ಸರ್ಕಾರದ ಎಲ್ಲ ಸಂಸ್ಥೆಗಳಲ್ಲೂ RSS ತನ್ನ ಜನರನ್ನಿರಿಸಿದೆ – ರಾಹುಲ್ ಗಾಂಧಿ ಆರೋಪ

Public TV
1 Min Read

ಲೇಹ್: ಆಡಳಿತಾರೂಢ ಬಿಜೆಪಿಯ (BJP) ಸೈದ್ಧಾಂತಿಕ ಪೋಷಕರಾಗಿರುವ ಆರ್‌ಎಸ್‌ಎಸ್‌ (RSS) ಸರ್ಕಾರದ ಪ್ರತಿ ಸಂಸ್ಥೆಯಲ್ಲೂ ತನ್ನ ಜನರನ್ನ ಇರಿಸುತ್ತಿದೆ, ಅವರ ಮೂಲಕ ಎಲ್ಲವನ್ನೂ ನಡೆಸುತ್ತಿದೆ ಎಂದು ವಯನಾಡ್ ಸಂಸದ ರಾಹುಲ್ ಗಾಂಧಿ (Rahul Gandhi) ಆರೋಪಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರವನ್ನು (Jammu And Kashmir) ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿದ ನಂತರ ಮೊದಲ ಬಾರಿಗೆ ಲಡಾಖ್‌ಗೆ ಭೇಟಿ ನೀಡಿರುವ ಅವರು ಲೇಹ್ ನಲ್ಲಿ ಯುವಕರೊಂದಿಗೆ ಸಂವಾದ ನಡೆಸಿದ್ದಾರೆ. ಈ ಸಂವಾದದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ವಿರುದ್ಧ ಗಂಭೀರ ಆರೋಪ‌ ಮಾಡಿದ್ದಾರೆ. ಇದನ್ನೂ ಓದಿ: 7 ಶಿಶುಗಳನ್ನ ಹತ್ಯೆ ಮಾಡಿದ್ದ ಬ್ರಿಟಿಷ್‌ ನರ್ಸ್‌ – ಭಾರತೀಯ ಮೂಲದ ವೈದ್ಯನಿಂದ ಸಿಕ್ಕಿಬಿದ್ದಳು ಹಂತಕಿ

ನೀವು ಕೇಂದ್ರ ಸರ್ಕಾರದ (Union Government) ಯಾವುದೇ ಸಚಿವರನ್ನ ಕೇಳಿದರೂ, ಅವರು ನಿಜವಾಗಿಯೂ ತಮ್ಮ ಸಚಿವಾಲಯಗಳನ್ನ ನಡೆಸುತ್ತಿಲ್ಲ ಎಂದೇ ನಿಮಗೆ ಹೇಳುತ್ತಾರೆ. ಆರ್‌ಎಸ್‌ಎಸ್‌ನಿಂದ ನಿಯೋಜಿತವಾದ ವ್ಯಕ್ತಿಗಳು ವಾಸ್ತವವಾಗಿ ಈ ಸಚಿವಾಲಯಗಳನ್ನ ನಡೆಸುತ್ತಿದ್ದಾರೆ. ಅವರೇ ಏನು ಮಾಡಬೇಕೆಂದು ಅವರೇ ಸೂಚಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 21 ಚರ್ಚ್‌ಗಳನ್ನು ಧ್ವಂಸಗೊಳಿಸಿದ 600 ಜನರ ಮೇಲೆ ಕೇಸ್ – 135 ಆರೋಪಿಗಳನ್ನು ಬಂಧಿಸಿದ ಪಾಕ್ ಪೊಲೀಸರು

1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು, ಭಾರತದಲ್ಲಿ ಸ್ವಾತಂತ್ರ್ಯದ ಬಲವರ್ಧನೆಯು ಸಂವಿಧಾನವಾಗಿದೆ. ನೀವು ಸಂವಿಧಾನವನ್ನ ಕಾರ್ಯರೂಪಕ್ಕೆ ತರುವ ವಿಧಾನವೆಂದರೆ ಸಂವಿಧಾನದ ದೃಷ್ಟಿಕೋನವನ್ನು ಬೆಂಬಲಿಸುವ ಸಂಸ್ಥೆಗಳನ್ನು ಸ್ಥಾಪಿಸುವುದು. ಬಿಜೆಪಿ ಮತ್ತು ಆರ್‌ಎಸ್‌ಎಸ್ ಮಾಡುತ್ತಿರುವುದು ತಮ್ಮದೇ ಆದ ಜನರನ್ನು ಸಾಂಸ್ಥಿಕ ರಚನೆಯ ಪ್ರಮುಖ ಸ್ಥಾನಗಳಲ್ಲಿ ಇರಿಸುವುದು ಎಂದು ಕಿಡಿ ಕಾರಿದ್ದಾರೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್