ಆರ್‌ಜೆಡಿ ಸೋಲಿಸೋಕೆ ರಾಹುಲ್ ಗಾಂಧಿ ಒಬ್ಬರೇ ಸಾಕು: ನಿಖಿಲ್ ಕುಮಾರಸ್ವಾಮಿ

Public TV
1 Min Read

ಬೆಂಗಳೂರು: ಬಿಹಾರದಲ್ಲಿ (Bihar) ಆರ್‌ಜೆಡಿಯನ್ನು (RJD) ಸೋಲಿಸೋಕೆ ರಾಹುಲ್ ಗಾಂಧಿ (Rahul Gandhi) ಒಬ್ಬರೇ ಸಾಕು ಎಂದು ರಾಜ್ಯ ಜೆಡಿಎಸ್ ಯುವಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಲೇವಡಿ ಮಾಡಿದ್ದಾರೆ.

ಬಿಹಾರದಲ್ಲಿ ಕಾಂಗ್ರೆಸ್ (Congress) ಸೋಲುಂಡ ಬೆನ್ನಲ್ಲೇ ಎಕ್ಸ್ (X) ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಬಿಹಾರ ಚುನಾವಣೆಯಲ್ಲಿ ಆರ್‌ಜೆಡಿ ಜೊತೆ ಕೈಜೋಡಿಸಿರುವ ರಾಹುಲ್ ಗಾಂಧಿಯವರೊಬ್ಬರೇ ಸಾಕು ಆರ್‌ಜೆಡಿಯನ್ನು ಸೋಲಿಸಬಹುದು ಎಂದು ತಮ್ಮ ಹಿಂದಿನ ಹೇಳಿಕೆಯ ವಿಡಿಯೋವನ್ನು ಹಾಕಿ, ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಮಹಿಳೆಯರಿಗೆ 10,000 ಗ್ಯಾರಂಟಿಯೇ ಗೇಮ್‌ ಚೇಂಜರ್‌ – 10ನೇ ಬಾರಿಗೆ ಸಿಎಂ ಪಟ್ಟದ ಮೇಲೆ ನಿತೀಶ್‌ ಕಣ್ಣು!

ರಾಹುಲ್ ಗಾಂಧಿಯವರ ಈ ವೋಟ್ ಚೋರಿ ಯಾತ್ರೆಯು ಅವರ ಮಿತ್ರಪಕ್ಷಗಳಿಗೆ ಅಂತ್ಯಕ್ರಿಯೆಯ ಮೆರವಣಿಗೆಯಾಗಿ ಪರಿಣಮಿಸಿತು. ನಿಜವಾಗಿ ಮತದ ಅಧಿಕಾರವಿರುವುದು ಜನರಿಗೆ, ಅವರು ತಮ್ಮ ಅಧಿಕಾರವನ್ನು ಬುದ್ಧಿವಂತಿಕೆಯಿಂದ ಚಲಾಯಿಸುತ್ತಾರೆ. ಇದೀಗ ಬಿಹಾರದ ಬೆಳವಣಿಗೆ ಹಾಗೂ ಉತ್ತಮ ಆಡಳಿತಕ್ಕಾಗಿ ಮತ ಚಲಾಯಿಸಿದ್ದಾರೆ ಎಂದು ತಿಳಿಸಿದ್ದಾರೆ.

ಬಿಹಾರದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಪ್ರಧಾನಿ ಮೋದಿ, ನಿತೀಶ್ ಕುಮಾರ್, ಅಮಿತ್ ಶಾ ಅವರಿಗೆ ಹಾಗೂ ಎನ್‌ಡಿಎ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದ್ದಾರೆ.ಇದನ್ನೂ ಓದಿ: ಮುಸ್ಲಿಮರು ಹೆಚ್ಚಿರುವ ಕ್ಷೇತ್ರಗಳಲ್ಲಿ ಬಿಜೆಪಿಗೆ ಭಾರೀ ಮುನ್ನಡೆ!

Share This Article