ರಾಹುಲ್‌ ಗಾಂಧಿ ಎಳೆ ಮಕ್ಕಳ ರೀತಿ ವರ್ತಿಸುತ್ತಿದ್ದಾರೆ: ಕೇಂದ್ರ ಸಚಿವ ಸೋಮಣ್ಣ ಕಿಡಿ

Public TV
1 Min Read

ನವದೆಹಲಿ: ರಾಹುಲ್‌ ಗಾಂಧಿ ರಾಷ್ಟ್ರೀಯ ಪಕ್ಷದ ನಾಯಕ. ಆದರೆ, ಎಳೆ ಮಕ್ಕಳ ರೀತಿ ವರ್ತಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಕಿಡಿಕಾರಿದ್ದಾರೆ.

ನವದೆಹಲಿಯಲ್ಲಿ ಮಾತನಾಡಿದ ಅವರು, ಇತಿಹಾಸ ಇರುವ ಕುಟುಂಬ ಅಂತಾ ಏನೇನೋ ಮಾಡಲು ಸಾಧ್ಯವಿಲ್ಲ. ಜನರು ಅದನ್ನು ಒಪ್ಪುವುದಿಲ್ಲ. ಸಂವಿಧಾನ ಮುಖ್ಯ ಎನ್ನುವುದಕ್ಕೆ ಎರಡು ದಿನ ಚರ್ಚೆಗೆ ಅವಕಾಶ ಮಾಡಿಕೊಡಲಾಗಿತ್ತು ಎಂದು ಕಾಂಗ್ರೆಸ್‌ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಅಮಿತ್ ಶಾ ಅವರ ಹೇಳಿಕೆಯನ್ನು ತಿರುಚುವ ಕೆಲಸ ಮಾಡಿದೆ. ಅಂಬೇಡ್ಕರ್ ಅವರ ಜೊತೆಗೆ ಕಾಂಗ್ರೆಸ್ ಹೇಗೆ ನಡೆದುಕೊಂಡಿತ್ತು ಎಂದು ಎಲ್ಲರಿಗೂ ಗೊತ್ತಿದೆ. ಅಂಬೇಡ್ಕರ್ ಅವರನ್ನು ಹೀಯಾಳಿಸುವ ಕೆಲಸ ಆಗಿಲ್ಲ. ಬಿಜೆಪಿ ಅಪಾರವಾದ ಗೌರವ ಇಟ್ಟುಕೊಂಡಿದೆ ಎಂದು ಕೇಂದ್ರ ಗೃಹ ಸಚಿವರನ್ನು ಸಮರ್ಥಿಸಿಕೊಂಡಿದ್ದಾರೆ.

ಸಿದ್ದಗಂಗಾ ಮಠಕ್ಕೆ ವಿದ್ಯುತ್‌ ಬಿಲ್‌ ಕುರಿತು ಮಾತನಾಡಿ, ಮಠದಲ್ಲಿ 14,000 ಮಕ್ಕಳು ಓದುತ್ತಿದ್ದಾರೆ. ಈ ರೀತಿಯ ಘಟನೆ ನಡೆಯಬಾರದು. ನಾನು ಅಲ್ಲೇ ಹೋಗ್ತಿದ್ದೀನಿ, ನೋಡ್ತೀನಿ ಎಂದು ತಿಳಿಸಿದ್ದಾರೆ.

Share This Article