ರಾಹುಲ್ ಗಾಂಧಿ ಪಿಎಂ ಆಗೋವರೆಗೂ ನಾನು ಮದ್ವೆಯಾಗಲ್ಲ ಎಂದ ಯುವಕ

Public TV
1 Min Read

ಚಂಡೀಗಢ: ಎಐಸಿಸಿ ಉಪಾಧ್ಯಕ್ಷರಾಗಿರುವ ರಾಹುಲ್ ಗಾಂಧಿ ಅವರು ದೇಶದ ಪ್ರಧಾನಿಯಾಗಿ ಆಯ್ಕೆಯಾಗುವರೆಗೂ ನಾನು ಮದುವೆಯಾಗುವುದಿಲ್ಲ ಎಂದು ಹರ್ಯಾಣ ಯುವಕರೊಬ್ಬರು ಪಣ ತೊಟ್ಟು ಸುದ್ದಿಯಾಗಿದ್ದಾರೆ.

ರಾಹುಲ್ ಗಾಂಧಿಯವರ ಅಪ್ಪಟ ಅಭಿಮಾನಿಯಾಗಿರುವ ಜಿಂದ್ ಮೂಲದ ದಿನೇಶ್ ಶರ್ಮಾ ಅವರಿಗೆ ಈಗ 23 ವರ್ಷ. ರಾಹುಲ್ ಗಾಂಧಿಯವರು ಪ್ರಧಾನಿಯಾಗುವ ಕನಸು ಕಂಡಿರುವ ದಿನೇಶ್ ಶರ್ಮಾ ಕಳೆದ ಏಳು ವರ್ಷದಿಂದ ಅವರ ಎಲ್ಲಾ ಕಾರ್ಯಕ್ರಮಕ್ಕೆ ಹಾಜರಿ ಹಾಕುತ್ತಾರೆ.

ಕಾಂಗ್ರೆಸ್ ಪಕ್ಷವನ್ನು ಅವರು ಎಷ್ಟು ಪ್ರೀತಿಸುತ್ತಾರೆ ಎಂದು ಕಾರ್ಯಕ್ರಮದಲ್ಲಿ ಪಕ್ಷದ ಚಿಹ್ನೆ ಇರುವ ವಸ್ತ್ರವನ್ನೇ ಧರಿಸುತ್ತಾರೆ. ಕೈಯಲ್ಲಿ ಕಾಂಗ್ರೆಸ್ ಧ್ವಜ, ತಲೆಗೆ ಕೇಸರಿ ಟೋಪಿ ಧರಿಸಿ ಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ.

ರಾಹುಲ್ ಮೇಲಿನ ಅಭಿಮಾನಕ್ಕೆ ದಿನೇಶ್ ಶರ್ಮಾ ಮದುವೆ ಮಾತ್ರವಲ್ಲ ಅವರು ಹೋಗುವ ಕಡೆಯಲ್ಲಿ ಚಪ್ಪಲಿಯನ್ನೂ ಹಾಕದೇ ಓಡಾಡುವುದು ವಿಶೇಷ.

ಅಭಿಮಾನಿ ದಿನೇಶ್ ಶರ್ಮಾ ಅವರ ಈ ಎಲ್ಲಾ ವಿಚಾರಗಳು ರಾಹುಲ್ ಗಾಂಧಿಯವರಿಗೆ ತಿಳಿದಿವೆಯೋ ಇಲ್ಲವೋ ಗೊತ್ತಿಲ್ಲ. ಈ ಕುರಿತು ಮಾಹಿತಿ ಸಿಕ್ಕಿಲ್ಲ.

Share This Article
Leave a Comment

Leave a Reply

Your email address will not be published. Required fields are marked *