ಅನ್ನ ನೀಡುವ ರೈತರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿ: ರಾಹುಲ್ ಗಾಂಧಿ

Public TV
1 Min Read

ನವದೆಹಲಿ: ಅನ್ನ ನೀಡುವ ರೈತರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿ. ಅವರು ಬೆಳೆದ ಭತ್ತವನ್ನು ಖರೀದಿಸಿ ಎಂದು ರಾಹುಲ್ ಗಾಂಧಿ ಸೋಶಿಯಲ್ ಮೀಡಿಯಾ ಮೂಲಕವಾಗಿ ಮನವಿ ಮಾಡಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?: ರೈತ ವಿರೋಧಿ ನೀತಿಗಳ ಮೂಲಕ ಅನ್ನ ನೀಡುವ ರೈತರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿ. ಕಟಾವು ಮಾಡಿದ ಪ್ರತಿ ಧಾನ್ಯವನ್ನು ಖರೀದಿಸಿ. ತೆಲಂಗಾಣದಲ್ಲಿ ರೈತರು ಬೆಳೆದ ಬೆಲೆಯನ್ನು ಖರೀದಿಸುವವರೆಗೂ ಕಾಂಗ್ರೆಸ್ ಪಕ್ಷವು ರೈತರ ಪರವಾಗಿ ಹೋರಾಟವನ್ನು ಮುಂದುವರೆಸಲಿದೆ.

ತೆಲಂಗಾಣದಲ್ಲಿ ರೈತರು ಬೆಳೆದಿರುವ ಭಕ್ತ ಖರೀದಿ ವಿಚಾರವಾಗಿ ಟಿಆರ್‌ಎಸ್‌ ಹಾಗೂ ಬಿಜೆಪಿ ನಡುವಿನ ವಾಕ್ಸಮರಕ್ಕೆ ಇದೀಗ ಕಾಂಗ್ರೆಸ್ ಎಂಟ್ರಿ ಕೊಟ್ಟಿದೆ. ತೆಲಂಗಾಣ ರೈತರ ಧಾನ್ಯಗಳನ್ನು ಖರೀದಿಸುವ ವಿಷಯದಲ್ಲಿ ಬಿಜೆಪಿ, ಟಿಆರ್‌ಎಸ್‌  ಸರ್ಕಾರಗಳು ತಮ್ಮ ನೈತಿಕ ಹೊಣೆಗಾರಿಕೆಯನ್ನು ನಿರ್ಲಕ್ಷಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ. ಇದನ್ನೂ ಓದಿ: ಪ್ರಶಾಂತ್ ಸಂಬರಗಿ ಸಾರಥ್ಯದಲ್ಲಿ ಸಿನಿಮಾವಾಗ್ತಿದೆ ‘ಆಗಸ್ಟ್ 15’ರ ಸ್ಟೋರಿ

ರಾಹುಲ್ ಗಾಂಧಿ ಅವರ ಟ್ವೀಟ್‍ಗೆ ತೀಕ್ಷಣವಾಗಿ ಪ್ರತಿಕ್ರಿಯಿಸಿರುವ ಟಿಆರ್‌ಎಸ್‌ನ ಮಾಜಿ ಸಂಸದೆ ಕವಿತಾ ಕಲ್ವಕುಂಟ್ಲಾ, ರಾಜಕೀಯ ಲಾಭಕ್ಕಾಗಿ ಟ್ವಿಟರ್‌ನಲ್ಲಿ ಒಗ್ಗಟ್ಟು ಪ್ರದರ್ಶಿಸುವುದು ಅಲ್ಲ, ನೀವು ಪ್ರಾಮಾಣಿಕರಾಗಿದ್ದರೆ ತೆಲಂಗಾಣ ಸಂಸದರನ್ನು ಬೆಂಬಲಿಸಿ ಲೋಕಸಭೆಯಲ್ಲಿ ಬಾವಿಗಿಳಿದು ಪ್ರತಿಭಟ ಮಾಡಿ. ನಮ್ಮ ಬೇಡಿಕೆ ಒಂದು ದೇಶ ಏಕ ಖರೀದಿ ನೀತಿಯಾಗಿದೆ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಟಿಪ್ಪು ಇತಿಹಾಸ ತಾಲಿಬಾನ್‌, ಐಸಿಸ್‌ ಮತಾಂಧರಷ್ಟೇ ಘೋರ: ಬಿಜೆಪಿ ವಾಗ್ದಾಳಿ

Share This Article
Leave a Comment

Leave a Reply

Your email address will not be published. Required fields are marked *