ಜೈಪುರ: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಆರ್ಥಿಕತೆಯನ್ನು ನಾಶಪಡಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕಿಡಿಕಾರಿದರು.
ರ‍್ಯಾಲಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಹಾಗೂ ಮೋದಿ ಅವರು ಎರಡು ಭಾರತವನ್ನಾಗಿ ರಚಿಸಲು ಬಯಸಿದ್ದಾರೆ. ಅದರಲ್ಲಿ ಒಂದು ಶ್ರೀಮಂತ ಹಾಗೂ ಕೈಗಾರಿಕೋದ್ಯಮಿಗಳಿಗಾದರೆ, ಮತ್ತೊಂದು ದಲಿತರು ಬಡವರು ಮತ್ತು ಹಿಂದುಳಿದ ವರ್ಗಗಳಿಗಾಗಿದೆ ಎಂದು ಕಿಡಿಕಾರಿದರು.
ಕೇಂದ್ರದ ಆಡಳಿತಾರೂಢ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಿಜೆಪಿ ಎರಡು ಹಿಂದೂಸ್ಥಾನಗಳನ್ನು ರಚಿಸಲು ಬಯಸುತ್ತದೆ. ಆದರೆ ಕಾಂಗ್ರೆಸ್ ಸೇರಿದಂತೆ ದೇಶದ ಜನರಿಗೆ ಒಂದು ಹಿಂದೂಸ್ಥಾನ ಬೇಕು. ಈ ಹಿನ್ನೆಲೆಯಲ್ಲಿ ಇಡೀ ದೇಶವೇ ಹೋರಾಟ ಮಾಡಬೇಕು ಎಂದರು. ಇದನ್ನೂ ಓದಿ: ಅಶ್ವತ್ಥನಾರಾಯಣ ಪ್ರಯೋಗ ಫೇಲ್ಯೂರ್ – ಹೈಕಮಾಂಡ್ ಅಸಮಾಧಾನದಿಂದ ಏಕಾಂಗಿಯಾದ ಸಚಿವ
ದೇಶದ ಆರ್ಥಿಕ ಸ್ಥಿತಿ ಹಾಗೂ ನಿರುದ್ಯೋಗ ಸಮಸ್ಯೆಗಳ ಕುರಿತು ಕಿಡಿಕಾರಿದ ಅವರು, ಬಿಜೆಪಿ ಸರ್ಕಾರ ಆರ್ಥಿಕತೆಯ ಮೇಲೆ ದಾಳಿ ಮಾಡಿದೆ. ಪ್ರಧಾನಿ ಮೋದಿ ಅವರು ನೋಟು ಅಮಾನೀಕರಣ ಮಾಡಿದರು. ಇದರಿಂದಾಗಿ ಆರ್ಥಿಕತೆ ನಾಶವಾಯಿತು. ಯುಪಿಎ ಆರ್ಥಿಕತೆಯನ್ನು ಬಲ ಪಡಿಸಲು ಕೆಲಸ ಮಾಡಿತ್ತು. ಆದರೆ ಮೋದಿ ಆರ್ಥಿಕತೆಗೆ ಹಾನಿಯನ್ನುಂಟು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಪತ್ನಿ ಜೊತೆ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ ಡಿಕೆಶಿ