ರಸ್ತೆ ಬದಿ ಹೋಟೆಲ್ ನಲ್ಲಿ ಮಿರ್ಚಿ ಬಜ್ಜಿ ತಿಂದು ಟೀ ಕುಡಿದ ರಾಹುಲ್ ಗಾಂಧಿ

Public TV
1 Min Read

ರಾಯಚೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಯಚೂರು ತಾಲೂಕಿನ ಕಲ್ಮಲಾ ಗ್ರಾಮದಲ್ಲಿನ ರಸ್ತೆ ಪಕ್ಕದಲ್ಲಿನ ಹೋಟಲ್ ನಲ್ಲಿ ಉತ್ತರ ಕರ್ನಾಟಕದ ಜನಪ್ರಿಯ ಖಾದ್ಯ ಮಿರ್ಚಿ ಬಜ್ಜಿ, ಗಿರ್ಮಿಟ್ ರುಚಿಯನ್ನು ಸವಿದಿದ್ದಾರೆ.

ರಾಹುಲ್ ಗಾಂಧಿ ಜೊತೆ ಸಚಿವರು ಮತ್ತು ಮುಖಂಡರೆಲ್ಲಾ ಮಿರ್ಚಿ ಬಜ್ಜಿ, ಗಿರ್ಮಿಟ್ ಸವಿದರು. ಮೌಲಾ ಸಾಬ್ ಎಂಬವರ ಹೋಟೆಲ್ ನಲ್ಲಿ ಮಿರ್ಚಿ ಬಜ್ಜಿ ಸವಿದ ಬಳಿಕ, ರಾಹುಲ್ ಗಾಂಧಿ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದರು.

ಮಿರ್ಚಿ ಬಜ್ಜಿ ಸವಿದ ಬಳಿಕ ರಾಹುಲ್ ಗಾಂಧಿ ಬಳಿ ಹಣವಿಲ್ಲದ ಕಾರಣ ಪಕ್ಕದಲ್ಲಿಯೇ ಕುಳಿತಿದ್ದ ಡಿಕೆ ಶಿವಕುಮಾರ್ ರಾಹುಲ್ ಜೇಬಿಗೆ 2 ಸಾವಿರ ರೂ. ನೋಟನ್ನು ಇಟ್ಟರು. ರಾಹುಲ್ ಗಾಂಧಿ ಹೋಟೆಲ್ ಮಾಲೀಕರಿಗೆ ಹಣ ನೀಡಲು ಮುಂದಾದ್ರೂ ಸ್ವೀಕರಿಸಲಿಲ್ಲ.

Share This Article
Leave a Comment

Leave a Reply

Your email address will not be published. Required fields are marked *