ಸ್ಯಾಂಡಲ್‌ವುಡ್‌ನಲ್ಲಿ ಬಿಗ್ ಬಜೆಟ್ ಸಿನಿಮಾಗಳನ್ನ ನಿರ್ಮಾಣ ಮಾಡುವುದರಲ್ಲಿ ಖ್ಯಾತಿ ಪಡೆದಿರುವ ಹೊಂಬಾಳೆ ಫಿಲ್ಮ್ಸ್ ಈಗ ಮತ್ತೊಂದು ಚಿತ್ರಕ್ಕೆ ಚಾಲನೆ ಕೊಡಲು ಸಜ್ಜಾಗಿದೆ. ಇದು ಈ ಬ್ಯಾನರ್ ನ 12ನೇ ಸಿನಿಮಾವಾಗಿದೆ.
ಹೊಂಬಾಳೆ ಫಿಲ್ಮ್ಸ್ ನ ವಿಜಯ್ ಕಿರಗಂದೂರು ಅವರು ತಮ್ಮ ಬ್ಯಾನರ್ ನ 12ನೇ ಚಿತ್ರವನ್ನು ಇಂದು ಘೋಷಣೆ ಮಾಡಿದ್ದು, ಚಿತ್ರಕ್ಕೆ ರಾಘವೇಂದ್ರ ಸ್ಟೋರ್ ಎಂದು ಹೆಸರಿಟ್ಟಿದ್ದಾರೆ. ಈ ಚಿತ್ರಕ್ಕೆ ಸಂತೋಷ್ ಆನಂದ್ ರಾಮ್ ನಿರ್ದೇಶನವಿದ್ದು, ನವರಸ ನಾಯಕ ಜಗ್ಗೇಶ್ ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ.
ಅನ್ನದಾತೋ ಸುಖೀಭವ
We present our next, #RaghavendraStoresDirected by @SanthoshAnand15 and starring @Jaggesh2, Cooking Starts from November 22nd.@hombalefilms @VKiragandur @HombaleGroup @RgvndraStores #Hombale12 pic.twitter.com/gG4bWHfnVD
— Hombale Films (@hombalefilms) September 22, 2021
ಈ ಸಿನಿಮಾ ಫಸ್ಟ್ ಲುಕ್ ಹೊಂಬಾಳೆ ಫಿಲ್ಮ್ಸ್ ಕೂ ಹಾಗೂ ಪ್ರಮುಖ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಫಸ್ಟ್ ಲುಕ್ ಪೋಸ್ಟರ್ ಗಮನಿಸಿದರೆ ಇದೊಂದು ಹೋಟೆಲ್ ಕುರಿತಾದ ಕಥೆ ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಇದನ್ನೂ ಓದಿ: ಪಿವಿ ಸಿಂಧು ಜೊತೆ ಬ್ಯಾಡ್ಮಿಂಟನ್ ಆಡಿದ ದೀಪಿಕಾ ಪಡುಕೋಣೆ
ಸಾಲು ಸಾಲು ಚಿತ್ರ ಘೋಷಿಸಿರುವ ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ ಮೊದಲ ಚಿತ್ರ ‘ನಿನ್ನಿಂದಲೇ’. 2014ರಲ್ಲಿ ಪುನೀತ್ ರಾಜ್‌ಕುಮಾರ್ ನಟನೆಯ ‘ನಿನ್ನಿಂದಲೇ’ ಚಿತ್ರ ತೆರೆಗೆ ಬಂದಿತ್ತು. ಬಳಿಕ ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಮಾಸ್ಟರ್ ಪೀಸ್’ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿತ್ತು.
2017ರಲ್ಲಿ ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ ‘ರಾಜಕುಮಾರ’ ಚಿತ್ರ ಸೂಪರ್ ಡ್ಯೂಪರ್ ಹಿಟ್ ಆಯ್ತು. ಕನ್ನಡ ಚಿತ್ರರಂಗದಲ್ಲೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರಗಳ ಪೈಕಿ ‘ರಾಜಕುಮಾರ’ ಚಿತ್ರವೂ ಒಂದು ಎನಿಸಿಕೊಂಡಿತು.