ಸಣ್ಣ ತಿಲಕವಿಡಿ- ಅರ್ಚಕರ ಬಳಿ ರಾಹುಲ್‌ ಗಾಂಧಿ ಕೇಳಿಕೊಂಡ ವೀಡಿಯೋ ವೈರಲ್‌

By
1 Min Read

– ಚುನಾವಣಾ ಹಿಂದೂವೆಂದು ಬಿಜೆಪಿ ಟೀಕೆ

ಭುವನೇಶ್ವರ್: ಇತ್ತೀಚೆಗೆ ಹಂಪಿ ಉತ್ಸವದ ವೇಳೆ ಕುಂಕುಮ ಇಟ್ಟುಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನಿರಾಕರಿಸಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ಬೆನ್ನಲ್ಲೇ ಇಂದು ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿಯವರು (Rahul Gandhi) ಸಣ್ಣ ತಿಲಕವಿಡಿ ಎಂದು ಅರ್ಚಕರನ್ನು ಕೇಳಿಕೊಂಡ ವೀಡಿಯೋ ಭಾರೀ ಸದ್ದು ಮಾಡುತ್ತಿದೆ.

ಹೌದು. ವಯನಾಡ್ ಸಂಸದ ರಾಹುಲ್ ಗಾಂಧಿಯವರು ಇಂದು ಒಡಿಶಾದ ರೂರ್ಕೆಲಾದಲ್ಲಿರುವ ವೇದವ್ಯಾಸ್ ದೇವಸ್ಥಾನಕ್ಕೆ ಭೇಟಿ (Vedvyas temple in Rourkela, Odisha) ನೀಡಿ ಪ್ರಾರ್ಥನೆ ಸಲ್ಲಿಸಿದರು. ದೇಗುಲಕ್ಕೆ ಭೇಟಿ ನೀಡಿ ಅಲ್ಲಿನ ಅರ್ಚಕರ ಜೊತೆ ಸಣ್ಣ ತಿಲಕವನ್ನು ಇಡುವಂತೆ ರಾಹುಲ್‌ ಗಾಂಧಿ ಕೇಳಿಕೊಂಡಿದ್ದಾರೆ. ಇದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

ಬಿಜೆಪಿ ನಾಯಕರು ರಾಗಾ ದೇವಾಲಯ ಭೇಟಿಯ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ರಾಹುಲ್‌ ಗಾಂಧಿಯವರು ಅರ್ಚಕರ ಬಳಿ “ಛೋಟಾ ಟಿಕಾ ಲಗಾನಾ” (ಸಣ್ಣ ತಿಲಕ ಹಾಕಿ) ಎಂದು ಹೇಳುವುದನ್ನು ಕೇಳಬಹುದು. ಇದೀಗ ಬಿಜೆಪಿ ನಾಯಕರು ವೀಡಿಯೋ ಶೇರ್‌ ಮಾಡಿಕೊಂಡು “ಚುನಾವಿ ಹಿಂದೂ” ಎಂದು ವಾಗ್ದಾಳಿ ನಡೆಸುತ್ತಿದ್ದಾರೆ. ಈ ಮೂಲಕ ರಾಹುಲ್ ಗಾಂಧಿ ಚುನಾವಣಾ ಸಮಯದಲ್ಲಿ ಮಾತ್ರ ಹಿಂದೂ ಧರ್ಮವನ್ನು ಆಚರಿಸುತ್ತಾರೆ ಎಂದು ಬಿಜೆಪಿಯವರು ಆರೋಪಿಸಿದ್ದಾರೆ. ಇದನ್ನೂ ಓದಿ: ರಾಜಕೀಯ ಸ್ವಾರ್ಥಕ್ಕಾಗಿ ದೇಶ ಒಡೆಯುವ ಮಾತು, ರಾಷ್ಟ್ರವೆಂದರೆ ಕೇವಲ ಒಂದು ತುಂಡು ಭೂಮಿ ಅಲ್ಲ: ಡಿಕೆ ಸುರೇಶ್‌ ಹೇಳಿಕೆ ವಿರುದ್ಧ ಮೋದಿ ಕಿಡಿ

ಈ ವೀಡಿಯೋವನ್ನು ಶೇರ್‌ ಮಾಡಿಕೊಂಡಿರುವ ಮಾಜಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, “ಚುನಾವಣಾ ಹಿಂದೂ” ರಾಹುಲ್ ಗಾಂಧಿಯವರನ್ನು ಸರಿಯಾಗಿ ನೋಡಿ. ಅವರ ಕೋಪದ ಅಭಿವ್ಯಕ್ತಿ ಹಾಗೂ ಅವರಿಗೆ ಹಿಂದೂ ಧರ್ಮದ ಮೇಲೆ ಇರುವ ದ್ವೇಷವನ್ನು ಕಾಣಬಹುದು. ನೀವು ಹಿಂದೂಗಳನ್ನು ತುಂಬಾ ದ್ವೇಷಿಸುತ್ತಿದ್ದರೆ, ದೇವಾಲಯ ಪ್ರವಾಸೋದ್ಯಮದಲ್ಲಿ ಏಕೆ ತೊಡಗುತ್ತೀರಿ?, ಚುನಾವಣೆ ಹತ್ತಿರ ಬಂದಾಗ ಮಾತ್ರ ದೇವಸ್ಥಾನಗಳಿಗೆ ಏಕೆ ಹೋಗುತ್ತೀರಿ ಎಂದು ಪ್ರಶ್ನಿಸಿದ್ದಾರೆ.

Share This Article