರನ್ನು ದಾಖಲಿಸಲಾಗಿದೆ. ನಾಳೆ ಈ ದೂರನ್ನು ವಕೀಲರು ಹಿಂದಕ್ಕೆ ಪಡೆಯಲಿದ್ದಾರೆ ಎಂದು ಕಾಂಗ್ರೆಸ್‌ ಸಾಮಾಜಿಕ ಜಾಲತಾಣ ಮುಖ್ಯಸ್ಥ ಸುಪ್ರಿಯಾ ಶ್ರೀನಾಥೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಬೀದಿ ನಾಯಿಗಳ ಹಾವಳಿ ಕೇಸ್‌ ಹೊಸ ತ್ರಿಸದಸ್ಯ ಪೀಠ ರಚಿಸಿದ ಸಿಜೆಐ ಗವಾಯಿ

ಏನಿದು ದೂರು?
ವೀರ್ ಸಾವರ್ಕರ್ ಅವರ ಸಂಬಂಧಿಯೊಬ್ಬರು ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆಯಲ್ಲಿ ರಾಹುಲ್ ಗಾಂಧಿ ಅವರ ವಕೀಲ ಮಿಲಿಂದ್ ಪವಾರ್ ಜೀವಬೆದರಿಕೆ ಸಂಬಂಧ ಪುಣೆ ಕೋರ್ಟ್‌ನಲ್ಲಿ ದೂರು ನೀಡಿದ್ದರು. ಇದನ್ನೂ ಓದಿನಾಳೆ ದರ್ಶನ್‌ ಪಾಲಿಗೆ ಬಿಗ್‌ ಡೇ  ಸುಪ್ರೀಂ ತೀರ್ಪಿನತ್ತ ಚಿತ್ತ, ಮತ್ತೆ ಜೈಲುಪಾಲಾಗ್ತಾರಾ ನಟ?

ಕಳೆದ 15 ದಿನಗಳಿಂದ ರಾಹುಲ್ ಗಾಂಧಿ ಚುನಾವಣಾ ಆಯೋಗದ (Election commission) ವಿರುದ್ಧ ಧ್ವನಿ ಎತ್ತಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರು ಸಂಸದರು ರಾಹುಲ್‌ ಗಾಂಧಿಗೆ ಬೆದರಿಕೆ ಹಾಕಿದ್ದಾರೆ. ರವನೀತ್ ಸಿಂಗ್ ಬಿಟ್ಟು, ರಾಹುಲ್ ಗಾಂಧಿ ದೇಶದ ನಂಬರ್ ಒನ್ ಭಯೋತ್ಪಾದಕ ಎಂದು ಸಾರ್ವಜನಿಕವಾಗಿ ಕರೆದಿದ್ದಾರೆ. ಬಿಜೆಪಿ ನಾಯಕ ತರವಿಂದರ್ ಸಿಂಗ್ ಮಾರ್ವಾ ಅವರು, ನಿಮ್ಮ ಅಜ್ಜಿಯಂತೆಯೇ ನಿಮಗೂ ಗತಿಯಾಗುತ್ತದೆ ಎಂದು ರಾಹುಲ್ ಗಾಂಧಿಗೆ ಬೆದರಿಕೆ ಹಾಕಿದ್ದಾರೆ. ಈ ಕಾರಣಕ್ಕೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದೇನೆ ಎಂದು ತಿಳಿಸಿದ್ದರು.

Share This Article