ಪಾಟ್ನಾ: ಮತಗಳವು ಆರೋಪಕ್ಕೆ ಸಂಬಂಧಿಸಿದಂತೆ ಹೋರಾಟ ತೀವ್ರಗೊಂಡಿದ್ದು, ಬೆಂಗಳೂರು ಮತ್ತು ದೆಹಲಿಯಲ್ಲಿ ಪ್ರತಿಭಟನೆ ಬಳಿಕ ಈಗ ಬಿಹಾರದಲ್ಲಿ ಮತದಾರರ ಹಕ್ಕುಗಳ ಯಾತ್ರೆಗೆ (Vote Adhikar Yatra) ಇಂಡಿಯಾ ಒಕ್ಕೂಟದ ನಾಯಕರು ಚಾಲನೆ ನೀಡಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi), ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್, ಮಾಜಿ ಡಿಸಿಎಂ ತೇಜಸ್ವಿ ಯಾದವ್ ಸೇರಿ ಹಲವು ನಾಯಕರು ಸಸಾರಾಮ್‌ನಿಂದ ಯಾತ್ರೆಗೆ ಚಾಲನೆ ನೀಡಿದರು. ಇದನ್ನೂ ಓದಿ: ಸಾಲು ಸಾಲು ರಜೆ – ಸೋಮವಾರ ಬೆಳಿಗ್ಗೆ 5ರಿಂದ್ಲೇ ಯೆಲ್ಲೋ ಮೆಟ್ರೋ ಆರಂಭ
ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿ ಮತ್ತು ಆರ್‌ಎಸ್‌ಎಸ್ (RSS) ವಿರುದ್ಧ ತೀವ್ರ ದಾಳಿ ನಡೆಸಿದರು. ಇದು ಸಂವಿಧಾನವನ್ನು ಉಳಿಸುವ ಹೋರಾಟ. ಇಡೀ ದೇಶದಲ್ಲಿ, ಆರ್‌ಎಸ್‌ಎಸ್ ಮತ್ತು ಬಿಜೆಪಿ ಅದನ್ನು ಅಳಿಸಿಹಾಕಲು ಪ್ರಯತ್ನಿಸುತ್ತಿವೆ ಎಂದು ಕಿಡಿಕಾರಿದರು. ಇದನ್ನೂ ಓದಿ: ರಿಸಲ್ಟ್ ಪ್ರಕಟವಾದ ಬಳಿಕ ದೂರು ದಾಖಲಿಸದೇ ಆರೋಪ ಮಾಡೋದು ಸಂವಿಧಾನಕ್ಕೆ ಮಾಡೋ ಅವಮಾನ: ಚುನಾವಣಾ ಆಯೋಗ
ಚುನಾವಣಾ ಆಯೋಗದೊಂದಿಗೆ (Election Commission) ಒಪ್ಪಂದ ಮಾಡಿಕೊಳ್ಳುವ ಮೂಲಕ ಬಿಜೆಪಿಯು ವಿಧಾನಸಭಾ ಚುನಾವಣೆಯಿಂದ ಲೋಕಸಭೆ ಸ್ಪರ್ಧೆಗಳವರೆಗೆ ವ್ಯವಸ್ಥಿತವಾಗಿ ಚುನಾವಣೆಗಳಲ್ಲಿ ಅಕ್ರಮ ನಡೆಸುತ್ತಿದೆ. ಕರ್ನಾಟಕದ ಕನಿಷ್ಠ ಒಂದು ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತಗಳನ್ನು ತಿರುಚಲಾಗಿದ್ದು, ಇದು ಬಿಜೆಪಿ ಗೆಲುವಿಗೆ ನೇರ ಕಾರಣ ಎಂದು ಆರೋಪಿಸಿದರು.
ನಾವು ಸುದ್ದಿಗೋಷ್ಠಿ ನಡೆಸಿದ್ದೇವು ಮರುದಿನವೇ, ಚುನಾವಣಾ ಆಯೋಗವು ಅಫಿಡವಿಟ್ ಸಲ್ಲಿಸಲು ನನ್ನನ್ನು ಕೇಳಿದೆ. ಆದರೆ ಅವರು ಇದೇ ರೀತಿಯ ಹೇಳಿಕೆಗಳನ್ನು ನೀಡಿದಾಗ ಬಿಜೆಪಿ ನಾಯಕರಿಂದ ಅದೇ ರೀತಿ ಕೇಳುವುದಿಲ್ಲ. ಇದು ಯಾವ ರೀತಿಯ ನಿಲುವು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಮುಸುಕುದಾರಿಯ ಮಂಪರು ಪರೀಕ್ಷೆ ಮಾಡಿ : ಕೈ ಶಾಸಕ ಸವದಿ ಒತ್ತಾಯ
ಬಿಹಾರದಲ್ಲಿ (Bihar) ಮತ ಕಳ್ಳತನ ನಡೆಯುತ್ತಿದೆ. ಬಿಜೆಪಿ ಮತ್ತೊಂದು ಚುನಾವಣೆಯನ್ನು ಕದಿಯಲು ಬಿಡುವುದಿಲ್ಲ. ಪ್ರಧಾನಿ ಮೋದಿ ನಿಜವಾದ ಜಾತಿ ಜನಗಣತಿಯನ್ನು ನಡೆಸುವುದಿಲ್ಲ ಎಂದು ನನಗೆ ತಿಳಿದಿದೆ. ಆದರೆ ನಾವು ಮಾಡುತ್ತೇವೆ. ನಾವು ಎಸ್‌ಐಆರ್ ಪಿತೂರಿಯನ್ನು ಸಹ ಬಹಿರಂಗಪಡಿಸುತ್ತೇವೆ ಎಂದರು.
ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಪಂಡಿತ್ ನೆಹರು, ಅಂಬೇಡ್ಕರ್, ಸುಭಾಷ್ ಚಂದ್ರ ಬೋಸ್, ಮಹಾತ್ಮ ಗಾಂಧಿ ಅವರು ನಿಮ್ಮ ಮತದಾನದ ಹಕ್ಕಿಗಾಗಿ ಹೋರಾಡಿದರು. ಈಗ ಆ ಹಕ್ಕನ್ನು ಕೆಂಪು ಕೋಟೆಯಿಂದಲೇ ಪ್ರಶ್ನಿಸಲಾಗುತ್ತಿದೆ. ಮತದಾರರ ಅಧಿಕಾರ ಯಾತ್ರೆ ಕೇವಲ ರಾಜಕೀಯ ಅಭಿಯಾನವಲ್ಲ. ಬದಲಾಗಿ ಭಾರತದ ಆತ್ಮಕ್ಕಾಗಿ ಹೋರಾಟ ಮತದಾನದ ಹಕ್ಕು ಬಡವರಿಗೆ, ಅಂಚಿನಲ್ಲಿರುವವರಿಗೆ, ಎಲ್ಲರಿಗೂ ಸೇರಿದ್ದು. ಅಧಿಕಾರಶಾಹಿ ಕುಶಲತೆ ಅಥವಾ ಡಿಜಿಟಲ್ ಕಳ್ಳತನದಿಂದ ಅವುಗಳನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಗುಡುಗಿದರು. ಇದನ್ನೂ ಓದಿ: ಜನರ ಆಶೀರ್ವಾದ ಇನ್ನೂ ಜೀರ್ಣಿಸಿಕೊಳ್ಳೋಕೆ ಆಗ್ತಿಲ್ಲ – ಮತಗಳವು ಆರೋಪ ಮಾಡಿದ್ದ ರಾಗಾ ವಿರುದ್ಧ ಮೋದಿ ಕಿಡಿ
ಮತ ಕಳ್ಳತನ ಅಲ್ಲ, ಇದು ಡಕಾಯಿತಿ
ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಮಾತನಾಡಿ, ಮತದಾರರ ಪಟ್ಟಿಯಿಂದ ತಮ್ಮ ಹೆಸರುಗಳನ್ನು ಅಳಿಸಲು ಅವರು ಜನರನ್ನು ಸತ್ತರು ಎಂದು ಘೋಷಿಸುತ್ತಿದ್ದಾರೆ. ಇದು ಬರೀ ಮತ ಕಳ್ಳತನ ಅಲ್ಲ, ಇದು ಡಕಾಯಿತಿ. ಬಿಹಾರ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಮೋದಿ ಮತ್ತು ಅಮಿತ್ ಶಾ ಅರಿತುಕೊಳ್ಳಬೇಕು. ಚುನಾವಣಾ ಆಯೋಗದಂತಹ ಸಂಸ್ಥೆಗಳನ್ನು ಬಳಸಿಕೊಂಡು ಅಂಚಿನಲ್ಲಿರುವವರ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ಈ ಯಾತ್ರೆಯು 16 ದಿನಗಳ ಕಾಲ (ಆ.17 ರಿಂದ ಸೆ.1) ಬಿಹಾರದ ವಿವಿಧ ಜಿಲ್ಲೆಗಳಾದ ಸಾಸಾರಾಮ್, ಗಯಾ, ಮುಂಗೇರ್, ಭಾಗಲ್ಪುರ್, ಕತಿಹಾರ್, ಪೂರ್ಣಿಯಾ, ಮಧುಬನಿ, ದರ್ಭಂಗಾ ಮತ್ತು ಪಶ್ಚಿಮ ಚಂಪಾರಣ್ ಮೂಲಕ ಯಾತ್ರೆ ಸಾಗಲಿದೆ. ಸೆ.1 ರಂದು ಪಾಟ್ನಾದ ಗಾಂಧಿ ಮೈದಾನದಲ್ಲಿ ಬೃಹತ್ ರ‍್ಯಾಲಿಯೊಂದಿಗೆ ಯಾತ್ರೆಯು ಮುಕ್ತಾಯಗೊಳ್ಳಲಿದೆ. ರಾಹುಲ್ ಗಾಂಧಿ ಜೊತೆಗೆ ತೇಜಸ್ವಿ ಯಾದವ್ ಮತ್ತು ಇಂಡಿಯಾ ಮೈತ್ರಿಕೂಟದ ಇತರ ನಾಯಕರು ಅಂತಿಮ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮತದಾರರ ಹಕ್ಕುಗಳ ಯಾತ್ರೆ ವಿಶೇಷ ಮತದಾರರ ಪರಿಷ್ಕರಣೆ ವಿರೋಧಿಸುವುದು, ಮತಗಳವು ತಡೆಯುವ ಉದ್ದೇಶವು ಹೊಂದಿದೆ.