ಬಡ ವರ್ಗಗಳ ಏಳಿಗೆ ಕಾಂಗ್ರೆಸ್‍ನಿಂದ ಮಾತ್ರ ಸಾಧ್ಯ: ರಾಹುಲ್ ಗಾಂಧಿ

By
1 Min Read

ನವದೆಹಲಿ: ಕಾಂಗ್ರೆಸ್ ಪಕ್ಷವೊಂದೇ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಕಲ್ಯಾಣಕ್ಕಾಗಿ ಆಡಳಿತ ನಡೆಸುತ್ತದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಿಳಿಸಿದರು.

ಗೃಹಬಳಕೆಯ ಎಲ್‍ಪಿಜಿ ಸಿಲಿಂಡರ್‌ನ ಬೆಲೆ ಏರಿಕೆ ಕುರಿತು ವಾಗ್ದಾಳಿ ನಡೆಸಿದ ಅವರು, ಅಡುಗೆ ಅನಿಲ ಎಲ್‍ಪಿಜಿ ಬೆಲೆಯನ್ನು ಪ್ರತಿ ಸಿಲಿಂಡರ್‍ಗೆ 50 ರೂ. ಹೆಚ್ಚಿಸಲಾಗಿದೆ. ಅಂತಾರಾಷ್ಟ್ರೀಯ ಇಂಧನ ದರಗಳನ್ನು ದೃಢಪಡಿಸಿದ ನಂತರ ದೇಶದಲ್ಲಿ ಕೇವಲ ಆರು ವಾರಗಳಲ್ಲಿ ಎರಡನೇ ಬಾರಿಗೆ ಬೆಲೆ ಏರಿಕೆಯಾಗಿದೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಅಂದರೆ 2014ರಲ್ಲಿ 827ರೂ. ಸಬ್ಸಿಡಿಯೊಂದಿಗೆ 410 ರೂ. ಗೃಹಬಳಕೆಯ ಎಲ್‍ಪಿಜಿ ಸಿಲಿಂಡರ್‌ನ ಬೆಲೆಯಿತ್ತು. ಆದರೆ 2022ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಶೂನ್ಯ ಸಬ್ಸಿಡಿಯೊಂದಿಗೆ 999 ರೂ. ಕ್ಕಿಂತ ಹೆಚ್ಚು ಬೆಲೆಗೆ ಹೆಚ್ಚಿಸಿದ್ದಾರೆ ಎಂದು ಟ್ವೀಟ್‍ನಲ್ಲಿ ಟೀಕಿಸಿದರು.

ಮುಂಚೆ 2 ಸಿಲಿಂಡರ್‌ಗಿದ್ದ ಬೆಲೆಯಷ್ಟು 1 ಸಿಲಿಂಡರ್ ಬೆಲೆ ಆಗಿದೆ. ಇದರಿಂದಾಗಿ ಬಡ ಮತ್ತು ಮಧ್ಯಮ ವರ್ಗದ ಭಾರತೀಯ ಕುಟುಂಬಗಳ ಕಲ್ಯಾಣಕ್ಕಾಗಿ ಕಾಂಗ್ರೆಸ್ ಮಾತ್ರ ಆಡಳಿತ ನಡೆಸುತ್ತದೆ ಎಂದರು. ಇದನ್ನೂ ಓದಿ: ಹುತಾತ್ಮ ಯೋಧ ಹರ್ದೀಪ್ ಸಿಂಗ್ ಕುಟುಂಬಕ್ಕೆ 1 ಕೋಟಿ ಪರಿಹಾರ ಘೋಷಿಸಿದ ಭಗವಂತ್ ಮಾನ್

ಬೆಲೆ ಏರಿಕೆಯಿಂದಾಗಿ ಲಕ್ಷಾಂತರ ಭಾರತೀಯ ಕುಟುಂಬಗಳು ತೀವ್ರ ಹಣದುಬ್ಬರ, ನಿರುದ್ಯೋಗ ಮತ್ತು ಕಳಪೆ ಆಡಳಿತದ ವಿರುದ್ಧ ಕಠಿಣ ಹೋರಾಟವನ್ನು ನಡೆಸುತ್ತಿವೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಹುತಾತ್ಮ ಯೋಧ ಹರ್ದೀಪ್ ಸಿಂಗ್ ಕುಟುಂಬಕ್ಕೆ 1 ಕೋಟಿ ಪರಿಹಾರ ಘೋಷಿಸಿದ ಭಗವಂತ್ ಮಾನ್

Share This Article
Leave a Comment

Leave a Reply

Your email address will not be published. Required fields are marked *