ಆಟೋ ಚಾಲಕಿಯರ ಬ್ಯಾಂಕ್ ಸಾಲ ತೀರಿಸಿದ ‘ಚಂದ್ರಮುಖಿ 2’ ಹೀರೋ

By
1 Min Read

ಸೌತ್ ನಟ ರಾಘವ್ ಲಾರೆನ್ಸ್ (Raghava Lawrence) ಅವರು ಸಿನಿಮಾರಂಗದಲ್ಲಿ ಮಾತ್ರವಲ್ಲ ಸಮಾಜಮುಖಿ ಕೆಲಸ ಮಾಡುವ ಮೂಲಕ ಗುರುತಿಸಿಕೊಂಡಿದ್ದಾರೆ. ಇದೀಗ ರಾಘವ್, ಆಟೋ ಚಾಲಕಿಯರ ಬ್ಯಾಂಕ್ ಸಾಲ ತೀರಿಸುವ ಮೂಲಕ ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದಾರೆ.‌ ಇದನ್ನೂ ಓದಿ:ನಟ ಸಲ್ಮಾನ್ ಖಾನ್ ಪ್ರಕರಣ: ಜೈಲಿನಲ್ಲಿನ ಆತ್ಮಹತ್ಯೆ ಕೇಸ್ ಅನ್ನು ಸಿಬಿಐ ತನಿಗೆ ಮನವಿ

ಕೆಲ ದಿನಗಳ ಹಿಂದೆ ನಟ ರಾಘವ್ ಬಳಿ ಆಟೋ ಚಾಲಕಿಯರು ತಮ್ಮ ದುಡಿಮೆಯ ಬಹುಪಾಲು ಹಣ ಆಟೋ ಕೊಳ್ಳಲು ತೆಗೆದುಕೊಂಡಿದ್ದ ಸಾಲ ಮರುಪಾವತಿಗೆ ಖರ್ಚಾಗುತ್ತಿರುವುದಾಗಿ ಹೇಳಿಕೊಂಡಿದ್ದರು. ಹಾಗಾಗಿ ಇದೀಗ ರಾಘವ್ ಮತ್ತು ಸ್ನೇಹಿತ ಬಾಲ ಸೇರಿಕೊಂಡು 10 ಆಟೋ ಚಾಲಕಿಯರ ಬ್ಯಾಂಕ್ ಸಾಲವನ್ನು ತೀರಿಸಿದ್ದಾರೆ. ಆ ಮೂಲಕ ದುಡಿದ ಹಣ ಅವರ ಬಳಿಯೇ ಉಳಿಯುವಂತೆ ಮಾಡಿದ್ದಾರೆ.

ಸಾಲ ತೀರಿಸಿದ ದಾಖಲೆ ಸಮೇತ ಅವರಿಗೆ ಉಡುಗೊರೆಯಾಗಿ ರಾಘವ್ ಲಾರೆನ್ಸ್ ಹಾಗೂ ಬಾಲ ನೀಡಿದ್ದಾರೆ. ರಾಘವ್ ತಮಗೆ ಮಾಡಿದ ಸಹಾಯಕ್ಕೆ ಮಹಿಳೆಯರು ಖುಷಿಯಿಂದ ಕಣ್ಣೀರು ಹಾಕಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ಇದೀಗ ವೈರಲ್ ಆಗಿದೆ.

ಇತ್ತೀಚೆಗೆ ರಾಘವ್, ರೈತರಿಗೆ 10 ಟ್ರ್ಯಾಕ್ಟರ್ ನೀಡಿದ್ದರು. ಈ ಮೂಲಕ ರೈತರಿಗೆ ನಟ ನೆರವಾಗಿದ್ದರು. ರಾಘವ್ ನಡೆಗೆ ಅಭಿಮಾನಿಗಳಿಂದ ಶ್ಲಾಘನೆ ವ್ಯಕ್ತವಾಗಿತ್ತು.

Share This Article