‘ಜಟ್ಟ’ ಖ್ಯಾತಿಯ ನಿರ್ದೇಶಕನ ಹೊಸ ಚಿತ್ರಕ್ಕೆ ರಾಗಿಣಿ ನಾಯಕಿ

Public TV
1 Min Read

ಗಿರೀಶ್ ವಿ ಗೌಡ ಸಾರಥ್ಯದಲ್ಲಿ, ರಾಮಕೃಷ್ಣ ನಿಗಾಡಿ ಅವರ ನಿರ್ಮಾಣದಲ್ಲಿ ಹಾಗೂ ಜಟ್ಟ,  ಮೈತ್ರಿ ಚಿತ್ರಗಳ ಖ್ಯಾತಿಯ ಬಿ.ಎಂ.ಗಿರಿರಾಜ್ ನಿರ್ದೇಶನದಲ್ಲಿ ನೂತನ ಚಿತ್ರವೊಂದು ಸದ್ಯದಲ್ಲೇ ಆರಂಭವಾಗಲಿದೆ. ರಾಗಿಣಿ ದ್ವಿವೇದಿ ಈ ಚಿತ್ರದ ನಾಯಕಿಯಾಗಿ ನಟಿಸಲಿದ್ದಾರೆ. ಇತ್ತೀಚಿಗೆ ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಯಿತು.

ರಾಷ್ಟ್ರಪ್ರಶಸ್ತಿ ವಿಜೇತ ಹರಿವು ಚಿತ್ರದಿಂದ ನನ್ನ ಸಿನಿ ಜರ್ನಿ ಆರಂಭವಾಯಿತು ಎಂದು ಮಾತನಾಡಿದ ಗಿರೀಶ್ ವಿ ಗೌಡ, ಹತ್ತು ವರ್ಷಗಳಿಂದ ರಾಗಿಣಿ ಅವರ ಜೊತೆಗೆ ಚಿತ್ರ ನಿರ್ಮಾಣ ಮಾಡಬೇಕೆಂದು ಪ್ರಯತ್ನಿಸುತ್ತಿದ್ದೆ. ಈಗ ಕಾಲ ಕೂಡಿ ಬಂದಿದೆ. ನಿರ್ದೇಶಕ ಬಿ.ಎಂ.ಗಿರಿರಾಜ್ ಒಳ್ಳೆ ಕಥೆ ಮಾಡಿಕೊಂಡಿದ್ದಾರೆ.  ಹಿಂದೆ ಹೊಂಬಣ್ಣ ಚಿತ್ರ ನಿರ್ಮಿಸಿದ್ದ ರಾಮಕೃಷ್ಣ ನಿಗಾಡಿ ಅವರು ಸಂಚಲನ ಮೂವೀಸ್ ಮೂಲಕ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಇಂದು ಫಸ್ಟ್ ಲುಕ್ ಬಿಡುಗಡೆಯಾಗಿದೆ‌ ಎಂದರು.

ಕೌಂಡಿನ್ಯ ಅವರು ನನ್ನ ನೆಚ್ಚಿನ ಲೇಖಕರು. ಅವರ ಕಥೆಗಳಿಂದ ಪ್ರೇರಿತನಾಗಿ ಈ ಚಿತ್ರದ ಕಥೆ ಸಿದ್ದ ಮಾಡಿದ್ದೇನೆ. ರಾಗಿಣಿ ಅವರ ಜೊತೆ ಇದು ನನ್ನ ಮೊದಲ ಸಿನಿಮಾ ಎಂದರು ನಿರ್ದೇಶಕ ಬಿ.ಎಂ.ಗಿರಿರಾಜ್. ಫಸ್ಟ್ ಲುಕ್ ಸಖತಾಗಿದೆ‌. ಅದಕ್ಕಿಂತ ಚಿತ್ರದ ಶೀರ್ಷಿಕೆ ಹಾಗೂ ಕಥೆ ಇನ್ನೂ ಚೆನ್ನಾಗಿದೆ. ಸದ್ಯದಲ್ಲೇ ಶೀರ್ಷಿಕೆ ಅನಾವರಣವಾಗಲಿದೆ. ಗಿರೀಶ್ ವಿ ಗೌಡ ಅವರಿಗೆ ಧನ್ಯವಾದಗಳು ಎಂದರು ನಾಯಕಿ ರಾಗಿಣಿ ದ್ವಿವೇದಿ.

ಅರುಣ್ ಗುರೂಜಿ, ಭಾಸ್ಕರ್ ಗುರೂಜಿ , ಮೋಕ್ಷಗುಂಡಂ ಗುರೂಜಿ ಹಾಗೂ ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ಅವರು ನೂತನ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿ ಶುಭ ಕೋರಿದರು.

Share This Article