ಬೆಂಗಳೂರು: ರಾಜ್ಯ ರಾಜಕಾರಣದ ಟಗರು ಸಿದ್ದರಾಮಯ್ಯರಿಗೆ ಹೈಕಮಾಂಡ್ ನಾಯಕ ರಾಹುಲ್ ಗಾಂಧಿ ವಿಶೇಷ ಆಹ್ವಾನ ಕೊಟ್ಟಿದ್ದಾರೆ. ರಾಜ್ಯ ರಾಜಕಾರಣದ ಗೊಂದಲಗಳು ಯಾಕೆ ಬಂದು ಬಿಡಿ ದೆಹಲಿ ಪಡಸಾಲೆಗೆ ಅನ್ನೋದು ರಾಹುಲ್ ಗಾಂಧಿಯವರ ಆಫರ್. ಸಿದ್ದರಾಮಯ್ಯಗಿರುವ ಅಹಿಂದ ಇಮೇಜ್ ನ್ನು ರಾಷ್ಟ್ರ ಮಟ್ಟದಲ್ಲೂ ಬಳಸಿಕೊಳ್ಳುವುದು ಮತ್ತು ಆ ಮೂಲಕ ಪಕ್ಷ ಸಂಘಟನೆಗೆ ಮುಂದಾಗುವುದು ರಾಹುಲ್ ಗಾಂಧಿಯವರ ಪ್ಲಾನ್ ಎನ್ನಲಾಗಿದೆ.
ಆದರೆ ರಾಜ್ಯ ರಾಜಕಾರಣದಲ್ಲೇ ಇನ್ನೊಮ್ಮೆ ಒಂದು ಕೈ ನೋಡಬೇಕು ಎಂಬ ಆಸೆ ಇಟ್ಟುಕೊಂಡಿರುವ ಸಿದ್ದರಾಮಯ್ಯ ತಮಗೆ ಹಿಂದಿ ಮಾತನಾಡೋಕೆ ಬರಲ್ಲ ಬೇಡ ಎಂದು ಕಡ್ಡಿ ತುಂಡಾದಂತೆ ಹೇಳಿದ್ದಾರೆ. ದೆಹಲಿ ಮಟ್ಟದ ರಾಜಕಾರಣ ಅಂದರೆ ಹಿಂದಿ ಮೇಲೆ ಹಿಡಿತ ಇರಬೇಕು. ಹಿಂದಿ ನನಗೆ ಅಷ್ಟಾಗಿ ಅರ್ಥ ಆಗಲ್ಲ. ಅಲ್ಲದೆ ಹಿಂದಿ ಮಾತನಾಡಲು ನನಗೆ ಬರಲ್ಲ. ಅಲ್ಲದೆ ರಾಷ್ಟ್ರ ರಾಜಕಾರಣದ ಬಗ್ಗೆ ನನಗೆ ಆಸಕ್ತಿಯು ಇಲ್ಲಾ ರಾಜ್ಯ ರಾಜಕಾರಣವೆ ಸಾಕು ಎಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹೀಗೆ ದೆಹಲಿಗೆ ಬನ್ನಿ ಅಂತ ಸ್ವತಃ ರಾಹುಲ್ ಗಾಂಧಿಯವರೆ ಆಹ್ವಾನ ಕೊಟ್ಟರು ಮಾಜಿ ಸಿಎಂ ಮಾತ್ರ ನಕೋ ನಕೊ ಅಂತ ಹಿಂದೇಟು ಹಾಕಿದ ಇಂಟರೆಸ್ಟಿಂಗ್ ಸುದ್ದಿ ಕಾಂಗ್ರೆಸ್ ಪಾಳಯದಿಂದ ಹೊರ ಬಿದ್ದಿದೆ.