ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಏರ್ಪಟ್ಟಿರುವ ಸಂಘರ್ಷವು ಭಾರತದ ಹಿತ್ತಲಿಗೆ (ಮನೆ ಆವರಣ) ತಲುಪಿದೆ. ಹಿಂದೂ ಮಹಾಸಾಗರದಲ್ಲಿ ಇರಾನಿನ ಯುದ್ಧನೌಕೆ (Iranian warship) ಮುಳುಗಿದೆ. ಆದ್ರೂ ಪ್ರಧಾನಿ ಏನನ್ನೂ ಹೇಳದೇ ಮೌನವಾಗಿದ್ದಾರೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಪ್ರಶ್ನೆ ಮಾಡಿದ್ದಾರೆ.
The world has entered a volatile phase. Stormy seas lie ahead.
India’s oil supplies are under threat, with more than 40% of our imports transiting the Strait of Hormuz. The situation is even worse for LPG and LNG.
The conflict has reached our backyard, with an Iranian warship…
— Rahul Gandhi (@RahulGandhi) March 5, 2026
ಹಿಂದೂ ಮಹಾಸಾಗರದಲ್ಲಿ (Indian Ocean) ಅಮೆರಿಕದ ಜಲಾಂತರ್ಗಾಮಿ ನೌಕೆ ನಡೆಸಿದ ದಾಳಿಗೆ ಇರಾನ್ ಯುದ್ಧನೌಕೆ ಮುಳುಗಿ 87 ಜನರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ರಾಹುಲ್ ಗಾಂಧಿ, ಕೇಂದ್ರ ಸರ್ಕಾರದ ನಡೆಯನ್ನ ಖಂಡಿಸಿದ್ದಾರೆ. ಇದನ್ನೂ ಓದಿ: ಆತಂಕದಲ್ಲಿದ್ದ ಭಾರತಕ್ಕೆ ರಷ್ಯಾ ಆಪತ್ಭಾಂದವ – ಈ ವಾರವೇ 22 ಕೋಟಿ ಲೀಟರ್ ತೈಲ ಪೂರೈಕೆ
ʻಜಗತ್ತು ಅಸ್ಥಿರ ಹಂತ ತಲುಪಿದೆ, ಸಮುದ್ರದ ಬಿರುಗಾಳಿ ನಮ್ಮ ಮುಂದಿದೆ. ಭಾರತದ ತೈಲ (Indian Oil) ಸರಬರಾಜಿನ ಸ್ಥಿತಿ ಅಪಾಯದಲ್ಲಿದೆ. ಏಕೆಂದ್ರೆ ನಮ್ಮ ಆಮದುಗಳಲ್ಲಿ 40% ಗಿಂತಲೂ ಹೆಚ್ಚು ಹಾರ್ಮುಜ್ ಜಲಸಂಧಿಯ ಮೂಲಕವೇ ಸಾಗುತ್ತವೆ. ಎಲ್‌ಪಿಜಿ, ಎಲ್‌ಎನ್‌ಜಿ ಪರಿಸ್ಥಿತಿಯಂತೂ ಇನ್ನೂ ಕೆಟ್ಟದಾಗಿದೆ. ಅಷ್ಟೇ ಅಲ್ಲ ಸಂಘರ್ಷವು ಈಗಾಗಲೇ ನಮ್ಮ ಮನೆ ಹಿತ್ತಲು ತಲುಪಿದೆ. ಇರಾನ್ ಯುದ್ಧನೌಕೆ ಹಿಂದೂ ಮಹಾಸಾಗರದಲ್ಲಿ ಮುಳಿದ್ರೂ ಪ್ರಧಾನಿ ಏನನ್ನೂ ಹೇಳಿಲ್ಲ. ಇಂತಹ ಕ್ಷಣದಲ್ಲಿ ನಮಗೆ ಚಕ್ರದಲ್ಲಿ ಬಲವಾದ ಕೈ ಬೇಕು. ಆದ್ರೆ ಭಾರತವು ಭಾರತವು ನಮ್ಮ ಕಾರ್ಯತಂತ್ರದ ಸ್ವಾಯತ್ತತೆಯನ್ನ ಬಿಟ್ಟುಕೊಟ್ಟ ಹಾಗೂ ರಾಜಿ ಮಾಡಿಕೊಂಡ ಪ್ರಧಾನಿಯನ್ನ ಹೊಂದಿದೆ ಎಂದು ಮೋದಿ ವಿರುದ್ಧ ಆಕ್ಷೇಪ ಹೊರಹಾಕಿದ್ದಾರೆ.
ಹಿಂದೂ ಮಹಾಸಾಗರದಲ್ಲಿ ಏನಾಗಿತ್ತು?
ಹಿಂದೂ ಮಹಾಸಾಗರದಲ್ಲಿ ಅಮೆರಿಕದ ಜಲಾಂತರ್ಗಾಮಿ ನೌಕೆ ನಡೆಸಿದ ದಾಳಿಗೆ ಇರಾನ್ ಯುದ್ಧನೌಕೆ ಮುಳುಗಿ 87 ಜನರು ಸಾವನ್ನಪ್ಪಿದ್ರು. ಇದನ್ನೂ ಓದಿ: ಇರಾನ್‌ಗೆ ನಾಯಕರಾಗಲು ಬಯಸುವ ಪ್ರತಿಯೊಬ್ಬರೂ ಸಾಯ್ತಾರೆ – ಟ್ರಂಪ್ ಮಾರ್ಮಿಕ ಸಂದೇಶ
ಐರಿಸ್ ದೇನಾ ಎಂಬ ಯುದ್ಧನೌಕೆ ಕೆಲವೇ ವಾರಗಳ ಹಿಂದೆ ಭಾರತದಲ್ಲಿ ನೌಕಾ ಸಮರಾಭ್ಯಾಸದಲ್ಲಿ ಭಾಗವಹಿಸಿತ್ತು. ಮೌಡ್ಜ್ ಕ್ಲಾಸ್ ಫ್ರಿಗೇಟ್ ಆಗಿರುವ ಐರಿಸ್ ದೇನಾ 2024 ರಲ್ಲಿ ಭಾರತಕ್ಕೆ ಬಂದಿದ್ದು, ಬಹುಪಕ್ಷೀಯ ನೌಕಾ ಅಭ್ಯಾಸ ಮಿಲನ್‌ನಲ್ಲಿ ಭಾಗವಹಿಸಿತ್ತು.


